Friday, December 19, 2025
Friday, December 19, 2025

Chikmagalur Institute of Medical Sciences ಚಿಕ್ಕಮಗಳೂರು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ ಖರೀದಿಸಿರುವ ಔಷಧಿ ಟೆಂಡರ್ ಬಗ್ಗೆ ಪರಿಶೀಲಿಸಲು ತಜ್ಞರ ಸಮಿತಿ ರಚನೆ : ಸಚಿವ ಡಾ.ಶರಣಪ್ರಕಾಶ ಪಾಟೀಲ್

Date:

Chikmagalur Institute of Medical Sciences ಚಿಕ್ಕಮಗಳೂರು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ ಖರೀದಿಸಿರುವ ಔಷಧಿ ಟೆಂಡರ್ ಬಗ್ಗೆ ಪರಿಶೀಲಿಸಲು ತಜ್ಞರ ಸಮಿತಿ ರಚಿಸಲಾಗುವುದು. ಸದರಿ ಸಮಿತಿ ನೀಡುವ ವರದಿ ಆಧರಿಸಿ ಮುಂದಿನ ಕ್ರಮವಹಿಸಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ. ಉದ್ಯಮಶೀಲತೆ ಮತ್ತು ಜೀವನೋಪಾಯ ಸಚಿವ ಡಾ: ಶರಣಪ್ರಕಾಶ ಆರ್.ಪಾಟೀಲ ತಿಳಿಸಿದರು.

ಅವರು ವಿಧಾನ ಪರಿಷತ್ ನಲ್ಲಿ ಶಾಸಕರಾದ ಸಿ.ಟಿ.ರವಿ, ಭಾರತಿ ಶೆಟ್ಟಿ, ಕೇಶವ ಪ್ರಸಾದ್, ಪ್ರತಾಪ್ ಸಿಂಹ ನಾಯಕ್ ಹಾಗೂ ವಿರೋಧ ಪಕ್ಷದ ಮುಖ್ಯ ಸಚೇತಕ ಎನ್.ರವಿಕುಮಾರ್ ಅವರ ಗಮನ ಸೆಳೆಯುವ ಸೂಚನೆಗೆ ಉತ್ತರಿಸಿದರು.

ಕೊಡಗು, ಹಾವೇರಿ, ರಾಯಚೂರು ಮೆಡಿಕಲ್ ಕಾಲೇಜುಗಳಲ್ಲಿ ಕರೆದಿರುವ ಟೆಂಡರ್ ಮೊತ್ತಕ್ಕೂ ಚಿಕ್ಕಮಗಳೂರು ಮೆಡಿಕಲ್ ಕಾಲೇಜಿನಲ್ಲಿ ಕರೆದಿರುವ ಟೆಂಡರ್ ಮೊತ್ತಕ್ಕೂ ಔಷಧಗಳ ದರಗಳಲ್ಲಿ ವ್ಯತ್ಯಾಸ ಕಂಡು ಬಂದಿರುವ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ ಅವಶ್ಯವಿದ್ದ ರೂ.4.90 ಕೋಟಿ ಮೊತ್ತದ ಔಷಧಗಳ ಪೈಕಿ ತುರ್ತು ಅವಶ್ಯವಿದ್ದ ರೂ.36 ಲಕ್ಷ ಮೊತ್ತದ ಔಷಧಗಳ ಸರಬರಾಜನ್ನು ಮಾತ್ರ ಪಡೆದು, ಉಳಿದ ಔಷಧಗಳ ಸರಬರಾಜು ಪ್ರಕ್ರಿಯೆಯನ್ನು ತಡೆ ಹಿಡಿಯಲಾಗಿರುತ್ತದೆ. ಔಷಧಗಳ ದರಗಳು ಹೆಚ್ಚಳವಾಗಿರುವ ಬಗ್ಗೆ, ಮತ್ತೊಮ್ಮೆ ಸಮಗ್ರವಾಗಿ ಪರಿಶೀಲಿಸಲು ತಜ್ಞರ ಸಮಿತಿಯೊಂದನ್ನು ರಚಿಸಿ, ವರದಿ ಪಡೆದು, ಮುಂದಿನ ಅಗತ್ಯ ಕ್ರಮ ವಹಿಸಲಾಗುವುದು ಎಂದು ಅವರು ಸದನಕ್ಕೆ ವಿವರಿಸಿದರು.

ಚಿಕ್ಕಮಗಳೂರು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ ದಿನಾಂಕ:31-03-2025 ರವರೆಗೆ ಕೆ.ಎಸ್ .ಡಿ.ಎಲ್.ಎಸ್. ವತಿಯಿಂದ ಉಚಿತವಾಗಿ ಜೀವ ರಕ್ಷಕ ಔಷಧಗಳನ್ನು ಸರಬರಾಜು ಪಡೆಯಲಾಗುತ್ತಿದ್ದು, ಸದರಿ ಔಷಧಿಗಳನ್ನು ಹೊರತುಪಡಿಸಿ, ಅವಶ್ಯಕವಿರುವ 204 ಜೀವರಕ್ಷಕ ಔಷಧಿಗಳನ್ನು 2024-25ನೇ ಸಾಲಿಗೆ ಟೆಂಡರ್ ಮುಖೇನ ಖರೀದಿಸಲಾಗಿದ್ದು, ಜಿಲ್ಲಾ ಆಸ್ಪತ್ರೆಯು ವೈದ್ಯಕೀಯ ಶಿಕ್ಷಣ ಇಲಾಖೆಗೆ ಹಸ್ತಾಂತರಗೊಂಡ ನಂತರ 2025-26ನೇ ಸಾಲಿಗೆ 1 ವರ್ಷದ ಅವಧಿಗೆ ಜಾರಿಗೆ ಬರುವಂತೆ ಕ್ಲಿನಿಕಲ್ ವಿಭಾಗದ ಮುಖ್ಯಸ್ಥರುಗಳು ನೀಡಿರುವ ಬೇಡಿಕೆ ಪಟ್ಟಿಯಂತೆ ಅತ್ಯುತ್ತಮ ಗುಣಮಟ್ಟದ 416 ಜೀವ ರಕ್ಷಕ ಔಷಧಿಗಳನ್ನು ಪಡೆಯಲು ನಿಯಮಾನುಸಾರ ಟೆಂಡರ್ ಪ್ರಕ್ರಿಯೆಯನ್ನು ಕೈಗೊಳ್ಳಲಾಗಿರುತ್ತದೆ.

ಈ ಹಂತದಲ್ಲಿ, 2024-25ನೇ ಸಾಲಿನಲ್ಲಿ ಜಿಲ್ಲಾಸ್ಪತ್ರೆಗೆ ಟೆಂಡರ್ ಮೂಲಕ ಖರೀದಿ ಮಾಡಲಾದ ಔಷಧಗಳ ದರಗಳನ್ನು ವೈದ್ಯಕೀಯ ಸಂಸ್ಥೆಯಲ್ಲಿ ಪ್ರಸಕ್ತ ಟೆಂಡರ್ ಕರೆಯಲಾಗಿರುವ ಔಷಧಗಳ ದರಗಳೊಂದಿಗೆ ಹೋಲಿಕೆ ಮಾಡಲಾಗಿ ಕೆಲವೊಂದು ಔಷಧಗಳ ಬೆಲೆಯಲ್ಲಿ ಗಣನೀಯ ವ್ಯತ್ಯಾಸ ಕಂಡು ಬಂದಿರುತ್ತದೆ. ಹಾಗೆಯೆ, ಕೊಡಗು, ಹಾವೇರಿ ಮತ್ತು ರಾಯಚೂರು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗಳಲ್ಲಿ ಔಷಧಗಳನ್ನು ಟೆಂಡರ್ ಮೂಲಕ ಖರೀದಿಸಲಾಗುವ ದರಗಳನ್ನು ಪರಿಶೀಲಿಸಲಾಗಿ, ಕೆಲವೊಂದು ಔಷಧಗಳ ದರಗಳಲ್ಲಿ ಹೆಚ್ಚಳ ಕಂಡು ಬಂದಿರುತ್ತದೆ.

Chikmagalur Institute of Medical Sciences ಸಾಮಾನ್ಯವಾಗಿ, ವೈದ್ಯಕೀಯ ಕಾಲೇಜುಗಳ ಬೋಧಕ ಆಸ್ಪತ್ರೆಗಳಲ್ಲಿ ವಿವಿಧ ರೀತಿಯ ಹಾಸಿಗೆ ಸಾಮಥ್ರ್ಯವಿದ್ದು, ಆಯಾಯ ಸಂಸ್ಥೆಗಳು ಉಪಯೋಗಿಸುವ ಔಷಧ/ವಸ್ತುಗಳ ಬ್ರಾಂಡ್/ಕಂಪನಿ ಹಾಗೂ ಸಂಗ್ರಹಿಸುವ ಪ್ರಮಾಣ ಇತ್ಯಾದಿಗಳು ಒಂದು ಸಂಸ್ಥೆಗೂ ಮತ್ತೊಂದು ಸಂಸ್ಥೆಗೂ ವ್ಯತ್ಯಾಸವಾಗುವುದರಿಂದ ಎಲ್ಲಾ ವೈದ್ಯಕೀಯ ಸಂಸ್ಥೆಗಳು ಏಕರೂಪ ದರದಲ್ಲಿ ಔಷಧಗಳನ್ನು ಸಂಗ್ರಹಿಸಲು ಸಾಧ್ಯವಾಗುವುದಿಲ್ಲ. ಬದಲಿಗೆ, ಔಷಧಿ/ವಸ್ತುಗಳ ಪರಿಮಾಣ, ಗುಣಮಟ್ಟ, ಸಂಯೋಜನೆ (Composition) ಇತ್ಯಾದಿ ಆಧಾರದ ಮೇಲೆ ಸ್ವಾಯತ್ತ ವೈದ್ಯಕೀಯ ಸಂಸ್ಥೆಗಳಲ್ಲಿ ದರಗಳನ್ನು ನಿಗದಿಪಡಿಸಿ, ವಿವಿಧ ಸ್ಥಳಗಳಲ್ಲಿ ವಿವಿಧ ದರಗಳಲ್ಲಿ ಔಷಧಗಳನ್ನು ಖರೀದಿಸಲಾಗುತ್ತದೆ ಎಂದು ತಿಳಿಸಿದರು.


LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಡಿಸೆಂಬರ್ 20 ಮತ್ತು 21 ರಂದು ರೋಟರಿ ಡಿಸ್ಟ್ರಿಕ್ಟ್ ಮಲೆನಾಡು ಕ್ರೀಡೋತ್ಸವ

Rotary Club ಶಿವಮೊಗ್ಗ ನಗರವು ಬರುವ ಡಿಸೆಂಬರ್ 20 ಮತ್ತು 21...

Tiger and Lion Safari ಡಿ.23 ಮತ್ತು 30 ರ ಮಂಗಳವಾರದಂದು ತ್ಯಾವರೆಕೊಪ್ಪದ ಹುಲಿ-ಸಿಂಹಧಾಮ ವೀಕ್ಷಣೆಗೆ ಆಹ್ವಾನ

Tiger and Lion Safari ಕ್ರಿಸ್‌ಮಸ್ ರಜೆಯ ಹಿನ್ನಲೆಯಲ್ಲಿ ಸಾರ್ವಜನಿಕರು ಮೃಗಾಲಯ...

Karnataka State Road Safety Authority ಕರ್ನಾಟಕ ರಾಜ್ಯ ರಸ್ತೆ ಸುರಕ್ಷತಾ ಪ್ರಾಧಿಕಾರ ತಿದ್ದುಪಡಿ ವಿಧೇಯಕ ಅಂಗೀಕಾರ

Karnataka State Road Safety Authority ವಿಧಾನಸಭೆಯಿಂದ ಅಂಗೀಕೃತ ರೂಪದಲ್ಲಿರುವ ಕರ್ನಾಟಕ...