ಮಹಾರಾಷ್ಟ್ರ ರಾಜ್ಯವು ನೀರಾವರಿ ಯೋಜನೆಗಳಿಗೆ ಅಕ್ರಮವಾಗಿ ನೀರು ಬಳಕೆ ಮಾಡುತ್ತಿರುವುದಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ರಾಜ್ಯದ ಅಧಿಕಾರಿಗಳ ಪ್ರತ್ಯೇಕ ತಂಡ ರಚನೆ ಮಾಡಿ, ವರದಿ ಪಡೆಯಲಾಗುವುದು ಎಂದು ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ತಿಳಿಸಿದರು.
ಅವರು ವಿಧಾನ ಪರಿಷತ್ ನಲ್ಲಿ ಶಾಸಕ ಡಾ. ತಳವಾರ್ ಸಾಬಣ್ಣ ಅವರ ನಿಯಮ 33 ರ ಸೂಚನೆಗೆ ಉತ್ತರಿಸಿ ಮಾತನಾಡಿದರು.
ಕೃಷ್ಣ ಜಲವಿವಾದ ನ್ಯಾಯಾಧಿಕರಣ- 1 (ಬಚಾವತ್ ನ್ಯಾಯಾಧಿಕರಣ) 1976 ರಲ್ಲಿ ಅಂತಿಮ ತೀರ್ಪಿನ Clause-IX(A)(ii)(b) ಪ್ರಕಾರ ಮಹಾರಾಷ್ಟ್ರ ರಾಜ್ಯವು ಭೀಮಾ ನದಿಯಿಂದ 95 ಟಿಎಂಸಿಗಿಂತ ಹೆಚ್ಚಾಗಿ ನೀರನ್ನು ಬಳಸಬಾರದೆಂದು ಹಾಗೂ 3)(iii) ಪ್ರಕಾರ ಕರ್ನಾಟಕ ರಾಜ್ಯವು ಭೀಮಾ ಮುಖ್ಯ ನದಿಯಿಂದ 15 ಟಿಎಂಸಿಗಿಂತ ಹೆಚ್ಚು ಬಳಸಬಾರದೆಂದು ನಿಬರ್ಂಧವಿದೆ. ಸದರಿ ಅಂತಿಮ ತೀರ್ಪಿನಲ್ಲಿ ಕಣಿವೆ ಮಾಡಿರುವ ಒಟ್ಟಾರೆ ಹಂಚಿಕೆಯಲ್ಲಿ ಯಾವುದೇ ರಾಜ್ಯವು ಇನ್ನೊಂದು ರಾಜ್ಯಕ್ಕೆ ಬಿಡುಗಡೆ ಮಾಡುವ ಕುರಿತು ಆದೇಶವಿರುವುದಿಲ್ಲ.
ಜಲವಿವಾದ ನ್ಯಾಯಾಧಿಕರಣ-1 ವಿಧಿಸಿರುವ ನಿರ್ಬಂಧಕ್ಕೆ ಒಳಪಟ್ಟು ಕಣಿವ ಯೋಜನೆಗಳನ್ನು ಕೈಗೊಂಡಿರುತ್ತವೆ.
ಸೀನಾ ನದಿಯು ಮಹಾರಾಷ್ಟ್ರದ ಭೀಮಾ ನದಿಯ ಒಂದು ಉಪನದಿಯಾಗಿದೆ. ಕೃಷ್ಣ ಜಲವಿವಾದ ನ್ಯಾಯಾಧೀಕರಣ-॥ ರ ಮುಂದೆ ಮಹಾರಾಷ್ಟ್ರ ರಾಜ್ಯವು ಸಲ್ಲಿಸಿರುವ ಮಾಹಿತಿಯ ಪ್ರಕಾರ ಮಹಾರಾಷ್ಟ್ರ, ರಾಜ್ಯವು ಉಜ್ಜನಿ ಜಲಾಶಯದಿಂದ ನೀರನ್ನು ಸೀನಾ ನದಿಗೆ ತಿರುವುಗೊಳಿಸುತ್ತಿದೆ ಹಾಗೂ ಸದರಿ ಯೋಜನೆಯನ್ನು ಮಹಾರಾಷ್ಟ್ರ ರಾಜ್ಯಕ್ಕೆ ಮುಖ್ಯ ಭೀಮಾ ನದಿಯಲ್ಲಿ ನೀರನ್ನು ಬಳಸಲು ವಿಧಿಸಿರುವ ನಿಬರ್ಂಧದಡಿಯಲ್ಲಿ ಕೈಗೊಂಡಿರುವುದಾಗಿ ತಿಳಿದು ಬಂದಿದೆ.
ಕರ್ನಾಟಕ ರಾಜ್ಯವು ಕೃಷ್ಣ ಜಲವಿವಾದ ನ್ಯಾಯಾಧಿಕರಣ- 2 ರ ಮುಂದೆ ಭೀಮಾ ನದಿ ಉಪ ಕೊಳ್ಳದಲ್ಲಿನ ಬಳಕೆಗಾಗಿ 12 ಟಿ.ಎಂ.ಸಿ. ಹೆಚ್ಚುವರಿ ನೀರಿನ ಬೇಡಿಕೆಯನ್ನು ಮಂಡಿಸಿತ್ತು. ಆದರೆ ನ್ಯಾಯಾಧಿಕರಣವು ರಾಜ್ಯದ ಬೇಡಿಕೆಯನ್ನು ಪರಿಗಣಿಸಿರುವುದಿಲ್ಲ. ಕೃμÁ್ಣ ಜಲವಿವಾದ ನ್ಯಾಯಾಧಿಕರಣ-2 ರ ಆದೇಶದನ್ವಯ ಮಹಾರಾಷ್ಟ್ರ ರಾಜ್ಯವು 3 ಟಿ.ಎಂ.ಸಿ. ನೀರನ್ನು ನದಿಯಲ್ಲಿನ ಕನಿಷ್ಠ ಹರಿವಿಗಾಗಿ ಬಿಡುಗಡೆ ಮಾಡಬೇಕಾಗಿದ್ದು, ಇದರಲ್ಲಿ ವಾರ್ಷಿಕ (ಡಿಸೆಂಬರ್ ನಿಂದ ಮೇ ಅಂತ್ಯದವರೆಗೆ) ಭೀಮಾ ನದಿಯಲ್ಲಿ 1 ಟಿ.ಎಂ.ಸಿ. ನೀರನ್ನು ಮಹಾರಾಷ್ಟ್ರ ಕರ್ನಾಟಕ ಗಡಿ ಪ್ರದೇಶದ ತಾಕಳಿ ಮಾಪನ ಕೇಂದ್ರದಲ್ಲಿ ನದಿಯಲ್ಲಿನ ಕನಿಷ್ಠ ಹರಿವಿಗಾಗಿ ಹರಿಸಬೇಕೆಂದು ಸೂಚಿಸಲಾಗಿದೆ. ಈ ಪ್ರಮಾಣದ ನೀರನ್ನು ಇತರೆ ಉದ್ದೇಶಗಳಿಗೆ ಬಳಸಲು ರಾಜ್ಯಕ್ಕೆ ಅವಕಾಶವಿರುವುದಿಲ್ಲ. ಸದರಿ ಕೃಷ್ಣಜಲವಿವಾದ ನ್ಯಾಯಾಧಿಕರಣ-2 ರ ಆದೇಶವು ಗೆಜೆಟ್ ಪ್ರಕಟಣೆ ಆಗಬೇಕಾಗಿದೆ.
ಮಹಾರಾಷ್ಟ್ರ ರಾಜ್ಯವು ಕರ್ನಾಟಕ ರಾಜ್ಯಕ್ಕೆ ನಿಯಂತ್ರಿತ ಬಿಡುಗಡೆ (Regulated releases) ಮಾಡಲು ನ್ಯಾಯಮೂರ್ತಿ ಬಚಾವತ್ ರವರ ಆಯೋಗದ ವರದಿಯಲ್ಲಿ ಆದೇಶವಿರುವುದಿಲ್ಲ. ಹಾಗೂ ಕಣಿವೆ ರಾಜ್ಯಗಳು ಕುಡಿಯುವ ನೀರಿಗೆ ಹಾಗೂ ಕೈಗಾರಿಕೆಗಳಿಗೆ ಅಗತ್ಯವಿರುವ ನೀರನ್ನು ಹಂಚಿಕೆಯಾಗಿರುವ ಪ್ರಮಾಣದಲ್ಲೇ ಭರಿಸಬೇಕಾಗಿದೆ.
ಸಾಮಾನ್ಯ ವರ್ಷ (Normal Year) ಗಳಲ್ಲಿ ಭೀಮಾ ನದಿ ಪಾತ್ರದಡಿ ನೀರಿನ ಕೊರತೆ ಕಂಡುಬಂದಿರುವುದಿಲ್ಲ. ಕೊರತೆಯಾದ ಜಲ ವರ್ಷಗಳಲ್ಲಿ ಕುಡಿಯುವ ಹಾಗೂ ಇತರೆ ಅಗತ್ಯಗಳಿಗೆ ನೀರನ್ನು ಮಹಾರಾಷ್ಟ್ರ ರಾಜ್ಯದಿಂದ ಪಡೆಯಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಭೀಮಾ ನದಿ 786 ಕಿ.ಮೀ.ಗಳ ಒಟ್ಟು ಹರಿವಿನಲ್ಲಿ ಕರ್ನಾಟಕದಲ್ಲಿ 206 ಕಿ.ಮೀ. ಹರಿಯುವ ಭೀಮಾ ನದಿ ನೀರನ್ನು ನಂಬಿಕೊಂಡು 164 ಹಳ್ಳಿಗಳ ಜನರು ಬದುಕುತ್ತಿದ್ದಾರೆ. 1976ರಲ್ಲಿ ನ್ಯಾ.ಬಚಾವತ್ ಆಯೋಗದ ತೀರ್ಪಿನಂತೆ ಮಹಾರಾಷ್ಟ್ರಕ್ಕೆ 95 ಟಿಎಂಸಿ ಮತ್ತು ಕರ್ನಾಟಕ್ಕೆ 15 ಟಿಎಂಸಿ ನೀರು ಬಳಕೆ ಮಾಡಿಕೊಳ್ಳಬೇಕಿತ್ತು. ಮಹಾರಾಷ್ಟ್ರ ರಾಜ್ಯ ಭೀಮಾ ನದಿಯ ನೀರನ್ನು ಅಕ್ರಮವಾಗಿ ಸುರಂಗ ಮಾರ್ಗದ ಮೂಲಕ ಸೀನಾ ನದಿಗೆ ಸೇರಿಸಿಕೊಳ್ಳುವುದರ ಜೊತೆಗೆ ಅನಧಿಕೃತ ಬ್ಯಾರೇಜ್ ಗಳನ್ನು ನಿರ್ಮಿಸಿ 95 ಟಿಎಂಸಿ ಗಿಂತಲೂ ಹೆಚ್ಚಿನ ನೀರನ್ನು ಬಳಸಿಕೊಳ್ಳುತ್ತಿದ್ದಾರೆ. ಇದು ನ್ಯಾ.ಬಚಾವತ್ ಆಯೋಗದ ತೀರ್ಪಿನ ಉಲ್ಲಂಘನೆಯಾಗಿದೆ. ಉಜನಿ ಅಣೆಕಟ್ಟೆಯಿಂದ ಡೆಡ್ ಸ್ಟೋರೇಜ್ ನೀರನ್ನು ಬಳಕೆ ಮಾಡುತ್ತಾರೆ. ಆದರೆ ಕರ್ನಾಟಕಕ್ಕೆ ಬಿಡುತ್ತಿಲ್ಲ. v ಬೇಸಿಗೆ ಕಾಲದಲ್ಲಿ ನದಿ ನೀರಿನ ಕೊರತೆಯಿಂದ ರೈತರು ಬೆಳೆದ ಲಕ್ಷಾಂತರ ಎಕರೆ ಕಬ್ಬು ಮತ್ತು ಇತರೆ ಬೆಳೆಗಳು ಒಣಗಿ ಹೋಗಿ ರೈತರು ಸಂಕಷ್ಟದ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಕಳೆದ ವರ್ಷದ ಬೇಸಿಗೆಯಲ್ಲಿ ಭೀಮಾನದಿ ನೀರು ಸಂಪೂರ್ಣ ಬತ್ತಿಹೋಗಿದ್ದರಿಂದ, ಕಲಬುರಗಿ, ವಿಜಯಪುರ, ಯಾದಗಿರಿ ಜಿಲ್ಲೆಯ ಜನರ ಕುಡಿಯುವ ನೀರು, ರೈತರ ಬೆಳೆಗಳಿಗೆ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿನ ಕೊರತೆಯಾಗಿತ್ತು. ಪ್ರತಿ ವರ್ಷ ಭೀಮಾ ತೀರದ ಜನರು ಒಟ್ಟಾಗಿ ಅಮರಣಾಂತರ ಉಪವಾಸ ಸತ್ಯಾಗ್ರಹ ಮಾಡಿ ಕುಡಿಯಲು ಬೇಕಾಗುವ ನೀರನ್ನು ಬಿಡಿಸಿಕೊಳ್ಳುತ್ತಿದ್ದಾರೆ. ಕನಿಷ್ಠ ಕುಡಿಯುವ ನೀರಿಗೂ ಸಂಕಷ್ಟಕ್ಕೆ ಸಿಲುಕುತ್ತಿರುವ ಕಲಬುರಗಿ, ವಿಜಯಪುರ, ಯಾದಗಿರಿ ಜಿಲ್ಲೆಯ ಜನರಿಗೆ 15 ಟಿಎಂಸಿ ನೀರನ್ನು ಸಮರ್ಪಕವಾಗಿ ಬಳಕೆಯಾಗಲು ಹಾಗೂ ಮಹಾರಾಷ್ಟ್ರದ ಅಕ್ರಮ ನೀರಾವರಿ ಯೋಜನೆಗಳ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುವ ಕುರಿತು ಡಾ.ತಳವಾರ್ ಸಾಬಣ್ಣ ಅವರು ಕೋರಿದ್ದರು.
