Rotary Club ಶಿವಮೊಗ್ಗ ನಗರವು ಬರುವ ಡಿಸೆಂಬರ್ 20 ಮತ್ತು 21 ರಂದು ಕ್ರೀಡೇಗಷ್ಟೇ ಅಲ್ಲ, ಸೇವೆ, ಆರೋಗ್ಯ ಮತ್ತು ಸ್ನೇಹದ ಹಬ್ಬಕ್ಕೆ ಸಾಕ್ಷಿಯಾಗಲಿದೆ.
ರೋಟರಿ ಡಿಸ್ಟ್ರಿಕ್ಟ್ 3182ರ ಆಶ್ರಯದಲ್ಲಿ, ಜಿಲ್ಲಾ ಗವರ್ನರ್ ರೊಟೇರಿಯನ್ ಶ್ರೀ ಕೆ. ಪಾಲಾಕ್ಷ ಅವರ ಮಾರ್ಗದರ್ಶನದಲ್ಲಿ ಹಾಗೂ ರೋಟರಿ ಕ್ಲಬ್ ಶಿವಮೊಗ್ಗ ರಿವರ್ ಸೈಡ್ ಅವರ ಆತಿಥ್ಯದಲ್ಲಿ ಈ ಜಿಲ್ಲಾ ಮಟ್ಟದ ಮಲೆನಾಡು ಕ್ರೀಡೋತ್ಸವವನ್ನು ಆಯೋಜಿಸಲಾಗಿದೆ. ನಾಲ್ಕು ಜಿಲ್ಲೆಗಳ ರೋಟರಿ ಕ್ಲಬ್‌ಗಳನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸುವ ಈ ಕ್ರೀಡಾಕೂಟವು, ರೋಟರಿ ಪರಿವಾರಕ್ಕೆ ಒಂದು ಕ್ರೀಡಾ ಹಬ್ಬವಾಗಿಯೇ ರೂಪುಗೊಳ್ಳುತ್ತಿದೆ.
ಈ ಎರಡು ದಿನಗಳ ಕ್ರೀಡೋತ್ಸವದಲ್ಲಿ ನಾಲ್ಕು ಜಿಲ್ಲೆಗಳ 87 ರೋಟರಿ ಕ್ಲಬ್‌ಗಳಿಂದ ಸುಮಾರು 500ಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗವಹಿಸುತ್ತಿದ್ದು, ವರ್ಷಪೂರ್ತಿ ಸಮಾಜದ ಸೇವೆಗಳಲ್ಲಿ ನಿರತರಾಗಿರುವ ರೊಟೇರಿಯನ್ಸ್ ಮತ್ತು ಅವರ ಕುಟುಂಬದವರು, ಆರೋಗ್ಯ ಕಾಪಾಡಿಕೊಳ್ಳುವ ಜಾಗೃತಿ ಸಂದೇಶವನ್ನು ಕ್ರೀಡೆಗಳ ಮೂಲಕ ಸಾರುತ್ತಿದ್ದಾರೆ.
ವಿವಿಧ ಕ್ರೀಡಾ ಸ್ಪರ್ಧೆಗಳು
ಕ್ರಿಕೆಟ್, ವಾಲಿಬಾಲ್, ತ್ರೋಬಾಲ್, ಶಟಲ್ ಬ್ಯಾಡ್ಮಿಂಟನ್, ಚೆಸ್, ಕ್ಯಾರಂ ಹಾಗೂ ಅಥ್ಲೆಟಿಕ್ಸ್ ಸೇರಿದಂತೆ ವಿವಿಧ ಕ್ರೀಡಾಕೂಟಗಳನ್ನು ಆಯೋಜಿಸಲಾಗಿದ್ದು, ಎಲ್ಲಾ ವಯೋಮಾನದ ರೋಟರಿ ಪರಿವಾರದ ಸದಸ್ಯರಿಗೆ ಆಟಗಾರರಾಗಿ ಭಾಗವಹಿಸಲು ಅವಕಾಶ ನೀಡಲಾಗಿದೆ. ಇದು ಕೇವಲ ಸ್ಪರ್ಧೆಯಲ್ಲ, ಆರೋಗ್ಯಕರ ಜೀವನಶೈಲಿಯ ಪ್ರೇರಣೆಯೂ ಹೌದು.
ಉದ್ಘಾಟನಾ ಸಮಾರಂಭ
ದಿನಾಂಕ: 20 ಡಿಸೆಂಬರ್ 2025
ಸ್ಥಳ: ಪಿ.ಇ.ಎಸ್. ಕಾಲೇಜು ಕ್ರೀಡಾಂಗಣ, ಶಿವಮೊಗ್ಗ
ಸಮಯ: ಸಂಜೆ 4.00
Rotary Club ಈ ಜಿಲ್ಲಾ ಕ್ರೀಡೋತ್ಸವವನ್ನು ಸಂಸದರಾದ ಬಿ. ವೈ. ರಾಘವೇಂದ್ರ ಅವರು ಉದ್ಘಾಟಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ
ರೊಟೇರಿಯನ್ ಡಿ.ಎಸ್. ಅರುಣ್, ವಿಧಾನ ಪರಿಷತ್ ಸದಸ್ಯರು
ರೊಟೇರಿಯನ್ ಡಾ. ಧನಂಜಯ ಸರ್ಜಿ, ವಿಧಾನ ಪರಿಷತ್ ಸದಸ್ಯರು
ಹಾಗೂ ಶಿವಮೊಗ್ಗದ ಹೆಮ್ಮೆ, ಅಂತಾರಾಷ್ಟ್ರೀಯ ಶಟಲ್ ಬ್ಯಾಡ್ಮಿಂಟನ್ ಆಟಗಾರ ಪೃಥ್ವಿ ಕೆ. ರಾಯ್ ಅವರು ಭಾಗವಹಿಸಲಿದ್ದು, ಈ ಸಂದರ್ಭದಲ್ಲಿ ಅವರಿಗೆ ವಿಶೇಷ ಗೌರವ ಸನ್ಮಾನ ನೆರವೇರಲಿದೆ.
ಅನೇಕ ಮಾಜಿ ಜಿಲ್ಲಾ ಗವರ್ನರ್‌ಗಳು, ಜಿಲ್ಲಾ ಪದಾಧಿಕಾರಿಗಳು ಹಾಗೂ ರೋಟರಿ ನಾಯಕರು ಈ ಉದ್ಘಾಟನಾ ಸಮಾರಂಭಕ್ಕೆ ಸಾಕ್ಷಿಯಾಗಲಿದ್ದಾರೆ.
ದಿನಾಂಕ: 21 ಡಿಸೆಂಬರ್ 2025ರಂದು
ನೆಹರು ಕ್ರೀಡಾಂಗಣದಲ್ಲಿ ಮಧ್ಯಾಹ್ನ 3.00ಗಂಟೆಗೆ
ಸಮಾರೋಪ ಸಮಾರಂಭ ನಡೆಯಲಿದೆ
ಚನ್ನಬಸಪ್ಪ, ಶಾಸಕರು
ಕೆ. ಎಸ್. ಈಶ್ವರಪ್ಪ, ಮಾಜಿ ಉಪಮುಖ್ಯಮಂತ್ರಿ ರುದ್ರೇಗೌಡ ಎಸ್., ಮಾಜಿ ವಿಧಾನ ಪರಿಷತ್ ಸದಸ್ಯರು
ಭಾಗವಹಿಸಲಿದ್ದಾರೆ.
ಈ ಸಂದರ್ಭದಲ್ಲಿ ಶಿವಮೊಗ್ಗದ ಅಂತಾರಾಷ್ಟ್ರೀಯ ಬಾಸ್ಕೆಟ್‌ಬಾಲ್ ಆಟಗಾರ್ತಿ ಕುಮಾರಿ ಸಹನಾ ಮೋಹನ್ ಅವರನ್ನು ವಿಶೇಷ ಅತಿಥಿಯಾಗಿ ಗೌರವಿಸಿ ಸನ್ಮಾನಿಸಲಾಗುತ್ತದೆ.
ಈ ಮಹತ್ವದ ಜಿಲ್ಲಾ ಕ್ರೀಡೋತ್ಸವವನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಜಿಲ್ಲಾ ಕ್ರೀಡಾ ಸಮಿತಿಯ ಚೇರ್ಮನ್ ರೊಟೇರಿಯನ್ ರವಿ ಕೂಟೋಜಿ, ಇವೆಂಟ್ ಚೇರ್ಮನ್ ರೊಟೇರಿಯನ್ ಸಿ.ಎನ್. ಮಲ್ಲೇಶ್, ಅಸಿಸ್ಟಂಟ್ ಗವರ್ನರ್ ರೊಟೇರಿಯನ್ ಕೆ.ಪಿ. ಶೆಟ್ಟಿ,
ರೋಟರಿ ಕ್ಲಬ್ ಶಿವಮೊಗ್ಗ ರಿವರ್ ಸೈಡ್ ಅಧ್ಯಕ್ಷ ರೊಟೇರಿಯನ್ ಕೆ.ಎಸ್. ವಿಶ್ವನಾಥ ನಾಯಕ ಮತ್ತು ಕ್ಲಬ್‌ನ ಎಲ್ಲಾ ಸದಸ್ಯರು ಹಾಗೂ ಪದಾಧಿಕಾರಿಗಳು ರೋಟರಿ ಪರಿವಾರದ ಎಲ್ಲಾ ಸದಸ್ಯರು, ಕುಟುಂಬಸ್ಥರು ಮತ್ತು ಕ್ರೀಡಾಭಿಮಾನಿಗಳು ಬಂದು ಭಾಗವಹಿಸಲು ಹೃದಯಪೂರ್ವಕವಾಗಿ ಆಹ್ವಾನಿಸಿದೆ.
ಈ ಎರಡು ದಿನಗಳ ಜಿಲ್ಲಾ ಮಟ್ಟದ ಮಲೆನಾಡು ಕ್ರೀಡೋತ್ಸವ–2025 ಕಾರ್ಯಕ್ರಮದ ಎಲ್ಲಾ ಅಧಿಕೃತ ಸಮಾರಂಭಗಳಿಗೆ ರೋಟರಿ ಡಿಸ್ಟ್ರಿಕ್ಟ್ 3182ರ ಜಿಲ್ಲಾ ಗವರ್ನರ್ ರೊಟೇರಿಯನ್ ಶ್ರೀಯುತ ಕೆ. ಪಾಲಾಕ್ಷ ಅವರು ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.
