Veereshwar Punyashram Samskruth School ಸಾಗರ ರಸ್ತೆಯ ವೀರೇಶ್ವರ ಪುಣ್ಯಾಶ್ರಮ ಸಂಸ್ಕತ ಪಾಠ ಶಾಲೆಯಲ್ಲಿ ಗಾನಲಹರಿ 115ನೇ ಅಮಾವಾಸ್ಯೆಯ ಸಂಗೀತ ಸಂಜೆ ಕಾರ್ಯಕ್ರಮವನ್ನು ನ. 19ರ ಸಂಜೆ 6:30ಕ್ಕೆ ಪುಣ್ಯಾಶ್ರಮದ ಆವರಣದಲ್ಲಿ ಆಯೋಜಿಸಲಾಗಿದೆ.
ರಾಜ್ಯ ಪ್ರಶಸ್ತಿ ಪುರಸ್ಕೃತ ಆರ್.ಬಿ. ಸಂಗಮೇಶ್ವರ ಗವಾಯಿಗಳೂ ಅಧ್ಯಕ್ಷತೆ ವಹಿಸುವರು. ಗೋಪಾಳದ ಶ್ರೀ ಶಾರದಾ ಶಂಕರ ಭಜನಾ ಮಂಡಳಿಯಿಂದ ಭಜನಾ ಸೇವೆ ಮತ್ತು ಆಶ್ರಮದ ಅಂಧ ಮಕ್ಕಳಿಂದ ಪ್ರಾರ್ಥನೆ ನಡೆಯಲಿದೆ.
ಹುಬ್ಬಳ್ಳಿಯ ಹಿಂದೂಸ್ಥಾನಿ ಗಾಯಕ ನಿಜಗುಣಿ ಮಂಗಿ ಅವರಿಂದ ಸಂಗೀತ ಸೇವೆ ನಡೆಯಲಿದೆ.
Veereshwar Punyashram Samskruth School ರಾಜ್ಯ ಪ್ರಶಸ್ತಿ ಪುರಸ್ಕೃತ ರಾಮಣ್ಣ ಭಜಂತ್ರಿ ಶಹನಾಯ, ವೀರಭದ್ರಯ್ಯ ಶಾಸ್ತ್ರಿಗಳಿಂದ ವೇದಘೋಷ ಹಾಗೂ ಹಿರಿಯ ತಬಲ ಕಲಾವಿದರಾದ ಪಂ. ಆರ್. ತುಕಾರಾಮ್ ರಂಗಧೋಳ್ ವಿನಾಯಕ್ ಭಟ್ ಅವರ ತಬಲ ಸೇವೆ ಹಾಗೂ ಸಿದ್ದಣ್ಣ ಬಡಿಗಾರ್ ಅವರು ಆರ್‍ಮೋನಿಯಂ ನೊಂದಿಗೆ ಸಾಥ್ ನೀಡಲಿದ್ದಾರೆ. ಸಂಗೀತ ಶಿಕ್ಷಕಿ ನಾದಶ್ರೀ ಫಕೀರಯ್ಯ ಕಾರ್ಯಕ್ರಮ ಶಾಸ್ತ್ರಿ ಅವರು ನಿರೂಪಿಸಲಿದ್ದಾರೆ.
