Guarantee Scheme ಕಾನೂನು ಉಲ್ಲಂಘಿಸಿ ಶಿವಮೊಗ್ಗ ನಗರದ ಮಿಳ್ಳಘಟ್ಟ ಮುಖ್ಯ ರಸ್ತೆ ಅಣ್ಣ ನಗರದ ನಾಲ್ಕನೇ ತಿರುವು ಬಲ ಭಾಗದಲ್ಲಿ ವಾಣಿಜ್ಯ ಕಟ್ಟಡ ನಿರ್ಮಿಸಲಾಗುತ್ತಿದೆ ಎಂದು ಗ್ಯಾರಂಟಿ ಯೋಜನೆ ಅನುಷ್ಠಾನದ ಪ್ರಾಧಿಕಾರ ಜಿಲ್ಲಾ ಸದಸ್ಯೆ ಬಿ.ಎ.ಅರ್ಚನಾ ನಿರಂಜನ್ ಆರೋಪಿಸಿದರು.
ರಾಜಕಾಲುವೆ ಒಡೆದು ಹಾಕಿರುವ ಪರಿಣಾಮ ಕಸ ಕಡ್ಡಿ ಗಲೀಜು ತುಂಬಿಕೊಂಡು ಸಾಂಕ್ರಾಮಿಕ ಕಾಯಿಲೆಗೆ ಅಹ್ವಾನವಾಗಿದೆ. ಹಾಗಾಗಿ ಇದರ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಂಡು ಸ್ಥಳೀಯ ನಿವಾಸಿಗಳಿಗೆ ಅನುಕೂಲ ಮಾಡಿಕೊಡುವಂತೆ ಆಯಕ್ತರಿಗೆ ಮನವಿ ಮೂಲಕ ಒತ್ತಾಯಿಸಿದರು.
ವಾಣಿಜ್ಯ ಕಟ್ಟಡವು ನೀಲಿ ನಕ್ಷೆಯಲ್ಲಿ ತೋರಿಸಿರುವಂತೆ ನಿರ್ಮಾಣ ಮಾಡದೇ, ಅಕ್ಕ-ಪಕ್ಕ ಒತ್ತವರಿ ಮಾಡಿಕೊಂಡು, ಯಾವುದೇ ರೀತಿ ಪಾರ್ಕಿಂಗ್ ಸ್ಥಳಾವಕಾಶ ಬಿಡದೆ ನಿರ್ಮಿಸಲಾಗುತ್ತಿದೆ, ರಸ್ತೆಯಲ್ಲಿ ಮರಳು, ಜಲ್ಲಿ ಕಲ್ಲು ಹಾಗೂ ಸಿಮೆಂಟ್ ಬ್ರಿಕ್ಸ್‌ನ್ನು ಎಲ್ಲೆಂದರಲ್ಲಿ ಹಾಕಿರುವುದರಿಂದ ವಾಹನ ಸವಾರರಿಗೆ ಹಾಗೂ ಸ್ಥಳೀಯರಿಗೆ ಓಡಾಡಲು ತೊಂದ್ರೆಯಾಗುತ್ತಿದೆ ಎಂದು ದೂರಿದರು.
Guarantee Scheme ಶಿವಮೊಗ್ಗ ಮಹಾನಗರಪಾಲಿಕೆ ಆಯುಕ್ತರಿಗೆ ಗ್ಯಾರಂಟಿ ಯೋಜನೆ ಅನುಷ್ಠಾನದ ಜಿಲ್ಲಾ ಸದಸ್ಯರಾದ ಅರ್ಚನಾ ನಿರಂಜನ್ ನೇತೃತ್ವದಲ್ಲಿ ಮನವಿ ಸಲ್ಲಿಸಿದರು.
