Rotary Shimoga ನಮ್ಮ ಪೂರ್ವಜರು ಎಲ್ಲಾ ಅನಾರೋಗ್ಯಕ್ಕೆ ಐದುಸಾವಿರ ವರ್ಷದಹಿಂದೆಯೆ ಆಯೂರ್ ವೇದಿಕ್ ನಲ್ಲಿ ಪರಿಹಾರಗಳನ್ನು ತಿಳಿಸಿದ್ದಾರೆ. ಆದರೆ ಅದರ ಉಪಯೋಗಗಳನ್ನು ನಾವು ಭಾರತೀಯರು ಸರಿಯಾಗಿ ಉಪಯೋಗಗಳನ್ನು ಪಡೆಯುತ್ತಿಲ್ಲ ಎಂದು, ರೋಟರಿ ಶಿವಮೊಗ್ಗ ಜ್ಯುಬಿಲಿ ಕ್ಲಬ್ ವಾರದ ಸಭೆಯ ಮುಖ್ಯ ಅತಿಥಿಗಳಾಗಿ ಆಗಮಿಸಿದ ಆಯುಷ್ಮಾನ್ ವೈಧ್ಯಾದಿಕಾರಿಗಳಾದ ಡಾ.ಸುರೇಂದ್ರರವರು ಮಾತನಾಡುತ್ತಿದ್ದರು.
ಪ್ರತಿಯೋಬ್ಬರು ಸಂಜೆ ಆರುಗಂಟೆ ಯೊಳಗಾಗಿ ಊಟ ಪೂರ್ಯಸಬೇಕು. ಕಾರಣ ದೇಹಪ್ರಕೃತಿಯಲ್ಲಿ ಜೀರ್ಣಕ್ರಿಯೆ ಪೂರೈಸಲು, ದೇಹಕ್ಕೆ ಆರೋಗ್ಯಕರ ಶಕ್ತಿ ವೃದ್ದಿಸಲು ಸಹಕಾರಿಯಾಗುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ದೂರದರ್ಶನ, ಮೊಬೈಲ್ ಗಳ ಸಹವಾಸದಿಂದ ತಡರಾತ್ರಿ ತನಕ ನಿದ್ದೆಗೆಟ್ಟು, ಪಚನ ಕ್ರಿಯೆಗೆ ದೇಹ ತೊಡಗಲು ಅಸಹಕಾರಿಯಾಗಿದೆ. ಇದರಿಂದ ಸಕ್ಕರೆ ಕಾಯಿಲೆ, ಬಿ.ಪಿ. ಹೆಚ್ಚಾಗಿ ಇತರೆ ರೋಗಗಳಿಗೆ ರಹದಾರಿ ಯಾಗಿದೆ, ಇದರಿಂದ ಹೃದಯಾಘಾತ, ರಕ್ತ ಹೆಪ್ಪುಗಟ್ಟುವಿಕೆ ಮುಂತಾದ ಕಾಯಿಲೆಗಳಿಗೆ ಆಹ್ವಾನ ಸಿಕ್ಕಂತಾಗಿದೆ. ಮಕ್ಕಳಿಗೆ ಹಾರ್ಮೋನ್ ಕೊರತೆಯಿಂದ ದೇಹ ಬೆಳವಣಿಗೆ ಕುಂಟಿತ ಗೊಳ್ಳುತ್ತದೆ.
ಯಾವುದೆ ಕಾಯಿಲೆ ಬರದಂತೆ ತಡೆಯಲು ಆರೋಗ್ಯವಂತರಿಗೆ ಮನೆ ಮಧ್ದು ಉಪಕಾರಿ, ರಾತ್ರಿ ಒಂದು ಚಮಚ ಮೆಂತೆ ನೀರಿನಲ್ಲಿ ನೆನೆ ಇಟ್ಟು, ನೆಂದ ಮೆಂತೆ ಚನ್ನಾಗಿ ಜಗಿದು ತಿಂದು, ನೆನೆ ಇಟ್ಟ ನೀರು ಬೆಚ್ಚಗೆ ಮಾಡಿಕೊಂಡು ಅರ್ಧ ಚಮಚ ಅರಿಶಿಣ ಪುಡಿ ಹಾಕಿ ಕುಡಿದರೆ ದೇಹದಲ್ಲಿ ರಕ್ತ ಶುದ್ದಿಯಾಗಿ, ರೋಗ ಗುಣಪಡಿಸುವ ಶಕ್ತಿ ವೃದ್ಧಿಯಾಗುತ್ತದೆ.
ಸಕ್ಕರೆ ಕಾಯಿಲೆ ಬರದಂತೆ ತಡೆಯಲು ಸಿಲೋನ್ ದಾಚನ್ನಿ ಚೆಕ್ಕೆ ಅತ್ಯುತ್ತಮ. ರಾತ್ರಿ ಹಾಲಿಗೆ ಅರ್ಧಚಮಚ ಚಕ್ಕೆಪುಡು ಹಾಕಿ ಕೊಂಡು ಕುಡಿದರೆ ಇನ್ಸುಲಿನ್ ವೃದ್ದಿಯಾಗುತ್ತದೆ. ಹಾಗಲಕಾಯಿ ರಸಕ್ಕೆ ಮೆಣಸಿನ ಕಾಳು ಪುಡಿ ಹಾಕಿ ಸೇವಿಸದರೆ ಪಿತ್ತಕೋಶದಲ್ಲಿ ಇರಬಹುದಾದ ಕಲ್ಲು ಕರಗುತ್ತದೆ. ಬಿ.ಪಿ.ಬರುವುದು ರಕ್ತನಾಳಗಳು ಚಿಕ್ಕದಾದಾಗ, ಇದಕ್ಕೆ ಉತ್ತಮ ಮನೆ ಔಷದಿ ಬೆಳಿಗ್ಗೆ ಬೆಳ್ಳುಳ್ಳಿ ರಸಕ್ಕೆ ನಿಬೆಹಣ್ಣು ಬೆರೆಸಿ ಸೇವಿಸಬೇಕು. ಅರಿಶಿಣ ಪುಡಿ ಗಾಯಕ್ಕೆ ಉತ್ತಮ, ಬಾಳೆಹಣ್ಣು ಕರುಳಿನ ಆರೋಗ್ಯ ಹೆಚ್ಚಿಸುತ್ತದೆ ಊಟಕ್ಕಿಂತ ಮುಂಚಿತವಾಗಿ ತಿನ್ನಬೇಕು. ಹಾಲಿಗೆ ಅರಶಿಣ ಪುಡಿ ಸೇರಿಸಿ ಕುಡಿದರೆ ಚನ್ನಾಗಿ ನಿದ್ದೆ ಬರುತ್ತದೆ. ಮೊಸರು ಮಧ್ಯಾಹ್ನ ಊಟ ಮಾಡುವುದು ಉತ್ತಮ. ಎಲ್ಲರೂ ಸಕ್ಕರೆ ಉಪಯೋಗ ಬಹಳ ಕಡಿಮೆ ಉಪಯೋಗ ಮಾಡುವುದು ಆರೋಗ್ಯಕ್ಕೆ ಅತ್ಯುತ್ತಮ. ಬೆಳಿಗ್ಗೆ 8-9ರೊಳಗೆ ತಿಂಡಿ, ನಾರಿನ ಅಂಶ ಇರುವ ಆಹಾರ, ಮಧ್ಯಹ್ನಾ ಒಂದು ಗಂಟೆಗೆ, ಸಂಜೆ ಆರಕ್ಕೆ ರಾತ್ರಿ ಊಟ ಮಾಡುವುದು ಪಚನ ಕ್ರಿಯೆಗೆ ಅತ್ಯುತ್ತಮ. ರಾತ್ರಿ ರಾಗಿ ಅಂಬಲಿ ಮಾಡಿಟ್ಟು ಬೆಳಿಗ್ಗೆ ಸೇವಿಸುವುದು ಉತ್ತಮ. ಶಿತಾಲಿ ಯೋಗ ದಿಂದಲೂ ಬಿ.ಪಿ.ಕಡಿಮೆ ಯಾಗುತ್ತದೆ.
Rotary Shimoga ಬಿಳಿ ಕೂದಲು ಆಗುವುದು ಪಿತ್ತ ಪ್ರಕೃತಿ ಇರುವವರು, ಆಹಾರ ಬದಲಿಸಬೇಕು. ದಿನಕ್ಕೆ ಒಂದು ಚಮಚ ತುಪ್ಪ ಉಪಯೋಗಿಸಬೇಕು. ವಿಟಮಿನ್ ಡಿ ಗೆ ಸೂರ್ಯನಮಸ್ಕಾರ ರಾಮಭಾಣ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿ.ಎಸ್.ಆಶ್ವಥ್ ವಹಿಸಿದ್ದರು. ಭಾರದ್ವಾಜ್ ಸ್ವಾಗತಿಸಿದರು. ಪ್ರಾಸ್ಥಾವಿಕ ನುಡಿ ವಾಗೇಶ್ ನುಡಿದರು. ಹೇಮಶೇಖರ್ ವಂದಿಸಿದರು. ಲಕ್ಷ್ಮೀನಾರಾಯಣ್, ಉಮೇಶ್, ವಿಶ್ವನಾಥ್ ನಾಯ್ಕ್, ಶಂಕರ್, ನಾಗರಾಜ್, ಮಂಜುನಾಥ್, ವೆಂಕಟೇಶ್ ನಾಯಕ್, ಮುಂತಾದವರು ಇದ್ದರು.
Rotary Shimoga ಕಾಯಿಲೆ ಬಾರದಂತೆ ತಡೆಗಟ್ಟಲು ಮನೆಮದ್ದು ಉಪಕಾರಿ – ಡಾ.ಸುರೇಂದ್ರ
Date:
