ಅಪರಾಧ ಮುಕ್ತ ಸಮಾಜ ನಿರ್ಮಾಣಕ್ಕೆ ಯೋಗ, ಧ್ಯಾನ ರಹದಾರಿ ಎಂದು ಯೋಗಾಚಾರ್ಯ
ಹಾಲಯ್ಯ ಶ್ರೀವಿರಕ್ತಮಠ ತಿಳಿಸಿದರು.
ಶ್ರೀ ಶಿವಗಂಗಾಯೋಗಕೇಂದ್ರದ ವತಿಯಿಂದ ಕುವೆಂಪು ರಸ್ತೆ ಆರ್ಯವೈಶ್ಯ ಶ್ರೀರಾಮ ಸಹಕಾರ ಸಂಘದ ರಾಘವ ಸಭಾಂಗಣದಲ್ಲಿ
ವಿಶ್ವಧ್ಯಾನ ದಿನ ಆಚರಣೆ ಅಂಗವಾಗಿ ಏರ್ಪಡಿಸಿದ್ದ ಪೂರ್ವಭಾವಿ ಕಾರ್ಯಕ್ರಮದಲ್ಲಿ ಅನಾಪಾನ ಸತಿ ಮತ್ತು ವಿಪಶ್ಯನ ಧ್ಯಾನ
ಬಗ್ಗೆ ವಿಶೇಷ ಉಪನ್ಯಾಸ ನೀಡಿದರು.
ಆಧುನಿಕತೆಯ ಭರಾಟೆಯಲ್ಲಿ ಒತ್ತಡದ ಜೀವನ ಹಾಗೂ ಮಾನವೀಯ ಮೌಲ್ಯಗಳ ಪತನದಿಂದಾಗಿ ಪರಸ್ಪರ ಸಂಬಂಧಗಳು ಮರೆಯಾಗುತ್ತಿವೆ. ಹೀಗಾಗಿ ಸಮಾಜದಲ್ಲಿ ಶಾಂತಿ ಮತ್ತು ನೆಮ್ಮದಿ ಇಲ್ಲದಂತಾಗಿದೆ. ಈ ಎಲ್ಲಾ ಸಮಸ್ಯೆಗಳಿಂದ ಪಾರಾಗಲು ವಿಪಶ್ಯನ ಧ್ಯಾನ ಸಹಕಾರಿ ಎಂದರು.
ಮನಸ್ಸಿನಲ್ಲಿ ತಾಮಸ, ರಾಜಸಿಕ ಮತ್ತು ಸಾತ್ವಿಕ ಮನಸ್ಸು ಹೀಗೆ ಮೂರು ಗುಣಲಕ್ಷಣಗಳು ಕಾಣಬಹುದು. ತಾಮಸ ಗುಣವು ಇದು ಜಡತ್ವ, ಅಜ್ಞಾನ, ಸೋಮಾರಿತನ ಮತ್ತು ಕತ್ತಲೆಯ ಸ್ವರೂಪವನ್ನು ಸೂಚಿಸುತ್ತದೆ. ಇದು ನಿಷ್ಕ್ರಿಯತೆ, ಉದಾಸೀನತೆ ಮತ್ತು ಭ್ರಮೆಯನ್ನು ಪ್ರತಿನಿಧಿಸುತ್ತದೆ.
ಸಾತ್ವಿಕ ಮನಸ್ಸು ಶುದ್ಧತೆ, ಶಾಂತಿ, ಸಂತೋಷ ಮತ್ತು ಜ್ಞಾನದಿಂದ ಕೂಡಿದ್ದು, ಸರಳತೆ, ಉನ್ನತ ಆಲೋಚನೆಗಳು ಮತ್ತು ಆಧ್ಯಾತ್ಮಿಕತೆ ಕಡೆಗೆ ಒಲವು ತೋರುತ್ತದೆ. ರಾಜಸಿಕ ಮನಸ್ಸು ಚಡಪಡಿಕೆ, ಆಸೆಗಳು ಮತ್ತು ಕ್ರಿಯೆಗೆ ಪ್ರಚೋದಿಸುತ್ತದೆ.
ಪ್ರಸ್ತುತ ತಾಮಸ, ರಾಜಸಿಕ ಗುಣಗಳು ವಿಜೃಂಭಿಸುತ್ತಿದ್ದು ಸಾತ್ವಿಕ ಗುಣಗಳು
ಮರೆಯಾಗುತ್ತಿವೆ. ನಿರಂತರವಾಗಿ ವಿಪಶ್ಯನ ಧ್ಯಾನದಿಂದ ಮನುಷ್ಯರಲ್ಲಿ ಸಾತ್ವಿಕ ಗುಣಗಳು ವೃದ್ಧಿಯಾಗಿ ಸಮಾಜದಲ್ಲಿ ಪರಸ್ಪರ ಶಾಂತಿ ನೆಮ್ಮದಿ ನೆಲೆಸುತ್ತದೆ ಎಂದು ತಿಳಿಸಿದರು.
ಪ್ರಸ್ತುತ ಕಾಲಘಟ್ಟದಲ್ಲಿ ಧ್ಯಾನದ ಮಹತ್ವವನ್ನು ಎಲ್ಲರಿಗೂ ತಿಳಿಸುವ ಮೂಲಕ ಆರೋಗ್ಯಕರ ಸಮಾಜ ನಿರ್ಮಾಣ ಮಾಡಲು ಪ್ರತಿಯೊಬ್ಬರು ಶ್ರಮಿಸಬೇಕಿದೆ ಎಂದರು.
ಶ್ರೀ ಶಿವಗಂಗಾ ಯೋಗ ಕೇಂದ್ರದ ರಾಘವ , ಬಸವನಗುಡಿ , ರೋಟರಿ ರಾಜೇಂದ್ರ ನಗರ, ರವೀಂದ್ರ ನಗರ ಸಂಜೆ ಮತ್ತು ವಿಕಾಸ ಕೇಂದ್ರ ಸರ್ಕಾರಿ ನೌಕರರ ಭವನ ಯೋಗ ಶಾಖೆಗಳ ಯೋಗ ಬಂಧುಗಳು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಯೋಗಾಚಾರ್ಯ
ಡಾ. ಸಿ. ವಿ.ರುದ್ರಾರಾಧ್ಯ ಇದ್ದರು.
ಯೋಗ ಗುರು ಪ್ರೊ. ಎಚ್. ಕೆ. ಹರೀಶ್ ಸರ್ವರನ್ನು ಸ್ವಾಗತಿಸಿದರು.ಯೋಗಗುರು ಇಳಂಗೋವನ್ ಪ್ರಾಣಾಯಾಮ ತರಬೇತಿ ನೀಡಿದರು. ಕಾರ್ಯಕ್ರಮದಲ್ಲಿ ಯೋಗ ಬಂಧುಗಳಾದ. ಜಿ ವಿಜಯಕುಮಾರ್. ನರಸೋಜಿ ರಾವ್. ಮಹೇಶ್. ಸುಜಾತ. ಗಾಯತ್ರಿ. ಶೈಲಜ. ಶೋಭಾ. ಉಷಾ. ಸುಬ್ರಮಣಿ. ಶ್ರೀನಿವಾಸ್
ಉಪಸ್ಥಿತರಿದ್ದರು.
ವಿಪಶ್ಶನ ಧ್ಯಾನದಿಂದ ಸಾತ್ವಿಕ ಗುಣಗಳ ವೃದ್ಧಿ, ಸಮಾಜದಲ್ಲಿ ಪರಸ್ಪರ ಶಾಂತು ನೆಮ್ಮದಿ; ಹಾಲಯ್ಯ ಶ್ರೀವಿರಕ್ತಮಠ
Date:
