District Farmers’ Social Working Committee ಶಿವಮೊಗ್ಗ ಜಿಲ್ಲಾ ಕೃಷಿಕ ಸಮಾಜ ಕಾರ್ಯಕಾರಿ ಸಮಿತಿಯ ಸಭೆಯನ್ನು ಹೆಚ್. ಎನ್. ನಾಗರಾಜ್ ಇವರ ಅಧ್ಯಕ್ಷತೆಯಲ್ಲಿ ಡಿ.10 ರಂದು ನಡೆಯಿತು.
ಈ ಸಭೆಯಲ್ಲಿ ನೂತನವಾಗಿ ಕರ್ನಾಟಕ ಪ್ರದೇಶ ಕೃಷಿಕ ಸಮಾಜದ ಆಡಳಿತ ಅಧ್ಯಕ್ಷರಾಗಿ ನೇಮಕಗೊಂಡಿರುವ ನಗರದ ಮಹಾದೇವಪ್ಪನವರನ್ನು ಹಾಗೂ ಜಾನಪದ ಕ್ಷೇತ್ರದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪಡೆದ ಟಾಕಪ್ಪರವರನ್ನು ಅಭಿನಂದಿಸಿ ಸನ್ಮಾನಿಸಲಾಯಿತು.
ಈ ಸಭೆಯಲ್ಲಿ ಶಿವಮೊಗ್ಗ ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷರಾದ ಹೆಚ್ ಎನ್ ನಾಗರಾಜ್ ಉಪಾಧ್ಯಕ್ಷರಾದ ಎನ್ ಉಮೇಶ್ ಪಾಟೀಲ್, ವಿ.ಜಿ ಶ್ರೀಧರ್, ಹೊಸಮನೆ ಸತೀಶ್, ನಿರ್ದೇಶಕರಾದ ಕೆ.ಎಸ್ ಚಂದ್ರಶೇಖರ, ಕಸ್ತೂರ, ಮಂಜುನಾಥ ದೇವರಾಜ ಪಾಟೀಲ್, ಸುರೇಶ್ ವಾಟಗೋಡ್, ಎ.ವಿ ಮಲ್ಲಿಕಾರ್ಜುನ, ಸುರೇಶ್ ಗೌಡ್ರು, ಬಿ ನಾಗರಾಜ, ಹುಲ್ಮಾರ್ ಮಹೇಶ್ ಮೋಹನಕುಮಾರ, ಶಿವಕುಮಾರ, ಮಲ್ಲಿಕಾರ್ಜುನ ಗುತ್ತೇರ್ ಮತ್ತು ಜಂಟಿ ಕೃಷಿ ನಿರ್ದೇಶಕರು ಹಾಗೂ ಜಿಲ್ಲಾ ಮಟ್ಟದ ಇಲಾಖಾಧಿಕಾರಿಗಳು ಹಾಜರಿದ್ದರು.
