Thursday, March 19, 2026
Thursday, March 19, 2026

Department of Public Education ರಾಜ್ಯಮಟ್ಟದ ಅಥ್ಲೆಟಿಕ್ಸ್ ಪಂದ್ಯಾವಳಿ. ಶಿವಮೊಗ್ಗ ಜಿಲ್ಲಾ ವಸತಿ ಶಾಲೆಗೆ ಸಮಗ್ರ ಚಾಂಪಿಯನ್ ಪಟ್ಟ

Date:

Department of Public Education ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಡಿ.5 ರಿಂದ 6 ರವೆಗೆ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿದ್ದ 17 ವರ್ಷದೊಳಗಿನ ಪ್ರೌಢಶಾಲಾ ಬಾಲಕ/ಬಾಲಕಿಯರ ರಾಜ್ಯ ಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಶಿವಮೊಗ್ಗ ಜಿಲ್ಲಾ ವಸತಿ ಶಾಲೆಯ ಕ್ರೀಡಾಪಟುಗಳು ಭಾಗವಹಿಸಿ ವಿಜೇತರಾಗಿ ಬಾಲಕ/ಬಾಲಕಿಯ ಸಮಗ್ರ ಚಾಂಪಿಯನ್ಸ್ ಎಂಬ ಬಿರುದನ್ನು ಪಡೆದಿದ್ದಾರೆ.
ಬಾಲಕರ ಅಥ್ಲೆಟಿಕ್ಸ್ನಲ್ಲಿ ಮಣಿಕಂಠ ಗೌಡ ಎತ್ತರ ಜಿಗಿತದಲ್ಲಿ ಪ್ರಥಮ, ತ್ರಿವಿಧ ಜಿಗಿತದಲ್ಲಿ ದ್ವಿತೀಯ, ಶರತ್ ಕೆ.ಜೆ 400 ಮೀ ಓಟದಲ್ಲಿ ಪ್ರಥಮ, 4100 ಮೀ ರಿಲೇ ಓಟದಲ್ಲಿ ತೃತೀಯ, ಲಲೀಬ್ 110 ಮೀ ಹರ್ಡಲ್ಸ್ ಓಟದಲ್ಲಿ ಪ್ರಥಮ, ಸಚಿನ್ ಜಾಧವ್ 200 ಮೀ ಓಟದಲ್ಲಿ ದ್ವಿತೀಯ, 100 ಮೀ ಓಟದಲ್ಲಿ ತೃತೀಯ, 4100 ಮೀ ರಿಲೇ ಓಟದಲ್ಲಿ ತೃತೀಯ, ಆರೋನ್ ಎತ್ತರ ಜಿಗಿತದಲ್ಲಿ ದ್ವಿತೀಯ, ವಂಶಿ 4100 ಮೀ ರಿಲೇ ಓಟದಲ್ಲಿ ತೃತೀಯ ಸ್ಥಾನಗಳನ್ನು ಪಡೆದಿದ್ದಾರೆ. ಬಾಲಕಿಯರ ಅಥ್ಲೆಟಿಕ್ಸ್ನಲ್ಲಿ ಪದ್ಮಾವತಿ ಜಾವೆಲಿನ್ ಎಸೆತದಲ್ಲಿ ಪ್ರಥಮ, 4100 ಮೀ ರಿಲೇ ಓಟದಲ್ಲಿ ತೃತೀಯ, ಪೋಲ್ ವಾಲ್ಟ್ನಲ್ಲಿ ಪ್ರಥಮ, ಅಪೂರ್ವ 400 ಮೀ ಹರ್ಡಲ್ಸ್ ಓಟ-ಕೂಟ ದಾಖಲೆ ಪ್ರಥಮ, 4100 ಮೀ ರಿಲೇ ಓಟದಲ್ಲಿ ತೃತೀಯ, ಅಮೂಲ್ಯ-ತ್ರಿವಿಧ ಜಿಗಿತದಲ್ಲಿ ಪ್ರಥಮ, 4100 ಮೀ ರಿಲೇ ಓಟದಲ್ಲಿ ತೃತೀಯ, ಸಿರಿ ಕೆ.ಜೆ 100 ಮೀ ಹರ್ಡಲ್ಸ್ ಓಟದಲ್ಲಿ ದ್ವಿತೀಯ, 4*100 ಮೀ ರಿಲೇ ಓಟದಲ್ಲಿ ತೃತೀಯ ಸ್ಥಾನಗಳನ್ನು ಪಡೆದ್ದಾರೆ.
Department of Public Education ಬಾಲಕ/ಬಾಲಕಿಯರ ರಾಜ್ಯ ಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ವಿಜೇತರಾಗಿರುವ ಎಲ್ಲಾ ಕ್ರೀಡಾಪುಟಗಳಿಗೆ ಹಾಗೂ ಅಥ್ಲೆಟಿಕ್ಸ್ ತರಬೇತುದಾರರಾದ ಬಾಳಪ್ಪ ಅವರಿಗೆ ಜಿಲ್ಲಾಧಿಕಾರಿಗಳಾದ ಗುರುದತ್ತ ಹೆಗಡೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ರೇಖ್ಯಾ ನಾಯ್ಕ ಹಾಗೂ ಇಲಾಖೆ ಸಿಬ್ಬಂದಿಗಳು ಶುಭ ಹಾರೈಸಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Shimoga News ಗೋಪಾಲ ಗೌಡರು ಶಿವಮೊಗ್ಗ ಜಿಲ್ಲೆಯನ್ನ ಸಮಾಜವಾದದ ತೊಟ್ಟಿಲನ್ನಾಗಿ ರೂಪಿಸಿದವರು- ವೈ.ಎಸ್.ವಿ.ದತ್ತ.

Shimoga News ನಗರದ ಮಥುರಾ ಪ್ಯಾರಡೈಸ್ ಸಭಾಂಗಣದಲ್ಲಿ ಮಾಜಿ ಶಾಸಕ ಹಾಗೂ...

Klive Special Article ಕೆ ಲೈವ್ ವಿಶೇಷ.” ವಿಕ್ರಮ ಮತ್ತು ಶಾಲಿವಾಹನ ಶಕಪುರುಷರು” ಒಂದು ಚಿಂತನೆ.ಲೇ: ದಿಲೀಪ್ ನಾಡಿಗ್,ಶಿವಮೊಗ್ಗ.

ಎನ್.ಜಯಭೀಮ ಜೊಯ್ಸ್. ಶಿವಮೊಗ್ಗ. Klive Special Article ತೈತ್ತಿರೀಯ ಅರಣ್ಯಕದಲ್ಲಿರುವ ಶ್ಲೋಕದಂತೆ "ಕ್ವೇದಮಭ್ರಂ ನಿವಿಶತೇ...

Kote SeethaRamanjaneya Temple ಇಂದಿನಿಂದ ಕೋಟೆ ಶ್ರೀಸೀತಾರಾಮಾಂಜನೇಯ ಸ್ವಾಮಿ ದೇಗುಲದಲ್ಲಿ ಶ್ರೀರಾಮ ನವಮಿ ಉತ್ಸವಕ್ಕೆ ಚಾಲನೆ

Kote SeethaRamanjaneya Temple ಕೋಟೇ ಶ್ರೀ ಸೀತಾರಾಮಾಂಜನೇಯ ಸ್ವಾಮಿ ದೇವಾಲಯದಲ್ಲಿ ಶ್ರೀ...

Women’s Day ವೃದ್ಧಾಪ್ಯದ ಆರೋಗ್ಯ ಸಮಸ್ಯೆಗಳ ಬಗ್ಗೆ ಅರಿವಿರಲಿ- ಡಾ.ಪ್ರಿಯಾಂಕ ಚೌಹಾಣ್.

Women's Day ಜೆಸಿ ಶಿವಮೊಗ್ಗ ಚಿರಂತನದ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು...