Friday, March 20, 2026
Friday, March 20, 2026

JCI Shimoga ಜೀವನ ಮೌಲ್ಯಗಳನ್ನ ಅಳವಡಿಸಿಕೊಂಡಾಗ ಮಾತ್ರ ಸಾರ್ಥಕ ಬದುಕು- ಮಲ್ಲಿಕಾರ್ಜುನ ಕಾನೂರ್

Date:

JCI Shimoga ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು ಮೌಲ್ಯಯುತ ಜೀವನಶೈಲಿ ಅಗತ್ಯ. ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡಾಗ ಮಾನವ ಸಂಪತ್ತು ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಜೆಸಿಐ ವಲಯ ಪೂವಾಧ್ಯಕ್ಷ ಮಲ್ಲಿಕಾರ್ಜುನ ಕಾನೂರ್ ಹೇಳಿದರು.

ಶುಭಂ ಹೋಟೆಲ್‌ನಲ್ಲಿ ಜೆಸಿಐ ಶಿವಮೊಗ್ಗ ವಿವೇಕ್ ಆಯೋಜಿಸಿದ್ದ ಜಡ್‌ಒಟಿಎಸ್ 2026 ಕಾರ್ಯಕ್ರಮದಲ್ಲಿ ಮಾತನಾಡಿ, ಮೌಲ್ಯ ಕೇವಲ ಹಣ ಪ್ರಧಾನವಾದ ಶಿಕ್ಷಣವಾಗದೆ ಗುಣಪ್ರಧಾನವಾದ ವ್ಯವಸ್ಥೆಯಾಗಬೇಕು. ಜೀವನದಲ್ಲಿ ಮೌಲ್ಯಗಳನ್ನು ರೂಢಿಸಿಕೊಂಡಾಗ ಮಾತ್ರ ಸಾರ್ಥಕ ಬದುಕನ್ನು ಕಾಣಲು ಸಾಧ್ಯ ಎಂದು ತಿಳಿಸಿದರು.

ಒಬ್ಬ ವ್ಯಕ್ತಿಗೆ ವ್ಯಕ್ತಿತ್ವ ಅತಿ ಮುಖ್ಯ, ಆ ವ್ಯಕ್ತಿತ್ವದ ಕಳಸಕ್ಕೆ ಜೀವನದ ಮೌಲ್ಯಗಳು ಶೋಭೆಯಂತಿವೆ. ನಿಸರ್ಗ ಮನುಷ್ಯ ಸಂತೋಷದಿಂದ ಬದುಕಬೇಕು ಅಂತ ಕಲಿಸುತ್ತದೆ. ನಿಸರ್ಗ ಮನುಷ್ಯನಿಗೆ ಪದೇಪದೇ ಕ್ಷಣ ಕ್ಷಣಕ್ಕೂ ಸಂತೋಷವಾಗಿರುವುದನ್ನೇ ಮಾಡಿದೆ. ತಾನು ತಮ್ಮದೆಂಬ ಮನೋಭಾವನೆಯಿಂದ ಹೊರ ಬಂದು ಪ್ರತಿಯೊಬ್ಬರು ಜೀವನ ಸಾಗಿಸಬೇಕು ಎಂದರು.

ಪ್ರಸ್ತುತ ದಿನಗಳಲ್ಲಿ ಪ್ರತಿಯೊಬ್ಬರೂ ಅಧಿಕಾರ ಹಾಗೂ ಸಂಪತ್ತುಗಳೆಂಬ ಮೋಹದಲ್ಲಿ ಸಿಲುಕಿದ್ದು, ಜೀವನದಲ್ಲಿ ತೃಪ್ತಿ ಹಾಗೂ ಮಾನವೀಯತೆಯ ಮೌಲ್ಯಗಳನ್ನು ಮರೆಯುತ್ತಿದ್ದಾರೆ. ಇಂದಿನ ವಿದ್ಯಮಾನಗಳನ್ನು ಗುರುತಿಸಿದರೆ ಮನುಷ್ಯನ ಆಸೆಗಳು ಮಿತಿಮೀರಿವೆ. ಪೂರ್ವಿಕರು ಬಳುವಳಿಯಾಗಿ ನೀಡಿದ ಮಾನವೀಯ ಮೌಲ್ಯಗಳನ್ನು ಮರೆತು ಕೇವಲ ಸ್ವಾರ್ಥ ಮನೋಭಾವ ಮನೆ ಮಾಡಿದೆ. ಇದರಿಂದ ಸಮಾಜದ ಮೇಲೆ ನಕಾರಾತ್ಮಕ ಪ್ರಭಾವ ಬೀರುತ್ತಿರುವುದು ದುರಂತ ಎಂದು ಹೇಳಿದರು.

JCI Shimoga ಭ್ರಷ್ಟಾಚಾರವನ್ನು ಯಾರಿಂದಲೂ ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಸಾಧ್ಯವಿಲ್ಲ. ಆದರೆ ಪ್ರಯತ್ನ ನಡೆಸಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಈ ದೇಶದ ಭವಿಷ್ಯ ಯುವಜನರು. ಅವರ ಪಾತ್ರ ಮಹತ್ವವಾದದ್ದು ಎಂದು ತಿಳಿಸಿದರು.

2025ರ ವಲಯಧ್ಯಕ್ಷ ಜೆಸಿಐ ಸೆನೆಟರ್ ಗೌರೀಶ್ ಭಾರ್ಗವ್ ಕಾರ್ಯಕ್ರಮ ಉದ್ಘಾಟಿಸಿದರು. ರಾಷ್ಟ್ರೀಯ ನಿರ್ದೇಶಕ ಅನುಷ್ ಗೌಡ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ತರಬೇತುದರ ಜಿ.ಸೂರ್ಯನಾರಾಯಣ ವರ್ಮಾ, 2026ರ ನಿಯೋಜಿತ ವಲಯಧ್ಯಕ್ಷ ಮಧುಸೂದನ ನಾವಡ, ನಿಯೋಜಿತ ಉಪಾಧ್ಯಕ್ಷ ಗಣೇಶ್, ರಮೇಶ್ ಪೈ, ಜೆಸಿಐ ಶಿವಮೊಗ್ಗ ವಿವೇಕ್ ಘಟಕದ ನಿಯೋಜಿತ ಅಧ್ಯಕ್ಷೆ ಮಂಜುಳಾ ಕೇಶವ್, ಕಾರ್ಯದರ್ಶಿ ವಿಜಯಲಕ್ಷ್ಮೀಕದಂಬ, ಗಣೇಶ್ ವಿಜಯಕುಮಾರ್, ವಲಯ ಪದಾಧಿಕಾರಿಗಳು ಮತ್ತು ಜೆಸಿಐ ಶಿವಮೊಗ್ಗ ವಿವೇಕ್ ಘಟಕದ ಸದಸ್ಯರು ಇದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Shimoga News ಗೋಪಾಲ ಗೌಡರು ಶಿವಮೊಗ್ಗ ಜಿಲ್ಲೆಯನ್ನ ಸಮಾಜವಾದದ ತೊಟ್ಟಿಲನ್ನಾಗಿ ರೂಪಿಸಿದವರು- ವೈ.ಎಸ್.ವಿ.ದತ್ತ.

Shimoga News ನಗರದ ಮಥುರಾ ಪ್ಯಾರಡೈಸ್ ಸಭಾಂಗಣದಲ್ಲಿ ಮಾಜಿ ಶಾಸಕ ಹಾಗೂ...

Klive Special Article ಕೆ ಲೈವ್ ವಿಶೇಷ.” ವಿಕ್ರಮ ಮತ್ತು ಶಾಲಿವಾಹನ ಶಕಪುರುಷರು” ಒಂದು ಚಿಂತನೆ.ಲೇ: ದಿಲೀಪ್ ನಾಡಿಗ್,ಶಿವಮೊಗ್ಗ.

ಎನ್.ಜಯಭೀಮ ಜೊಯ್ಸ್. ಶಿವಮೊಗ್ಗ. Klive Special Article ತೈತ್ತಿರೀಯ ಅರಣ್ಯಕದಲ್ಲಿರುವ ಶ್ಲೋಕದಂತೆ "ಕ್ವೇದಮಭ್ರಂ ನಿವಿಶತೇ...

Kote SeethaRamanjaneya Temple ಇಂದಿನಿಂದ ಕೋಟೆ ಶ್ರೀಸೀತಾರಾಮಾಂಜನೇಯ ಸ್ವಾಮಿ ದೇಗುಲದಲ್ಲಿ ಶ್ರೀರಾಮ ನವಮಿ ಉತ್ಸವಕ್ಕೆ ಚಾಲನೆ

Kote SeethaRamanjaneya Temple ಕೋಟೇ ಶ್ರೀ ಸೀತಾರಾಮಾಂಜನೇಯ ಸ್ವಾಮಿ ದೇವಾಲಯದಲ್ಲಿ ಶ್ರೀ...

Women’s Day ವೃದ್ಧಾಪ್ಯದ ಆರೋಗ್ಯ ಸಮಸ್ಯೆಗಳ ಬಗ್ಗೆ ಅರಿವಿರಲಿ- ಡಾ.ಪ್ರಿಯಾಂಕ ಚೌಹಾಣ್.

Women's Day ಜೆಸಿ ಶಿವಮೊಗ್ಗ ಚಿರಂತನದ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು...