Shivamooga Police ಶಿವಮೊಗ್ಗ ನಗರದ ಬಿ.ಹೆಚ್.ರಸ್ತೆಯ ಬ್ಲೂಮೂನ್ ವೈನ್ ಶಾಪ್ ಎದುರು ಫುಟ್‌ಪಾತ್ ಮೇಲೆ ಸುಸ್ತಾಗಿ ಮಲಗಿದ್ದ ಸುಮಾರು 35 -40 ವರ್ಷದ ವ್ಯಕ್ತಿಯನ್ನು ಅಂಬ್ಯುಲೆನ್ಸ್ ಮೂಲಕ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಡಿ. 11 ರಂದು ಮೃತಪಟ್ಟಿರುತ್ತಾನೆ.
ಈ ವ್ಯಕ್ತಿಯ ಹೆಸರು, ವಿಳಾಸ ಮತ್ತು ವಾರಸುದಾರರ ಬಗ್ಗೆ ಯಾವುದೇ ಮಾಹಿತಿ ದೊರಕಿರುವುದಿಲ್ಲ. ಈ ವ್ಯಕ್ತಿಯ ಚಹರೆ 5.5 ಅಡಿ ಎತ್ತರವಿದ್ದು, ಎಣ್ಣೆಗೆಂಪು ಮೈಬಣ್ಣ, ದುಂಡುಮುಖ, ತೆಳುವಾದ ಮೈಕಟ್ಟು ಹೊಂದಿರುತ್ತಾರೆ. ಎದೆಯ ಮೇಲೆ “ಹುಲುಗಪ್ಪ” ಮತ್ತು ಅಂಜನಪ್ಪ” ಹಾಗೂ ಎಡಗೈನ ಒಳಭಾಗದಲ್ಲಿ “ಈರಮ್ಮ” ಹಾಗೂ ಬಲಗೈನ ಒಳಭಾಗದಲ್ಲಿ ‘ಅಪ್ಪ’ ಮತ್ತು ತ್ರಿಶೂಲದ ಚಿಹ್ನೆಯಿರುವ ಹಚ್ಚೆ ಗುರುತುಗಳು ಇರುತ್ತದೆ.
ಮೈಮೇಲೆ ಬಿಳಿಬಣ್ಣದ ಕಪ್ಪು ಚುಕ್ಕೆಯಿರುವ ತುಂಬು ತೋಳಿನ ಶರ್ಟ್ ಮತ್ತು ಕಪ್ಪು ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿರುತ್ತಾನೆ.
Shivamooga Police ಈ ಮೃತ ವ್ಯಕ್ತಿಯ ವಾರಸುದಾರರ ಬಗ್ಗೆ ಮಾಹಿತಿ ಇದ್ದಲ್ಲಿ ದೊಡ್ಡಪೇಟೆ ಪೊಲೀಸ್ ಠಾಣೆ ದೂ.ಸಂ.: 08182-261414/ 9916882544 ಗಳನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ತಿಳಿಸಿದೆ.
