Roller Skating ಇಲ್ಲಿನ ನಮ್ಮ ಶಿವಮೊಗ್ಗ ರೋಲರ್ ಸ್ಕೇಟಿಂಗ್ ಅಸೋಸಿಯೇಷನ್ ನ ಇಬ್ಬರು ಕ್ರೀಡಾಪಟುಗಳು ಕರ್ನಾಟಕ ಶಿಕ್ಷಣ ಇಲಾಖೆ ನಡೆಸಿದ ರಾಜ್ಯಮಟ್ಟದ ಸ್ಕೇಟಿಂಗ್ ಪಂದ್ಯಾವಳಿಯಲ್ಲಿ ಚಿನ್ನ ಹಾಗೂ ಬೆಳ್ಳಿ ಪದಕ ಪಡೆಯುವ ಮೂಲಕ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದು, ಜಿಲ್ಲೆಗೆ ಕೀರ್ತಿ ತಂದ ಕ್ರೀಡಾಪಟುಗಳನ್ನು ಸಂಸ್ಥೆ ಅಭಿನಂದಿಸಿದೆ.
ರಾಜ್ಯಮಟ್ಟದ ಸ್ಕೇಟಿಂಗ್ ಕ್ರೀಡಾ ಪಂದ್ಯಾವಳಿಯು ಬೆಂಗಳೂರಿನ ಗಿಡ್ಡೇನಹಳ್ಳಿ ಸಿಟಿ ಸ್ಟೇಟರ್ಸ್ ಅರೆನಾದಲ್ಲಿ ನಡೆದ ರಾಜ್ಯಮಟ್ಟದ ಪಂದ್ಯಾವಳಿಯಲ್ಲಿ 2000, 1000 ಹಾಗೂ 500 ಮೀಟರ್ ಸ್ಕೇಟಿಂಗ್ ಪಂದ್ಯಾವಳಿಯಲ್ಲಿ ನಮ್ಮ ಶಿವಮೊಗ್ಗ ಸಂಸ್ಥೆಯ ಕ್ರೀಡಾಪಟುಗಳು ಮೂರು ಚಿನ್ನದ ಪದಕ ಪಡೆದಿದ್ದು, ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ಶಿವಮೊಗ್ಗದ ಜುಲ್ಪಿಕರ್ ಹಾಗೂ ನಾಜಿಮಾ ದಂಪತಿಗಳ ಮಗನಾಗಿರುವ ಪೈಸಲ್ ಸಾಧನೆಗೆ ಅಭಿನಂದನೆ ಸಲ್ಲಿಸಲಾಗಿದೆ.
ಅಂತೆಯೇ ಎರಡು ಬೆಳ್ಳಿ ಪದಕ ಪಡೆದ ನಿಖಿತಾ ಎನ್. ಉಪಾಧ್ಯ ಅವರು 500 ಮೀ ರೇಸ್ ಹಾಗೂ 3000 ಮೀಟರ್ ರೋಡ್ ರೇಸ್ ಸ್ಪರ್ದೆಯಲ್ಲಿ ದ್ವಿತೀಯ ಬಹುಮಾನ ಪಡೆದಿದ್ದಾರೆ. ಜಿ. ಆರ್. ನಾಗರಾಜ ಹಾಗು ಅಶ್ವಿನಿ ಹೆಚ್. ವಿ. ದಂಪತಿಗಳ ಪುತ್ರಿ ನಿಖಿತಾ ಸಾಧನೆಗೆ ಅಭಿನಂದಿಸಲಾಗಿದೆ.
Roller Skating ಈ ಇಬ್ಬರು ಕ್ರೀಡಾಪಟುಗಳು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದು, ಇವರು ನಮ್ಮ ಶಿವಮೊಗ್ಗ ಸ್ಕೇಟಿಂಗ್ ಸಂಸ್ಥೆಯ ವಿಶ್ವಾಸ ಹಾಗೂ ಅತೀಶ್ ಅವರ ಬಳಿ ತರಬೇತಿ ಪಡೆಯುತ್ತಿದ್ದರು.
ಜಿಲ್ಲೆಗೆ ಕೀರ್ತಿ ತಂದ ಕ್ರೀಡಾಪಟುಗಳನ್ನು ನಮ್ಮ ಶಿವಮೊಗ್ಗ ಸಂಸ್ಥೆಯ ಅಧ್ಯಕ್ಷ ಮೋಹನ್ ಕುಮಾರ್, ಪ್ರಧಾನ ಕಾರ್ಯದರ್ಶಿ ಎಂ ರವಿ ಹಾಗೂ ಸಂಸ್ಥೆಯ ಎಸ್ ಕೆ ಗಜೇಂದ್ರ ಸ್ವಾಮಿ, ಉಮಾ ರವಿ, ಯುವಜನ ಮತ್ತು ಕ್ರೀಡಾಧಿಕಾರಿ ರೇಖ್ಯಾನಾಯ್ಕ್ ಹಾಗೂ ಸಂಸ್ಥೆಯ ಪದಾಧಿಕಾರಿಗಳು, ಪೋಷಕರು ಅಭಿನಂದಿಸಿದ್ದಾರೆ.
Date:
