Varna Pallata ನಗರದ ಯಕ್ಷ ಸಂವರ್ಧನಾ (ರಿ) ವತಿಯಿಂದ ಪ್ರಸಿದ್ಧ ಶ್ರೀ ಹನುಮಗಿರಿ ಮೇಳದ ವತಿಯಿಂದ ವರ್ಣ ಪಲ್ಲಟ ಯಕ್ಷಗಾನ ಪ್ರದರ್ಶನವನ್ನು ಆಯೋಜಿಸಲಾಗಿದೆ.
ಗೋಪಾಳದ ಸಿ ಬ್ಲಾಕ್‌ನಲ್ಲಿರುವ ಶ್ರೀ ಸಿದ್ಧಿ-ಬುದ್ಧಿ ಮಹಾಗಣಪತಿ ಮತ್ತು ಶ್ರೀ ಚೌಡೇಶ್ವರಿ ದೇವಸ್ಥಾನದಲ್ಲಿ ಡಿ. ೧೫ರ ಸೋಮವಾರ ಸಂಜೆ ೦೫.೩೦ರಿಂದ ಈ ಯಕ್ಷಗಾನ ಪ್ರದರ್ಶನದಲ್ಲಿ ಭಾಗವತರಾಗಿ ರವಿಚಂದ್ರ ಕನ್ನಡಿಕಟ್ಟೆ. ಚಿನ್ಮಯ್ ಭಟ್ ಕಲ್ಲಡ್ಕ ಪಾಲ್ಗೊಳ್ಳಲಿದ್ದಾರೆ. ಚಂಡೆ, ಮದ್ದಳೆಯಲ್ಲಿ ದೇಲಂತಮಜಲು ಸುಬ್ರಮಣ್ಯ ಭಟ್, ಚೈತನ್ಯ ಕೃಷ್ಣ ಪದ್ಯಾಣ, ಶ್ರೀಧರ ವಿಟ್ಲ , ಕೌಶಲ್ ರಾವ್ ಪುತ್ತಿಗೆ, ನಿಶ್ಚತ್ ಜೋಡುಕಲ್ಲು ಪಾಲ್ಗೊಳ್ಳಲಿದ್ದಾರೆ. ವಿದೂಷಕರಾಗಿ ಸೀತಾರಾಮ್ ಕುಮಾರ್ ಕಟೀಲು, ಮೋಹನ್ ಮುಚ್ಚುರು, ಸ್ತಿçà ವೇಷದಲ್ಲಿ ಸಂತೋಷ ಹಿಲಿಯಾಣ, ರಕ್ಷಿತ್ ಶೆಟ್ಟಿ ಪಡ್ರೆ, ಸತೀಶ್ ನೀರ್ಕೆರೆ, ಹರ್ಷ ಸಿದ್ದಾಪುರ ಗಮನ ಸೆಳೆಯಲಿದ್ದಾರೆ. ಪ್ರಧಾನ ಭೂಮಿಕೆಯಲ್ಲಿ ವಾಸುದೇವ ರಂಗಾ ಭಟ್, ಮಧೂರು, ಶ್ರೀ ಜಯಪ್ರಕಾಶ್ ಶೆಟ್ಟಿ ಪೆರ್ಮುದೆ, ಜಗದಾಭಿರಾಮ ಪಡುಬಿದ್ರಿ, ಸದಾಶಿವ ಕುಲಾಲ್ ವೇಣೂರು, ದಿವಾಕರ್ ರೈ ಸಂಪಾಜೆ, ಶಿವರಾಜ್ ಭಜಕೋಡ್ಲು, ಮುಖೇಶ್ ದೇವಧರ್ ನಿಡ್ಲೆ , ಅಜಿತ್ ಪುತ್ತಿಗೆ, ಪ್ರಥ್ವಿಶ್ ಪರ್ಕಳ, ಪೆರ್ಲ ಜಗನ್ನಾಥ ಶೆಟ್ಟಿ, ಪ್ರಜ್ವಲ್ ಕುಮಾರ್ ಗುರುವಾಯನಕೆರೆ, ಪ್ರಸಾದ್ ಸವನೂರು, ಕೀರ್ತನ್ ಕಾರ್ಕಳ, ಸತೀಶ್ ಎಡಮೊಗೆ, ರೂಪೇಶ್ ಆಚಾರ್ಯ, ಅಭಿಷೇಕ್ ಕಲ್ಲಡ್ಕ , ಪ್ರಜ್ವಲ್ ಶೆಟ್ಟಿ, ಸೋಹನ್ ರೈ ರಾಮಕುಂಜ, ವಿದ್ಯಾಭೂಷಣ ಪಂಚಾಚೆರವರ ಅಭಿನಯವಿದೆ.
Varna Pallata ಯಕ್ಷಗಾನ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಆಯೋಜಕರಾದ ಯಕ್ಷ ಸಂವರ್ಧನಾ ಟ್ರಸ್ಟ್ ಹಾಗೂ ಶ್ರೀ ಸಿದ್ಧಿ-ಬುದ್ಧಿ ಮಹಾಗಣಪತಿ ಮತ್ತು ಶ್ರೀ ಚೌಡೇಶ್ವರಿ ದೇವಸ್ಥಾನ ಸಮಿತಿಯ ಅಧ್ಯಕ್ಷರು ಪದಾಽಕಾರಿಗಳು ಕೋರಿದ್ದಾರೆ.
ವಿವರಗಳಿಗೆ 9845094318, 9342520413, 9632952015, 8217318814 ರಲ್ಲಿ ಸಂಪರ್ಕಿಸಬಹುದು.
Varna Pallata ಶಿವಮೊಗ್ಗದಲ್ಲಿ ” ವರ್ಣ ಪಲ್ಲಟ ” ಯಕ್ಷಗಾನ ಪ್ರದರ್ಶನ.
Date:
