ಶಿವಮೊಗ್ಗ ತಾಲ್ಲೂಕಿನ ಒಂದು ಪುಟ್ಟ ಶಾಲೆ ಆಡಿನಕೊಟ್ಟಿಗೆಯಲ್ಲಿ ಸಾಮಾನ್ಯ ಶಿಕ್ಷಕಿ. ನನ್ನಂತಹವರನ್ನು ಇಂದು ಕರೆಸಿ ಸನ್ಮಾನಿಸುತ್ತಿರುವುದು ನನಗೆ ತುಂಬ ಸಂತೋಷವನ್ನುಂಟು ಮಾಡಿದೆ. ಅದಕ್ಕಾಗಿ ಎಲ್ಲರಿಗೂ ಧನ್ಯವಾದಗಳು ಎಂದು ಶಿಕ್ಷಕಿ ಕೆ.ಎಸ್.ಗೀತಾ ತಿಳಿಸಿದ್ದಾರೆ. ಅವರು ಸಹ್ಯಾದ್ರಿ ಲಲಿತ ಕಲಾ ಅಕಾಡೆಮಿ ವತಿಯಿಂದ ರಾಜ್ಯೋತ್ಸವದ ಪ್ರಯುಕ್ತ ವನಿತಾ ವಿದ್ಯಾಲಯದಲ್ಲಿ ನಡೆದ ಸನ್ಮಾನ ಸ್ವೀಕರಿಸಿ ಮಾತನಾಡುತ್ತಿದ್ದರು.
ರಾಜ್ಯೋತ್ಸವದ ಮಹತ್ವದ ಬಗ್ಗೆ ಎಂ ಎನ್ ಸುಂದರ್ ರಾಜ್ ಅವರು ತಿಳಿಸುತ್ತಾ, ಕನ್ನಡ ಮಾಧ್ಯಮದಲ್ಲಿ ಓದಿ ನೂರಾರು ಗೌರವ ಡಾಕ್ಟರೇಟ್ ಗಳಿಸಿ, ಭಾರತರತ್ನ ಪ್ರಶಸ್ತಿಯನ್ನು ಪಡೆದ ಸಿ.ಎನ್.ಆರ್.ರಾವ್ ಬಗ್ಗೆ ನಾವೆಲ್ಲ ಅಭಿಮಾನ ಹೊಂದಬೇಕು ಎಂದು ಹೇಳಿದರು
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಜಿ. ವಿಜಯಕುಮಾರ್ ಅವರು ಮಾತನಾಡಿ ಕನ್ನಡ ನಿತ್ಯೋತ್ಸವವಾಗಿ ಆಚರಿಸಬೇಕೆಂದು ಕರೆನೀಡಿದರು.
ಮಕ್ಕಳಿಗೆ ರಸಪ್ರಶ್ನೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಇದನ್ನು ಹರಿಪ್ರಸಾದ್ ನಡೆಸಿಕೊಟ್ಟರು. ವಿಜೇತ ಮಕ್ಕಳಿಗೆ ಜಿಲ್ಲಾ ಸರ್ವೋದಯ ಮಂಡಳಿ ಅಧ್ಯಕ್ಷ ಮನೋಹರ್ ಬಹುಮಾನ ವಿತರಿಸಿ, ಮಕ್ಕಳಲ್ಲಿ ಸ್ಫರ್ಧಾ ಮನೋಭಾವ ಬೆಳೆಯಲು ಇಂಥಾ ಕಾರ್ಯಕ್ರಮಗಳ ಅವಶ್ಯಕತೆ ಇದೆಯೆಂದು ಶ್ಲಾಘಿಸಿದರು.
ಶ್ರೀಮತಿ ತಾರಾಪ್ರಸಾದ್ ಅವರು ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ತಮ್ಮ ಸಂಸ್ಥೆಯು ಒಬ್ಬ ನಿಷ್ಠಾವಂತ ಶಿಕ್ಷಕಿಯನ್ನು ಸನ್ಮಾನಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದು ತಿಳಿಸಿದರು.
ಪ್ರಾರಂಭದಲ್ಲಿ ಹರಿಪ್ರಸಾದ್ ಸ್ವಾಗತಿಸಿ, ಕೊನೆಯಲ್ಲಿ ವಂದಿಸಿದರು.
ಮೊದಲು ಶಾಲಾ ಮಕ್ಕಳಿಂದ ಪ್ರಾರ್ಥನೆ ನಡೆಯಿತು.
