B.Y. Raghavendra ಕೇಂದ್ರ ಕಾರ್ಮಿಕ ಹಾಗೂ ಉದ್ಯೋಗ ಸಚಿವರಾದ ಸನ್ಮಾನ್ಯ ಡಾ. ಮನ್ಸುಖ್ ಮಾಂಡವಿಯಾ ಅವರನ್ನು ನವದೆಹಲಿಯಲ್ಲಿ ಭೇಟಿ ಮಾಡಿ, ಶಿವಮೊಗ್ಗದಲ್ಲಿ ESIC Sub-Regional Office (SRO) ಸ್ಥಾಪಿಸಲು ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಅವರು ಮನವಿ ಸಲ್ಲಿಸಿದರು.
ಶಿವಮೊಗ್ಗ, ಭದ್ರಾವತಿ, ದಾವಣಗೆರೆ, ಚಿತ್ರದುರ್ಗ ಮತ್ತು ಹರಿಹರ ಸೇರಿ ಒಟ್ಟು 280000 ವಿಮಾದಾರರು ಇದ್ದು — Sub-Regional Office ಸ್ಥಾಪನೆಗೆ ಅಗತ್ಯವಾದ ಮಾನದಂಡವನ್ನು ಸ್ಪಷ್ಟವಾಗಿ ಮೀರುತ್ತದೆ ಹಾಗೂ ಪ್ರಸ್ತುತ ಸಾವಿರಾರು ಉದ್ಯೋಗದಾತರು ಮತ್ತು ಕಾರ್ಮಿಕರು 220 ಕಿಮೀ ದೂರದ ಹುಬ್ಬಳ್ಳಿಗೆ ಪ್ರಯಾಣಿಸುತ್ತಿದ್ದು, ಹೊಸ SRO ಸ್ಥಾಪನೆಯಾದರೆ ಐದು ನಗರಗಳ 2.8 ಲಕ್ಷಕ್ಕೂ ಹೆಚ್ಚು ಕಾರ್ಮಿಕರಿಗೆ ತ್ವರಿತ ಮತ್ತು ಸ್ಥಳೀಯ ESI ಸೇವೆಗಳು ಲಭ್ಯವಾಗಲಿವೆ ಎಂದು ತಿಳಿಸಲಾಯಿತು.
B.Y. Raghavendra ಈ ಮನವಿಗಳಿಗೆ ಕೇಂದ್ರ ಸಚಿವ ಮನಸುಖ್ ಮಾಂಡವೀಯ ಅವರು ಸಕಾರಾತ್ಮಕ ಪ್ರತಿಕ್ರಿಯೆ ನೀಡಿದ್ದು, ಆದ್ಯತೆ ಆಧಾರದ ಮೇಲೆ ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.
