ಉರುಳು ಹಾಕಿ ಪ್ರಾಣಿ ಬಲಿ ಪಡೆಯುತ್ತಿರುವವರ ವಿರುದ್ಧ ಕಠಿಣ ಕ್ರಮಕ್ಕೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅರಣ್ಯಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಶಿವಮೊಗ್ಗ ಜಿಲ್ಲೆಯ ವನ್ಯಜೀವಿ ವಿಭಾಗಗಳಲ್ಲಿ ಕಳೆದ 7 ತಿಂಗಳುಗಳಲ್ಲಿ 11 ಕರಡಿ ಮತ್ತು 4 ಚಿರತೆಗಳು ಅಕ್ರಮವಾಗಿ ಅಳವಡಿಸಿದ್ದ ಉರುಳಿಗೆ ಸಿಲುಕಿ ಸಾವನಪ್ಪಿವೆ. ಈ ಪೈಕಿ 3 ಕರಡಿ ಹಾಗೂ 2 ಚಿರತೆಗಳು ಮೃತಪಟ್ಟಿರುವ ವಿಚಾರ ವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು
ಆನೆ ಕಂದಕಗಳ ಬಳಿ ಬೆಳೆದ ಹುಲ್ಲಿನ ನಡುವೆ ಉರುಳು ಅಳವಡಿಸಿ ಕಳ್ಳಬೇಟೆ ಪ್ರಯತ್ನ ನಡೆಯುತ್ತಿದ್ದು ಇದರಿಂದ ವನ್ಯಜೀವಿಗಳು ಸಂಕಷ್ಟಕ್ಕೆ ಸಿಲುಕುತ್ತಿವೆ ಎಂಬ ಮಾಹಿತಿ ಲಭ್ಯವಾಗಿದೆ. ಇದರ ಜೊತೆಗೆ ಭದ್ರಾವತಿ, ಚಿಕ್ಕಮಗಳೂರು ಭಾಗದಲ್ಲೂ ಈ ರೀತಿಯ ಸಮಸ್ಯೆ ಇರುವ ಬಗ್ಗೆ ದೂರುಗಳು ಬಂದಿವೆ. ಉರುಳು ಮತ್ತು ತಂತಿ ಬೇಲಿಗೆ ಅಕ್ರಮವಾಗಿ ಹರಿಸುವ ವಿದ್ಯುತ್ ಸ್ಪರ್ಶದಿಂದ ವನ್ಯಜೀವಿಗಳು ಸಾವಿಗೀಡಾಗುತ್ತಿರುವ ವಿಭಾಗಗಳಲ್ಲಿ ಒಂದು ವಿಶೇಷ ತಂಡ ರಚಿಸಿ ಕಾಡಿನಂಚಿನ ಗ್ರಾಮದ ಜನರಿಗೆ ಜಾಗೃತಿ ಮೂಡಿಸಿ, ಉರುಳುಗಳನ್ನು ತೆರವು ಮಾಡಿಸಲು. ಗಸ್ತು ಹೆಚ್ಚಿಸಿ ಉರುಳು ಮತ್ತು ತಂತಿ ಬೇಲಿಗೆ ಅಕ್ರಮ ವಿದ್ಯುತ್ ಸಂಪರ್ಕ ಅಳವಡಿಕೆಯ ಬಗ್ಗೆ ಪರಿಶೀಲನೆ ನಡೆಸಲು ಹಾಗೂ ವನ್ಯಜೀವಿಗಳ ಸಾವಿಗೆ ಕಾರಣರಾದವರ ವಿರುದ್ಧ ಪ್ರಕರಣ ದಾಖಲಿಸುಂತೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಸೂಚನೆ ನೀಡಿದ್ದಾರೆ.
ಉರುಳು ಹಾಕಿ ಪ್ರಾಣಿ ಬಲಿ ಪಡೆಯುತ್ತಿರುವವರ ವಿರುದ್ಧ ಕಠಿಣ ಕ್ರಮಕ್ಕೆ ಅರಣ್ಯ ಸಚಿವರು ಸೂಚನೆ
Date:
