Sahyadri Narayana Multispeciality Hospital ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳಾದ ಸಹ್ಯಾದ್ರಿ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ (ಶಿವಮೊಗ್ಗ), ಶಂಕರ ಕಣ್ಣಿನ ಆಸ್ಪತ್ರೆ (ಶಿವಮೊಗ್ಗ) ಮತ್ತು ವಿಐಎಸ್‌ಎಲ್ ಆಸ್ಪತ್ರೆಗಳ ಸಹಯೋಗದೊಂದಿಗೆ ಭದ್ರಾವತಿಯ ಸಿಂಗನಮನೆ ಗ್ರಾಮದಲ್ಲಿ ಸಮಗ್ರ ಉಚಿತ ವೈಧ್ಯಕೀಯ ಆರೋಗ್ಯ ತಪಾಸಣಾ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಿತು.
ಹೃದಯಶಾಸ್ತ್ರ, ಮೂಳೆ ಚಿಕಿತ್ಸೆ, ಸಾಮಾನ್ಯ ತಪಾಸಣೆ, ನೇತ್ರವಿಜ್ಞಾನ, ದಂತವೈದ್ಯಶಾಸ್ತ್ರ ಮತ್ತು ಸ್ತ್ರೀ ರೋಗ ಶಾಸ್ತ್ರದಂತಹ ಕ್ಷೇತ್ರಗಳಲ್ಲಿ ಅನುಭವಿ ತಜ್ಞವೈದ್ಯರು ಭಾಗವಹಿಸುವ ಮೂಲಕ ಆರೋಗ್ಯ ಸಮಾಲೋಚನೆ ಮತ್ತು ರೋಗನಿರ್ಣಯ ಸೇವೆಗಳನ್ನು ನೀಡಲಾಯಿತು. ಈ ಉಪಕ್ರಮದ ಭಾಗವಾಗಿ ರಕ್ತದೊತ್ತಡ (ಬಿಪಿ), ರಕ್ತದಲ್ಲಿನ ಸಕ್ಕರೆ ಪರೀಕ್ಷೆ, ಕಣ್ಣಿನ ಪರೀಕ್ಷೆ, ದಂತ ತಪಾಸಣೆ, ಎಲೆಕ್ಟ್ರೋಕಾರ್ಡಿಯೋಗ್ರಾಮ್(ಇಸಿಜಿ), 2ಡಿ ಎಕೋಕಾರ್ಡಿಯೋಗ್ರಫಿ (2ಡಿ ಎಕೋ) ಮತ್ತು ಸ್ತ್ರೀ ಸಂಬಂಧಿತ ರೋಗಗಳ ತಪಾಸಣೆಗಳನ್ನು ಮಾಡಲಾಯಿತು.
ಶ್ರೀ ಬಿ. ವಿಶ್ವನಾಥ, ಮುಖ್ಯ ಮಹಾಪ್ರಬಂಧಕರು (ಮಾನವಸಂಪನ್ಮೂಲ), ವಿಐಎಸ್‌ಎಲ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಇವರೊಂದಿಗೆ ವಿಐಎಸ್‌ಎಲ್‌ನ ಅಧಿಕಾರಿಗಳಾದ ಡಾ. ಕೆ.ಎಸ್. ಸುಜೀತ್ ಕುಮಾರ್, ಡಾ. ಎಸ್.ಎನ್. ಸುರೇಶ್, ಶ್ರೀ ಎಮ್.ಎಲ್. ಯೋಗೀಶ್, ಸಿಂಗನಮನೆ ಗ್ರಾಮದಿಂದ ಶ್ರೀಮತಿ ಮಂಜುಳ ಅಧ್ಯಕ್ಷರು ಸಿಂಗನಮನೆ ಗ್ರಾಮಪಂಚಾಯ್ತಿ, ಶ್ರೀಮತಿ ಕವಿತ.ಕೆ.ಬಿ, ಸದಸ್ಯರು, ಸಿಂಗನಮನೆ ಗ್ರಾಮಪಂಚಾಯ್ತಿ, ಡಾ. ಪ್ರಭುದೇವ, ಸಿಂಗನಮನೆ ಪ್ರಾಥಮಿಕ ಆರೋಗ್ಯ ಕೇಂದ್ರ, ಸಹ್ಯಾದ್ರಿ ನಾರಾಯಣ ಆಸ್ಪತ್ರೆಯ ಡಾ. ಸುಪ್ರೀತ, ಡಾ. ಅನ್ಶು ಮತ್ತು ಶ್ರೀ ಗಣೇಶ್. ಶಂಕರ ಕಣ್ಣಿನ ಆಸ್ಪತ್ರೆಯ ಶ್ರೀ ಹರ್ಷ ಆರ್. ಗೌಡ ಮತ್ತು ತಂಡದವರು ಉಪಸ್ಥಿತರಿದ್ದರು. 216 ಗ್ರಾಮಸ್ಥರು ಈ ಶಿಬಿರದ ಸದುಪಯೋಗಪಡಿಸಿಕೊಂಡರು.
ವಿಐಎಸ್‌ಎಲ್‌ವತಿಯಿಂದ ಉಚಿತ ಔಷಧಿಗಳನ್ನು ವಿತರಿಸಲಾಯಿತು.
Sahyadri Narayana Multispeciality Hospital ಸೈಲ್-ವಿಐಎಸ್‌ಎಲ್ ನ ‘ಹಸಿರೆಡೆಗೆ-ನಮ್ಮ ನಡೆ’ ಉಪಕ್ರಮದಡಿಯಲ್ಲಿ ನುಗ್ಗೆ ಮತ್ತು ಪಪ್ಪಾಯಿಯ ಉತ್ತಮ ತಳಿಯ ಬೀಜಗಳನ್ನು ಗ್ರಾಮಸ್ಥರಿಗೆ ಉಚಿತವಾಗಿ ವಿತರಿಸಲಾಯಿತು.
