District Chamber of Commerce and Industry ಬ್ಯಾಂಕಿಂಗ್ ಕ್ಷೇತ್ರದಲ್ಲಿ ಸುಧಾರಣಾ ಕ್ರಮಗಳಿಂದ ಆರ್ಥಿಕವಾಗಿ ಅಭಿವೃದ್ಧಿಯಾಗಲು ಸಹಾಯಕವಾಗಿದೆ ಎಂದು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಬಿ.ಗೋಪಿನಾಥ್ ಹೇಳಿದರು.
ಶಿವಮೊಗ್ಗ ನಗರದ ಕಂಟ್ರಿ ಕ್ಲಬ್‌ನಲ್ಲಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘ, ಶಿವಮೊಗ್ಗ-ಭದ್ರಾವತಿ ಕೈಗಾರಿಕಾ ಸಂಘ, ಇನ್‌ಸ್ಟಿಟ್ಯೂಟ್ ಆಫ್ ಇಂಡಿಯನ್ ಫೌಂಡ್ರಿಮೆನ್ ವತಿಯಿಂದ ಆಯೋಜಿಸಿದ್ದ ಬ್ಯಾಂಕಿಂಗ್ ಕ್ಷೇತ್ರದ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಆರ್ಥಿಕ ಸುಧಾರಣಾ ಯುಗದಲ್ಲಿ ಬ್ಯಾಂಕಿಂಗ್ ಕ್ಷೇತ್ರವು ಸಾಕಷ್ಟು ಬದಲಾವಣೆ ಕಂಡಿದೆ. ಸಾಂಪ್ರದಾಯಿಕ ಬ್ಯಾಂಕಿಂಗ್‌ನಿಂದ ಬದಲಾಗಿ ತಾಂತ್ರಿಕ ಮೇಲ್ದರ್ಜೆಗೆ ಪರಿವರ್ತನೆಯಾಗಿದೆ. ಇಂದು ಬ್ಯಾಂಕಿಂಗ್ ವಲಯದಲ್ಲಿ ಸಾಲ ಪಡೆಯಲು ಬ್ಯಾಂಕ್‌ಗೆ ಹೋಗುವ ಅವಶ್ಯಕತೆ ಇಲ್ಲ. ನಮ್ಮ ಬ್ಯಾಂಕ್ ನಮ್ಮ ಬ್ಯಾಂಕಿಂಗ್ ಕಾನ್ಸೆಪ್ಟ್ ಪ್ರಾರಂಭವಾಗಿ ಕುಳಿತಲ್ಲೇ ಸಾಲ ಪಡೆಯಬಹುದು. ಠೇವಣಿ ಇಡಬಹುದು, ಎಲ್ಲಾ ರೀತಿಯ ಬ್ಯಾಂಕಿಂಗ್ ವ್ಯವಹಾರಗಳನ್ನು ಮಾಡಬಹುದು ಎಂದು ತಿಳಿಸಿದರು.
ಡಿ.ಜಿ.ಬೆನಕಪ್ಪ ಮಾತನಾಡಿ, ಡಿಜಿಟಲ್ ಮೊಬೈಲ್ ಬ್ಯಾಂಕಿಂಗ್ ಕ್ರಾಂತಿಕಾರ ಬ್ಯಾಂಕಿಂಗ್ ಸುಧಾರಣೆಯಾಗಿದೆ. ಸಾರ್ವಜನಿಕರಿಗೆ ಹೆಚ್ಚಿನ ಅನುಕೂಲವಾಗುತ್ತಿದೆ ಎಂದು ತಿಳಿಸಿದರು. ಬ್ಯಾಂಕಿಂಗ್ ಉತ್ಪನ್ನಗಳು, ಜಾಗತಿಕ ಮಾರುಕಟ್ಟೆ, ಟ್ರೇಡ್ ಫೈನಾನ್ಸ್ ಪರಿಹಾರಗಳ ಬಗ್ಗೆ ಚರ್ಚಿಸಲಾಯಿತು.
District Chamber of Commerce and Industry ಕೋಟಕ್ ಮಹಿಂದ್ರಾ ಬ್ಯಾಂಕ್ ಶಿವಮೊಗ್ಗ ಕ್ಲಸ್ಟರ್ ಏರಿಯಾ ಮ್ಯಾನೇಜರ್, ಪೊರ್ಟ್ಪೋಲಿಯೋ ಮ್ಯಾನೇಜರ್ ಸಚಿನ್ ಕಾಮಟೆ, ಏರಿಯಾ ಮ್ಯಾನೇಜರ್ ಕಲ್ಲೋಲ್ ಮಂಜುಂದರ್, ಗಿರೀಶ್ ಹೆಗ್ಡೆ, ಏರಿಯಾ ಮ್ಯಾನೇಜರ್ ಮಂಜುನಾಥ ಗಡಿಯಾರ, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ.ವಿಜಯಕುಮಾರ್, ಕಾರ್ಯದರ್ಶಿ ಎ.ಎಂ.ಸುರೇಶ್, ಖಜಾಂಚಿ ಆರ್.ಮನೋಹರ್ ಮತ್ತಿತರರು ಇದ್ದರು.
District Chamber of Commerce and Industry ಬ್ಯಾಂಕಿಂಗ್ ಕ್ಷೇತ್ರದ ಸುಧಾರಣೆಯಿಂದ ಆರ್ಥಿಕ ಅಭಿವೃದ್ಧಿಗೆ ಅನುಕೂಲ : ಬಿ.ಗೋಪಿನಾಥ್
Date:
