Padma Gandhi Film ಹಿರಿಯ ನಟ ಸುಚೇಂದ್ರ ಪ್ರಸಾದ್ ಚಿತ್ರಕಥೆ-ಸಂಭಾಷಣೆ ಬರೆದು ನಿರ್ದೇಶನ ಮಾಡಿರುವ ಭಾರತೀಯ ಚಿತ್ರರಂಗದಲ್ಲಿ ಹೊಸ ದಾಖಲೆ ನಿರ್ಮಿಸಲು ಮುಂದಾಗಿರುವ ಪದ್ಮಗಂಧಿ ತೆರೆಗೆ ಸಿದ್ಧವಾಗಿದೆ.
ಕನ್ನಡ, ಸಂಸ್ಕೃತ ಮತ್ತು ಹಿಂದಿ ಭಾಷೆಯಲ್ಲಿ ನಿರ್ಮಾಣವಾಗಿರುವ ನಿರ್ಮಾಣವಾಗಿರುವ ಈ ಚಿತ್ರಕ್ಕೆ ನಿವೃತ ಪ್ರಾಧ್ಯಾಪಕಿ ಎಸ್. ಆರ್.ಲೀಲಾ ಚಿತ್ರದ ಕಥೆ ಬರೆದಿದ್ದು, ಚಿತ್ರ ನಿರ್ಮಾಣಕ್ಕೂ ಬಂಡವಾಳ ಹೂಡಿದ್ದಾರೆ.
ಕಳೆದ ತಿಂಗಳು ದುಬೈನಲ್ಲಿ ನಡೆದ ಇಂಡೋ ದುಬೈ ಇಂಟರ್ ನ್ಯಾಷನಲ್ ಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡ ಪದ್ಮಗಂಧಿ ಅತ್ಯುತ್ತಮ ಚಿತ್ರ ಪ್ರಶಸ್ತಿ ಪಡೆದುಕೊಂಡಿದೆ.
ನವೆಂಬರ್‌ನಲ್ಲಿ ನಡೆಯಲಿರುವ ಪನೋರಮ ಚಿತ್ರೋತ್ಸವಕ್ಕೂ ಪದ್ಮಗಂಧಿ ಆಯ್ಕೆಯಾಗಿದೆ. ಈ ಸಿನಿಮಾವು ಆದಿಯಿಂದ ಅಂತ್ಯದವರೆಗೂ ಪದ್ಮಗಂಧಿಯ ಪರಿಮಳ ಪಸರಿಸುತ್ತದೆ. ದೈವಿಕ ಗಂಧ ಮೆತ್ತಿಕೊಂಡಿರುವ ಕಮಲದ ಹೂವಿನ ಬಗ್ಗೆಯೇ ಕಥೆ ಇರುವುದು ವಿಶೇಷ, ಮಹಾಪದ್ಮ, ಗುರುಮಾತೆ ಪಾತ್ರದಲ್ಲಿ ಉಡುಪಿಯ ಪರಿಪೂರ್ಣ ಚಂದ್ರಶೇಖರ್ ಇವರೊಂದಿಗೆ ರಿಯಲ್‌ದಲ್ಲಿ ಹೆಸರು ಮಾಡಿರುವ ಡಾ. ಆರ್.ಗಣೇಶ್, ಡಾ.ಗೌರಿ ಸುಬ್ರಹ್ಮಣ್ಯ, ಡಾ.ಪ್ರೇಮಾ, ಡಾ.ಹೇಮಂತ್‌ಕುಮಾರ್, ಆಚಾರ್ಯ ಮೃತ್ಯುಂಜಯಶಾಸ್ತ್ರಿ, ಜಿ.ಎಲ್.ಭಟ್ ಮೃತ್ಯುಂಜಯ ಶಾಸ್ತ್ರಿ, ಪಂಡಿತಾ ಪ್ರಸನ್ನ ವೈದ್ಯ, ಡಾ.ದೀಪಕ್ ಪರಮಶಿವನ್, ಹೇಮಂತಕುಮಾರ. ಮುಂತಾದವರು ಚಿತ್ರದಲ್ಲಿ ನಟಿಸಿದ್ದಾರೆ.
ಡಾ.ದೀಪಕ್ ಪರಮಶಿವನ್ ಸಂಗೀತ, ಮನುಯಪ್ಪಾರ್-ನಾಗರಾಜ್ ಅದ್ವಾನಿ, ಗಿರಿಧರ್ ದಿವಾನ್ ಛಾಯಾಗ್ರಹಣ, ಎನ್.ನಾಗೇಶ್ ನಾರಾಯಣಪ್ಪ ಸಂಕಲನ ಈ ಚಿತ್ರಕ್ಕಿದೆ. ಭಾರತೀಯ ಪರಂಪರೆಯನ್ನು ಚಿತ್ರಿಸಿ ನೈಜವಾಗಿ ತೆರೆಗೆ ತರುವಲ್ಲಿ ನಟ ನಿರ್ದೇಶಕ ಸುಚೇಂದ್ರ ಪ್ರಸಾದ್ ತಮ್ಮೆಲ್ಲ ಜಾಣ್ಮೆಯನ್ನು ದಾರೆಯೆರದಿದ್ದಾರೆ.
ಪ್ರತಿಯೊಬ್ಬರೂ ನೋಡಲೇಬೇಕಾದ ಚಿತ್ರ ಇದಾಗಿದೆ.
Padma Gandhi Film ಪ್ರತಿಯೊಂದು ಹಂತದಲ್ಲಿ ಚಿತ್ರ ಕಥೆಗೆ ಪಾತ್ರದ ಮೂಲಕ ಜೀವಕಳೆ ತುಂಬಿದ ಪದ್ಮಗಂಧಿ ಎಲ್ಲರ ಮನಸ್ಸನ್ನು ಗೆಲ್ಲುವುದು ಸಂಶಯವೇ ಇಲ್ಲ.
ಪದ್ಮಗಂಧಿ ಇದೇ ತಿಂಗಳು 12 ನೆ ತಾರೀಖಿನಂದು ಶಿವಮೊಗ್ಗ ನಗರದ ಭರತ್ (ನೆಹರೂ ರಸ್ತೆಯಲ್ಲಿ ಇರುವ ಸಿಟಿ ಮಾಲ್) ಚಿತ್ರಮಂದಿರದಲ್ಲಿ ಬೆಳಿಗ್ಗೆ 11 ರಿಂದ 1 ಗಂಟೆಯವರೆಗೆ ಪ್ರದರ್ಶನವಿರುತ್ತದೆ.
