Department of School Education ಬೆಂಗಳೂರಿನಲ್ಲಿ ಶಾಲಾ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ನಡೆದ ರಾಜ್ಯ ಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಶಿವಮೊಗ್ಗ ಜಿಲ್ಲೆಯ 17 ವರ್ಷ ವಯೋಮಿತಿಯೊಳಗಿನ ಪ್ರೌಢಶಾಲಾ ಬಾಲಕ ಮತ್ತು ಬಾಲಕಿಯರು ಎರಡು ದಿನ ನಡೆದ ಕ್ರೀಡಾಕೂಟದಲ್ಲಿ ಭಾಗವಹಿಸಿ, ಅಥ್ಲೆಟಿಕ್ಸ್ ವಿಭಾಗದಲ್ಲಿ ಉತ್ತಮ ಆಟದ ಪ್ರದರ್ಶನ ನೀಡಿ, ಬಾಲಕ ಮತ್ತು ಬಾಲಕಿಯರು ಪ್ರಥಮ, ದ್ವಿತೀಯ ಸ್ಥಾನ ಪಡೆದು ಉತ್ತಮ ಸಾಧನೆಯೊಂದಿಗೆ, ಇದೇ ಮೊದಲ ಬಾರಿಗೆ ಶಿವಮೊಗ್ಗ ಜಿಲ್ಲೆಗೆ ಸಮಗ್ರ ಚಾಂಪಿಯನ್ ತಂದು ಕೊಟ್ಟು ಜಿಲ್ಲೆಗೆ ಮತ್ತು ಇಲಾಖೆಗೆ ಕೀರ್ತಿ ತಂದುಕೊಟ್ಟಿರುತ್ತಾರೆ.
ಬಾಲಕಿಯರ ವಿಭಾಗದಲ್ಲಿ: ಅಮೂಲ್ಯ ತ್ರಿಪಲ್ ಜಂಪ್ ಪ್ರಥಮ, ಸಿರಿ ಕೆ ಜಿ.ಹರ್ಡಲ್ಸ್ ನಲ್ಲಿ ದ್ವಿತೀಯ, ಲಾಂಗ್ ಜಂಪ್ ನಲ್ಲಿ ತೃತೀಯ, ಅಪೂರ್ವ 400 ಮೀಟರ್,ಹರ್ಡಲ್ಸ್ ನಲ್ಲಿ ಪ್ರಥಮ, ಪದ್ಮಾವತಿ ಜಾವಲಿನ್ ಮತ್ತು ಪೋಲೊ ವ್ಯಾಟ್ ನಲ್ಲಿ ಪ್ರಥಮ, ಅನ್ವಿತಾ ಎತ್ತರ ಜಿಗಿತದಲ್ಲಿ ತೃತೀಯ, ಇರಾನ್ ಶೇಕ್ 100ಮೀ, 200ಮೀ ಪ್ರಥಮ, ಲೇಖನ ಸಾಗರ್ 400 ಮೀ,ಹರ್ಡಲ್ಸ್ ದ್ವಿತೀಯ, ವೇದಾ ಹ್ಯಾಮರ್ ಪ್ರಥಮ, ಮಿತಾಲಿ ಎಸ್. ಗುಂಡು ಎಸೆದಲ್ಲಿ ದ್ವಿತೀಯ, 4×100 ರಿಲೇಯಲ್ಲಿ ಅಮೂಲ್ಯ, ಸಿರಿ, ಅಪೂರ್ವ, ಪದ್ಮಾವತಿ ಪ್ರಥಮ ಸ್ಥಾನ ಪಡೆದ ಪ್ರತಿಭಾನ್ವಿತರಾಗಿರುತ್ತಾರೆ.
ಬಾಲಕರ ವಿಭಾಗದಲ್ಲಿ : ಸಂಜಯ್ 100 ಪ್ರಥಮ, 200 ದ್ವಿತೀಯ, ಹರ್ಡಲ್ಸ್ ನಲ್ಲಿ ದ್ವಿತೀಯ ಸ್ಥಾನ, ಲೋಕೇಶ್ ಜಾದವ್ 100ಮೀ ದ್ವಿತೀಯ, ಮೊಹಮದ್ ಆಯಿಲ್ ಹರ್ಡಲ್ಸ್ ನಲ್ಲಿ ಪ್ರಥಮ ಸ್ಥಾನ, ಮಣಿಕಂಠಗೌಡ ಎತ್ತರ ಜಿಗಿತದಲ್ಲಿ ಪ್ರಥಮ, ತ್ರಿಬಲ್ ಜಂಪ್ ನಲ್ಲಿ ದ್ವಿತೀಯ, ಆರೂನ್ ಬಿ. ಎತ್ತರ ಜಿಗಿತದಲ್ಲಿ ದ್ವಿತೀಯ, ಸುಧನ್ವಾ ಹ್ಯಾಮರ್ ಪ್ರಥಮ,ಶರತ್ ಕೆ. ಜೆ. 400ಮೀ ಪ್ರಥಮ, ಸಾಗರ್ ಪೋ ಲೋ ವ್ಯಾಟ್ನಲ್ಲಿ ಪ್ರಥಮ ಸ್ಥಾನ ಪಡೆದು,4×100 ರಿಲೇಯಲ್ಲಿ ಬಾಲಕರು ತೃತೀಯ ಸ್ಥಾನ, ಶಿವಮೊಗ್ಗ ಜಿಲ್ಲೆಯ ಪ್ರತಿಭಾನ್ವಿತರು ರಾಷ್ಟ್ರ ಮಟ್ಟದಲ್ಲಿ ಆಡಲಿದ್ದಾರೆ.ಅಸಂಖ್ಯಾತ ಕ್ರೀಡಾಭಿಮಾನಿಗಳು ಪ್ರೋತ್ಸಾಹದಿಂದ ಹುರಿದುಂಬಿಸಿದರು.
Department of School Education ಉತ್ತರ ಪ್ರದೇಶ ಲಕ್ನೋದಲ್ಲಿ ನಡೆಯುವ 17 ವರ್ಷ ವಯೋಮಿತಿಯೊಳಗಿನ ಬಾಲಕರ ಮತ್ತು ಬಾಲಕಿಯರ ವಿಭಾಗದ ಅಥ್ಲೆಟಿಕ್ಸ್ ನಲ್ಲಿ ಶಿವಮೊಗ್ಗ ಜಿಲ್ಲೆಯಿಂದ 9 ಬಾಲಕಿಯರು,8 ಬಾಲಕರು, ಪ್ರತಿಭಾನ್ವಿತ ಕ್ರೀಡಾಪಟುಗಳು ರಾಷ್ಟ್ರಮಟ್ಟದಲ್ಲಿ ಭಾಗವಹಿಸುತ್ತಿರುವುದು ಹೆಮ್ಮೆಯ ವಿಚಾರ.12 ಬಂಗಾರದ ಪದಕ,8 ಬೆಳ್ಳಿ ಪದಕ, 4 ಕಂಚಿನ ಪದಕ, ಒಟ್ಟು 24ಪದಕಗಳನ್ನು ಪಡೆದು ಜಿಲ್ಲೆಗೆ ಸಮಗ್ರ ಪ್ರಶಸ್ತಿಯನ್ನು ತಂದು ಕೊಟ್ಟಿರುತ್ತಾರೆ.ಅಸಂಖ್ಯಾತ ಕ್ರೀಡಾಭಿಮಾನಿಗಳು ಪ್ರೋತ್ಸಾಹದಿಂದ ಹುರಿದುಂಬಿಸಿದರು. ಕ್ರೀಡಾಪಟುಗಳು ಈ ಕ್ರೀಡಾಕೂಟದಲ್ಲಿ ಭಾಗವಹಿಸಿ ಕ್ರೀಡೆಗೆ ಮೆರಗು ತಂದಿದ್ದಾರೆ.
ಕ್ರೀಡಾ ಪ್ರತಿಭೆಗಳ ಸಾಧನೆಯನ್ನು ಮೆಚ್ಚಿ ಶಾಲಾ ಶಿಕ್ಷಣ ಇಲಾಖೆಯ ವತಿಯಿಂದ ಉಪ ನಿರ್ದೇಶಕರಾದ ಮಂಜುನಾಥ್ ಎಸ್.ಆರ್. ಜಿಲ್ಲಾ ದೈಹಿಕ ಶಿಕ್ಷಣ ಅಧಿಕಾರಿಗಳಾದ ಪ್ರಕಾಶ್ ಎಂ. ರಾಜ್ಯಮಟ್ಟದಿಂದ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಆಗಿರುವ ಈ ಪ್ರತಿಭೆಗಳನ್ನು ಇಲಾಖೆ ಮತ್ತು ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ವತಿಯಿಂದ ಸಿಹಿ ವಿತರಿಸಿ, ಆತ್ಮೀಯವಾಗಿ ಗೌರವಿಸಿ,ಪ್ರೋತ್ಸಾಹಿಸಲಾಯಿತು.
ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಮಂಜುನಾಥ ಎಸ್. ಆರ್. ಮಾತನಾಡುತ್ತಾ,ಆಟ ಅಂತ ಬಂದಾಗ ಸೋಲು ಗೆಲುವು ಸಹಜ.ಆದರೆ ಯಾವ ಪಂದ್ಯಾವಳಿಗಳು ಮಕ್ಕಳಲ್ಲಿ ಹೊಸ ಹುರುಪು,ಉತ್ಸಾಹಕ್ಕೆ ಮುನ್ನಡಿ ಬರೆಯುತ್ತವೆ.ಆ ನಿಟ್ಟಿನಲ್ಲಿ ಕ್ರೀಡೆಯು ದೈಹಿಕವಾಗಿ ಸದೃಢವಾಗಿಸುವುದರ ಜೊತೆಗೆ ಮಾನಸಿಕ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಸತತ ಅಭ್ಯಾಸ, ಪರಿಶ್ರಮ,ನಿತ್ಯ ಸಾಧನೆ ಇರುವವರಿಗೆ ಮಾತ್ರ ಕ್ರೀಡೆ ಒಲಿಯುತ್ತದೆ ಎಂದರು. ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ರಾಜ್ಯ ಮಟ್ಟದ ಪ್ರೌಢಶಾಲಾ ಬಾಲಕ, ಬಾಲಕಿರ ಕ್ರೀಡಾಕೂಟದಲ್ಲಿ ಉತ್ತಮ ಸಾಧನೆ ಮಾಡಿರುವ ತಾವುಗಳು, ರಾಷ್ಟ್ರ ಮಟ್ಟದಲ್ಲಿಯೂ ಉತ್ತಮ ಸಾಧನೆ ಮಾಡಿ ಎಂದು ಕ್ರೀಡಾ ಪಟುಗಳಿಗೆ ಶುಭ ಹಾರೈಸಿದರು.
ಈ ಸಂಧರ್ಭದಲ್ಲಿ ಯುವಜನ ಸೇವಾ ಕ್ರೀಡಾ ಇಲಾಖೆಯ ಅಥ್ಲೆಟಿಕ್ಸ್ ತರಬೇತುದಾರ ಬಾಳಪ್ಪ ಮಾನೆ, ಚಂದ್ರಕಾಂತ್,ವಿನಯ್ ಹೆಗಡೆ, ಆಂಜಿನಪ್ಪ,ರಾ. ಹ. ತಿಮ್ಮೇನಹಳ್ಳಿ, ಕಾಳನಾಯ್ಕ, ಮಹೇಶ್ ಉಲ್ಲತ್ತಿ, ಜೋಶಿ ಇನ್ನು ಮುಂತಾದವರು ಉಪಸ್ಥಿತರಿದ್ದರು.
Department of School Education ಪ್ರೌಢಶಾಲಾ ಕ್ರೀಡಾಕೂಟದಲ್ಲಿ ಶಿವಮೊಗ್ಗ ಜಿಲ್ಲೆಗೆ ಸಮಗ್ರ ಚಾಂಪಿಯನ್ ಪಟ್ಟ
Date:
