Areca Garden Shimoga ಅಡಿಕೆ ಬೆಳೆಗಾರ ಇವತ್ತು ಎಲೆ ಚುಕ್ಕೆ, ಕೊಳೆರೋಗ ,ಕಾಡುಪ್ರಾಣಿಗಳ ಹಾವಳಿ ಹೀಗೆ ಎಲ್ಲಾ ರೀತಿಯ ಸಂಕಷ್ಟಗಳಿಂದ ತತ್ತರಿಸಿ ಹೋಗಿದ್ದು ಗಾಯದ ಮೇಲೆ ಬರೆ ಎಳೆದಂತೆ ಅತಿವೃಷ್ಟಿಯಿಂದ ಇರುವ ಫಸಲೂ ಕೂಡ ನಷ್ಟ ಹೊಂದಿದೆ. ಆಪತ್ ಕಾಲಕ್ಕೆ ಆಗಲಿ ಎಂದು ಕಟ್ಟಿದ ಇನ್ಸೂರೆನ್ಸ್ ಹಣವು ಕೂಡ ಇನ್ಸೂರೆನ್ಸ್ ಕಂಪನಿ ಪಾಲಾಗಿದೆ. ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅವೈಜ್ಞಾನಿಕ ,ರೈತ ವಿರೋಧಿ ವರದಿಯಿಂದ ಇವತ್ತು ಬೆಳೆಗಾರನಿಗೆ ಹೆಕ್ಟೇರಿಗೆ ಬರಬೇಕಾದ 128,000 /ಮೊತ್ತದ ಬದಲಾಗಿ ಆರು ನೂರು ರೂಗಳು ಕೆಲವೆಡೆ 975 ರೂಗಳು ಹೀಗೆ ಅತಿ ಕನಿಷ್ಠ ಮೊತ್ತದ ಹಣ ಬೆಳೆಗಾರನ ಖಾತೆಗೆ ಜಮೆಯಾಗಿದೆ. . ಹಾಗೂ ಬರುವ ವರ್ಷದ ವಿಮಾ ಪರಿಹಾರಕ್ಕೆ ಇದೇ ಮಾನದಂಡವೇ ಅನ್ವಯಿಸುವುದರಿಂದ ಬರುವ ಸಾಲಿನಲ್ಲಿಯೂ ಬೆಳೆಗಾರನಿಗೆ ಇದೇ ಪರಿಸ್ಥಿತಿ ಬರುವುದು ಖಂಡಿತ .ಕಟ್ಟಿದ ವಿಮೆಗೆ ಪರಿಹಾರದ ಮೊತ್ತವನ್ನ ಪಡೆಯುವುದು ಬೆಳೆಗಾರನ ಆದ್ಯ ಹಕ್ಕು .ಹಾಗಾಗಿ ಇದು ಯಾರ ವಿರುದ್ಧ ಪ್ರತಿಭಟನೆ ಎನ್ನುವುದಕ್ಕಿಂತಲೂ ಹೆಚ್ಚಾಗಿ ನಮ್ಮ ಹಕ್ಕಿಗಾಗಿ ಆಗ್ರಹಿಸುವ ಹಕ್ಕೊತ್ತಾಯದ Areca Garden Shimoga ಸಭೆಯಾಗಿದೆ. ಸಂಕಷ್ಟ ಪರಿಸ್ಥಿತಿಯಲ್ಲೆಲ್ಲಾ ಸಾಗರ ಪ್ರಾಂತ್ಯ ಅಡಿಕೆ ಬೆಳೆಗಾರರ ಸಂಘ ಅಡಿಕೆ ಬೆಳೆಗಾರರ ಪರವಾಗಿ ನಿಂತಿದ್ದು ಎಲ್ಲಾ ರೀತಿಯ ಹೋರಾಟಗಳನ್ನು ಮಾಡುತ್ತಾ ಬಂದಿದೆ . ನಾಳೆಯೂ ಕೂಡ ಬೆಳೆಗಾರರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಹಕ್ಕೊತ್ತಾಯದ ಸಭೆಯನ್ನು ಕರೆಯಲಾಗಿದ್ದು ಪ್ರಾಂತ್ಯದ ಎಲ್ಲಾ ಅಡಿಕೆ ಬೆಳೆಗಾರರೂ ಇಂದು ಮಂಗಳವಾರ ಬೆಳಿಗ್ಗೆ 10:30 ಕ್ಕೆ ಸರಿಯಾಗಿ ಸಾಗರ ಉಪವಿಭಾಗಾಧಿಕಾರಿಗಳ ಕಚೇರಿ ಎದುರಿನಲ್ಲಿ ಆಗಮಿಸಿ ಸಭೆ ಸೇರಿ ನ್ಯಾಯಯುತ ಪರಿಹಾರ ಪಡೆಯುವ ಹಕ್ಕಿಗಾಗಿ ಸಂಘದ ಹೋರಾಟದಲ್ಲಿ ಕೈಜೋಡಿಸಬೇಕಾಗಿ ವಿನಂತಿಸುತ್ತಿದ್ದೇವೆ
Areca Garden Shimoga ಅತೀ ಕನಿಷ್ಠ ವಿಮೆ ಹಣ ಪರಿಹಾರ. ಸೂಕ್ತ ಪರಿಹಾರಕ್ಕೆ ಹಕ್ಕೋತ್ತಾಯ ಮಾಡಲು ಸಂಘಟನೆಯ ಕರೆ.
Date:
