Bhagavad Gita ಭದ್ರಾವತಿಯ ಸಂಸ್ಕೃತಿ ಸೌರಭ ವತಿಯಿಂದ ನವಂಬರ್ 6ನೇ ತಾರೀಕು ಶನಿವಾರ ತಾಲೂಕು ಬ್ರಾಹ್ಮಣ ಸಂಘದ ಶ್ರೀ ಗಾಯತ್ರಿ ಧರ್ಮ ಶಾಲಾ ಭವನದಲ್ಲಿ ಗೀತಾ ಜ್ಞಾನಸೌರಭ ಭಗವದ್ಗೀತೆ ಹಾಗೂ ಮಾನಸಿಕ ಆರೋಗ್ಯ ಎಂಬ ವಿಷಯವಾಗಿ ನಗರದ ಹೆಸರಾಂತ ವೈದ್ಯರು ಹಾಗೂ ಶಿವಮೊಗ್ಗ ಸುಬ್ಬಯ್ಯ ವೈದ್ಯಕೀಯ ಮಹಾ ವಿದ್ಯಾಲಯದ ಮನೋ ವೈದ್ಯಕೀಯ ವಿಭಾಗದ ಮುಖ್ಯಸ್ಥರಾದ ಶ್ರೀ ಹರೀಶ್ ದೇಲಂತ ಬೆಟ್ಟು ರವರಿಂದ ಗೀತಾ ಜ್ಞಾನ ಸೌರಭ ಭಗವದ್ಗೀತೆ ಹಾಗೂ ಮಾನಸಿಕ ಆರೋಗ್ಯ ಎಂಬ ವಿಷಯವಾಗಿ ಉಪನ್ಯಾಸ ಏರ್ಪಡಿಸಲಾಗಿತ್ತು ಶ್ರೀಯುತರು ಮಾತನಾಡುತ್ತಾ ಭಗವದ್ಗೀತೆ ಎಲ್ಲಾ ಕಾಲಕ್ಕೂ ಶ್ರೇಷ್ಠ ಮತ್ತು ಗ್ರಂಥ ಎಂದು ತಿಳಿಸಿದರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಕೃತಿ ಸೌರಭ ಅಧ್ಯಕ್ಷರಾದ ಶ್ರೀಯುತ ಸುಬ್ರಮಣ್ಯ ರವರು ವಹಿಸಿದ್ದರು ವೇದಿಕೆಯಲ್ಲಿ ಸಂಸ್ಕೃತಿ ಸೌರಭ ಗೌರವ ಅಧ್ಯಕ್ಷರಾದ ಶ್ರೀ ಕೃಷ್ಣ ಉಪಾಧ್ಯ ಹಾಗೂ ತಾಲೂಕು ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಶ್ರೀ Bhagavad Gita ರಮೇಶ್ ರವರು ಉಪಸ್ಥಿತರಿದ್ದರು ಇತ್ತೀಚೆಗೆ ಭಗವದ್ ಗೀತಾ ಅಭಿಯಾನದ ತಾಲೂಕು ಮಟ್ಟದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ಜಯಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು ಹಾಗೂ ಭಗವದ್ಗೀತಾ ಪಠಣ ಮಾಡಲು ಸಹಕರಿಸಿದ ಶ್ರೀಮತಿ ಪುಷ್ಪ ಸುಬ್ರಹ್ಮಣ್ಯ ರವರನ್ನು ಸನ್ಮಾನಿಸಲಾಯಿತು ಭಾಷಣ ಸ್ಪರ್ಧೆಯಲ್ಲಿ ಜಯಗಳಿಸಿದ ಕುಮಾರಿ ಜೈನಬಿ ಹಾಗೂ ಕುಮಾರಿ ಸ್ತುತಿ ಭಗವದ್ಗೀತೆಯ ಬಗ್ಗೆ ಮಾತನಾಡಿದರು ಶ್ರೀಯುತ ಕೃಷ್ಣ ಸ್ವಾಮಿ ಅವರಿಂದ ಸ್ವಾಗತ ಶ್ರೀ ಶೇಷಾದ್ರಿ ಅವರು ವಂದನಾರ್ಪಣೆ ಹಾಗೂ ಶ್ರೀ ಆನಂದ್ ರವರು ಕಾರ್ಯಕ್ರಮ ನಿರೂಪಣೆ ಮಾಡಿದರು
Bhagavad Gita ಭಗವದ್ಗೀತೆ ಎಲ್ಲಾಕಾಲಕ್ಕೂ ಶ್ರೇಷ್ಠವಾದ ಗ್ರಂಥ- ಡಾ.ಹರೀಶ್ ದೇಲಂತಬೆಟ್ಟು
Date:
