Shimoga News ಜೀವ ರಕ್ಷಿಸುವ ಕೌಶಲ್ಯವನ್ನು ಪ್ರತಿಯೊಬ್ಬರೂ ಬೆಳೆಸಿಕೊಳ್ಳುವುದು ಅತ್ಯಂತ ಅವಶ್ಯಕ ಎಂದು ದೈವಜ್ಞ ಮಹಿಳಾ ಮಂಡಳಿ ಶಿವಮೊಗ್ಗ ಅಧ್ಯಕ್ಷೆ ಸೀಮಾ ಸದಾನಂದ್ ಹೇಳಿದರು.
ದೈವಜ್ಞ ಕಲ್ಯಾಣ ಮಂದಿರದಲ್ಲಿ ದೈವಜ್ಞ ಮಹಿಳಾ ಮಂಡಳಿಯಿಂದ ಆಯೋಜಿಸಿದ್ದ “ಜೀವ ಸುರಕ್ಷತೆ” ತಿಳುವಳಿಕೆ ಕಾರ್ಯಕ್ರಮದ ಪ್ರಾತ್ಯಕ್ಷಿಕೆಯಲ್ಲಿ ಮಾತನಾಡಿ, ಆರೋಗ್ಯವೇ ಭಾಗ್ಯ ಎಂಬುದನ್ನು ಅರಿತುಕೊಳ್ಳಬೇಕು. ಹೃದಯ ಸಂಬಂಧಿತ ಕಾಯಿಲೆ ಎದುರಾದಾಗ ಮುಂಜಾಗ್ರತೆ ವಹಿಸಬೇಕು. ಪ್ರತಿಯೊಬ್ಬರೂ ಆರೋಗ್ಯದ ಅರಿವು ಹೊಂದಬೇಕು ಎಂದು ತಿಳಿಸಿದರು.
ಭಾರತೀಯ ವೈದ್ಯಕೀಯ ಸಂಘ ಶಿವಮೊಗ್ಗ ಶಾಖೆ ಕಾರ್ಯದರ್ಶಿ ಡಾ. ಕೆ.ಎಸ್.ಶುಭ್ರತಾ, ಸಂಪನ್ಮೂಲ ವ್ಯಕ್ತಿ ಡಾ. ಶ್ವೇತಾ ಬಾದಾಮಿ ಅವರು ಹೃದಯ ಸ್ತಂಭನವಾದಾಗ ಹೇಗೆ ಜೀವ ರಕ್ಷಿಸಬಹುದು ಎಂಬ ವಿಷಯವನ್ನು ಸವಿಸ್ತಾರವಾಗಿ ತಿಳಿಸಿದರು.
Shimoga News ದೈವಜ್ಞ ಮಹಿಳಾ ಮಂಡಳಿ ಶಿವಮೊಗ್ಗ ಕಾರ್ಯದರ್ಶಿ ವಾಣಿ ಪ್ರವೀಣ್ ಮಾತನಾಡಿ, ಸಿಪಿಆರ್ ಅರಿವು ಕಾರ್ಯಕ್ರಮಗಳಿಂದ ಜನರಲ್ಲಿ ಆರೋಗ್ಯ ಜಾಗೃತಿ ಮೂಡುತ್ತದೆ. ಸಿಪಿಆರ್ ಪ್ರಕ್ರಿಯೆ ಕಲಿಯುವುದರಿಂದ ತುರ್ತು ಸಂದರ್ಭಗಳಲ್ಲಿ ಜೀವ ಉಳಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ದೈವಜ್ಞ ಮಹಿಳಾ ಮಂಡಳಿ ಶಿವಮೊಗ್ಗ ಉಪಾಧ್ಯಕ್ಷೆ ಪ್ರೇಮಾ ರಮೇಶ್, ಅರ್ಚನಾ ಅಣ್ಣಪ್ಪ, ಸಹ ಕಾರ್ಯದರ್ಶಿ ಸುಧಾ ಸುರೇಶ್, ಚೇತನಾ ವಾದಿರಾಜ್, ಖಜಾಂಚಿ ರೂಪಾ ರವಿ, ನಿರ್ದೇಶಕರು, ಮಾಜಿ ಅಧ್ಯಕ್ಷರು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರು ಉಪಸ್ಥಿತರಿದ್ದರು.
