C.V. Rudra Radhya ಡಾ. ಬಾಬು ರಾಜೇಂದ್ರ ಪ್ರಸಾದ್ ಇಂಟರ್ ನ್ಯಾಷನಲ್ ಕನ್ವೆನ್ಷನ್ ಸೆಂಟರ್, ಯುನಿವರ್ಸಿಟಿ ಆಫ್ ಅಗ್ರಿಕಲ್ಚರ್ ಸೈನ್ಸ್, ಬೆಂಗಳೂರು ಇಲ್ಲಿ ದಿನಾಂಕ 6 ಮತ್ತು, 7 2025 ರಂದು ನೆರವೇರಿದ ಗ್ಲೋಬಲ್ ಯೋಗಾ ಸಮಿಟ್ ಅಂತರಾಷ್ಟ್ರೀಯ ಯೋಗ ಸಮ್ಮೇಳನ ದಲ್ಲಿ ಶ್ರೀ ಶಿವಗಂಗಾ ಯೋಗ ಕೇಂದ್ರ, ಶಿವಮೊಗ್ಗ ದ ಕಾರ್ಯಾಧ್ಯಕ್ಷರಾದ ಯೋಗಾಚಾರ್ಯ ಶ್ರೀ ಸಿ.ವಿ. ರುದ್ರಾರಾಧ್ಯರು ಸುಮಾರು 50 ವರ್ಷಗಳಿಂದ ಯೋಗ ಕ್ಷೇತ್ರಕ್ಕೆ ಸಲ್ಲಿಸಿದ ಉಚಿತ ಸೇವೆಯನ್ನು ಗುರುತಿಸಿ ವಿಶ್ವಯೋಗಿ ಪ್ರಶಸ್ತಿಯನ್ನು ನೀಡಲಾಯಿತು. ಮತ್ತು ಯೋಗ ಯುನಿವರ್ಸಿಟಿ ಆಫ್ ಅಮೆರಿಕಾಸ್ ನ ಆಡಳಿತ ಮಂಡಳಿ ಅವರು ಯೋಗಾಚಾರ್ಯರು ಜೀವಮಾನದಲ್ಲಿ ಸಲ್ಲಿಸಿದ ಸೇವೆಯನ್ನು ಗುರುತಿಸಿ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್ ಪದವಿ ಪ್ರಧಾನ ಮಾಡಿ ಗೌರವಿಸಲಾಯಿತು.
ಸಮಾರಂಭದಲ್ಲಿ ಯುನಿವರ್ಸಿಟಿ ಪರವಾಗಿ ಡಾ. ದೇವರಾಜ್ ಗುರೂಜಿ, ಡಾ. ನಾಗೇಶ್, ಸಾಧು-ಸಂತರು, ಮಾಜಿ ಉಪಮುಖ್ಯಮಂತ್ರಿಗಳಾದ ಶ್ರೀ ಕೆ ಎಸ್ ಈಶ್ವರಪ್ಪ , ಕೆ ಇ ಕಾಂತೇಶ್ ಉಪಸ್ಥಿತರಿದ್ದರು.
C.V. Rudra Radhya ಈ ಸಂದರ್ಭದಲ್ಲಿ ಯೋಗ ಕೇಂದ್ರದ ಅಧ್ಯಕ್ಷರಾದ ಶ್ರೀ ಎಸ್ ರುದ್ರೆ ಗೌಡರು , ಖಜಾಂಚಿ ಹೊಸ ತೋಟ ಸೂರ್ಯನಾರಾಯಣ, ಕಾರ್ಯದರ್ಶಿ ಚಂದ್ರಶೇಖರಯ್ಯ ಮತ್ತು ಟ್ರಸ್ಟ್ ಸದಸ್ಯರು ಹಾಗೂ ಪೋಷಕ ಸಮಿತಿ ಸದಸ್ಯರಾದ ಡಾ ಧನಂಜಯ ಸರ್ಜಿ , ಜಿ.ಎಸ್. ಓಂಕಾರ್, ಮನು, ಪರಮೇಶ್ ಡಾ. ಗಾಯತ್ರಿ ದೇವಿ ಸಜ್ಜನ್, ಡಾ. ಪದ್ಮನಾಭ ಅಡಿಗ ಯೋಗ ಶಿಕ್ಷಕರಾದ ಜಿ ಎಸ್ ಜಗದೀಶ್ ರಾಜಶೇಖರ್, ವಿಜಯ ಬಾಯರ್ ಹಾಗೂ ಸಮಸ್ತ ಎಲ್ಲಾ ಶಾಖೆಯ ಶಿಕ್ಷಕರು ಯೋಗ ಬಂಧುಗಳು ಹಾಗೂ ಟ್ರಸ್ಟಿಗಳು ಹಾಗೂ ಪದಾಧಿಕಾರಿಗಳು ಪೋಷಕ ವೃಂದದವರು ರವರು ಸಂತೋಷ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.
C.V. Rudra Radhya ಶಿವಮೊಗ್ಗದ ಯೋಗಗುರು ಸಿ.ವಿ.ರುದ್ರಾರಾಧ್ಯರಿಗೆಗೌರವ ಡಾಕ್ಟರೇಟ್ ಪ್ರದಾನ
Date:
