Shimoga Rural Police ಅಮರಾವತಿ ಕ್ಯಾಂಪ್ ಮತ್ತು ನವಿಲೆ ಬಸಾಪುರದ ಮಧ್ಯದಲ್ಲಿನ ಚೌಡಮ್ಮ ದೇವಸ್ಥಾನದ ಹತ್ತಿರ ಭದ್ರಾ ಚಾನಲ್‌ನಲ್ಲಿ ಸುಮಾರು 40 ವರ್ಷದ ಮಹಿಳೆಯ ಮೃತ ದೇಹ ತೇಲುತ್ತಿದ್ದು, ಈಕೆಯ ಹೆಸರು, ವಿಳಾಸ, ವಾರಸುದಾರರ ಕುರಿತು ಯಾವುದೇ ಸುಳಿವು ದೊರೆತಿರುವುದಿಲ್ಲ.
Shimoga Rural Police ಮೃತಳ ಚಹರೆ 5 ಅಡಿ ಎತ್ತರ, ದುಂಡುಮುಖ, ಎಣ್ಣೆಗೆಂಪು ಮೈಬಣ್ಣ ಹೊಂದಿದ್ದು, ದೇಹ ಕೊಳೆತ ಸ್ಥಿತಿಯಲ್ಲಿ ದೊರಕಿದ್ದು, ಯಾವುದೇ ಗುರುತುಗಳಿರುವುದಿಲ್ಲ. ಕೈಯಲ್ಲಿ ಹಸಿರು ಗಾಜಿನ ಬಳೆಗಳಿರುತ್ತದೆ.
ಈ ಮೃತ ಮಹಿಳೆಯ ಕುರಿತು ಮಾಹಿತಿಯಿದ್ದಲ್ಲಿ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆ ದೂ.ಸಂ.: 08182-261400/ 261410/261418/ 9480803332 / 9480803350, ಪೊಲೀಸ್ ಕಂಟ್ರೋಲ್ ರೂಂ ನಂ.: 100 ಗಳನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ.
Date:
