ಮಕ್ಕಳಲ್ಲಿ ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟುವ ಜಾಗೃತಿ ಮೂಡಿಸುವ ಆಶಯದಿಂದ ಇನ್ನರ್‌ವ್ಹೀಲ್ ಕ್ಲಬ್ ಆಫ್ ಶಿವಮೊಗ್ಗ ಪೂರ್ವ ವತಿಯಿಂದ ಜ್ಞಾನದೀಪ ಶಾಲೆ, ಓಪನ್ ಮೈಂಡ್ ಶಾಲೆ ಮತ್ತು ಜೈನ್ ಪಬ್ಲಿಕ್ ಶಾಲೆಗಳಲ್ಲಿ ಎಚ್‌ಪಿವಿ ಲಸಿಕಾ ಶಿಬಿರ ನಡೆಸಲಾಯಿತು.
ಸರ್ಜಿ ಆಸ್ಪತ್ರೆಯ ಶಿಶುರೋಗ ತಜ್ಞ ಡಾ. ಪ್ರಸಾದ್, ಶಿಶುರೋಗ ತಜ್ಞೆ ಡಾ. ಶಮಿತಾ ಅವರು ಲಸಿಕೆಯ ಮಹತ್ವ ಹಾಗೂ ಗರ್ಭಕಂಠದ ಕ್ಯಾನ್ಸರ್ ತಡೆ ಕುರಿತು ಜಾಗೃತಿ ಕಾರ್ಯಕ್ರಮ ನಡೆಸಿದರು. ಪ್ರತಿ ವರ್ಷ 1,20,000 ಮಹಿಳೆಯರು ಈ ರೋಗಕ್ಕೆ ಒಳಗಾಗುತ್ತಿದ್ದು, ಜಾಗೃತಿ ಮತ್ತು ಸರಿಯಾದ ಸಮಯದಲ್ಲಿ ಚಿಕಿತ್ಸೆ ಇಲ್ಲದೆ 85,000 ಮಂದಿ ಜೀವ ಕಳೆದುಕೊಳ್ಳುತ್ತಿದ್ದಾರೆ. ಎಚ್‌ಪಿವಿ ಲಸಿಕೆ ಪಡೆಯುವುದರಿಂದ ಈ ಕ್ಯಾನ್ಸರ್ ಅನ್ನು ಬಹಳ ಮಟ್ಟಿಗೆ ತಡೆಗಟ್ಟಬಹುದು ಎಂದು ತಿಳಿಸಿದರು.
ಇನರ್‌ವೀಲ್ ಕ್ಲಬ್ ಈ ಜೀವ ರಕ್ಷಕ ಲಸಿಕೆಯನ್ನು ಎಲ್ಲರಿಗೂ ಸುಲಭವಾಗಿ ಲಭ್ಯವಾಗುವಂತೆ ಮಾಡಲು ಬದ್ಧವಾಗಿದೆ. 9–14 ವರ್ಷದ ಮಕ್ಕಳಿಗೆ 2 ಡೋಸ್, 15–26 ವರ್ಷ ವಯಸ್ಸಿನವರಿಗೆ 3 ಡೋಸ್ ಹೆಣ್ಣುಮಕ್ಕಳು ಮತು ಗಂಡುಮಕ್ಕಳು ಲಸಿಕೆ ಪಡೆಯಬೇಕು. ಎಚ್‌ಪಿವಿ ವೈರಸ್ ಹರಡುವಿಕೆ ಸಾಮಾನ್ಯವಾಗಿ ಪುರುಷರಿಂದ ಆಗುತ್ತದೆ. ಶೇ. 32 ಪುರುಷರು ಮತ್ತು ಶೇ. 12 ಮಹಿಳೆಯರು ಎಚ್‌ಪಿವಿ ಸಂಬಂಧಿತ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.
ಇನರ್‌ವೀಲ್ ಕ್ಲಬ್ ಅಧ್ಯಕ್ಷೆ ವೀಣಾ ಸುರೇಶ್ ಮುಂಚೂಣಿಯಲ್ಲಿದ್ದು, ಉಚಿತ ಲಸಿಕೆ ಒದಗಿಸಲು ಸ್ನೇಹಿತರು ಹಾಗೂ ಬಂಧುಗಳಿಂದ ನಿಧಿ ಸಂಗ್ರಹಿಸಿದರು. ಲಸಿಕೆಗಳ ಉಳಿದ ವೆಚ್ಚವನ್ನು ರೋಟರಿ ಕ್ಲಬ್ ಆಫ್ ಮದ್ರಾಸ್ ನಿಧಿ ಸಂಗ್ರಹದ ಮೂಲಕ ಭರಿಸುತ್ತಿದೆ. ಸರ್ಜೀ ಆಸ್ಪತ್ರೆಗಳ ಗುಂಪು ಮತ್ತು ಡಾ. ಧನಂಜಯ್ ಸರ್ಜೀ ಅವರು ಲಸಿಕೆಗಳನ್ನು ನೀಡಲು ವೈದ್ಯರನ್ನು ಮತ್ತು ಸಿಬ್ಬಂದಿ ಒದಗಿಸುತ್ತಿದ್ದಾರೆ. ಶಿಬಿರದಲ್ಲಿ 500 ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಲಸಿಕೆ ಪಡೆದರು.
ಇನ್ನರ್‌ವ್ಹೀಲ್ ಜಿಲ್ಲಾ ಅಧ್ಯಕ್ಷೆ ಶಬರಿ ಕಡಿದಾಳ್, ಜಿಲ್ಲಾ ಕಾರ್ಯದರ್ಶಿ ಶಿಲ್ಪಾ ಗೋಪಿನಾಥ್, ಜಿಲ್ಲಾ ಖಜಾಂಚಿ ಶ್ವೇತಾ ಅಶಿತ್, ಇನರ್ ವ್ಹೀಲ್ ಕ್ಲಬ್ ಅಧ್ಯಕ್ಷೆ ವೀಣಾ ಸುರೇಶ್ ಹಾಗೂ ಮಾಜಿ ಅಧ್ಯಕ್ಷೆ ಜಯಂತಿ ವಾಲಿ, ಬಿಂದು ವಿಜಯ ಕುಮಾರ್ ಉಪಸ್ಥಿತರಿದ್ದರು.
ಇನ್ನರ್ ವೀಲ್ ಪೂರ್ವ ಸಂಸ್ಥೆಯಿಂದ ಗರ್ಭಕಂಠ ಕ್ಯಾನ್ಸರ್ ಜಾಗೃತಿ
Date:
