Bangalore Television Centre ಬೆಂಗಳೂರು ದೂರದರ್ಶನ ಕೇಂದ್ರವು ನಿರ್ಮಿಸಲಿರುವ ಕಲಾತ್ಮಕ ಧಾರಾವಾಹಿಯನ್ನು ನಿರ್ದೇಶನ ಮಾಡಲು ರಾಷ್ಟ್ರಪ್ರಶಸ್ತಿ ಪುರಸ್ಕೃತ ಚಲನಚಿತ್ರ ನಿರ್ದೇಶಕರುಗಳಿಂದ ಅರ್ಜಿ ಆಹ್ವಾನಿಸಿದೆ. ಆಸಕ್ತರು ಅರ್ಜಿ ಸಲ್ಲಿಸಬಹುದು ಎಂದು ಆಕಾಶವಾಣಿ ಹಾಗೂ ದೂರದರ್ಶನದ ದಕ್ಷಿಣವಲಯದ ಉಪ ಮಹಾನಿರ್ದೇಶಕ ಭಾಗ್ಯವಾನ್ ತಿಳಿಸಿದ್ದಾರೆ.
ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಅವರು, ಅರ್ಜಿ ಸಲ್ಲಿಸಲು ಇದೇ ಡಿಸೆಂಬರ್ 14 ಕಡೆಯ ದಿನವಾಗಿದೆ. ನಿರ್ದೇಶಕರು, ಧಾರಾವಾಹಿ ವಿಭಾಗ
Bangalore Television Centre ದೂರದರ್ಶನ ಕೇಂದ್ರ. ಜೆ.ಸಿ. ನಗರ, ಬೆಂಗಳೂರು – 560006 ಇಲ್ಲಿಗೆ ಅಂಚೆ ಮೂಲಕ ಅರ್ಜಿ ಸಲ್ಲಿಸಬಹುದು. ಇಲ್ಲವಾದಲ್ಲಿ ddchandanaserial@gmail.com ಈ ಮೇಲ್ ಮೂಲಕವೂ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಹೇಳಿದ್ದಾರೆ.
ದೂರದರ್ಶನ ಚಂದನವಾಹಿನಿಯಲ್ಲಿ ಫೋಕ್ ರಿಯಾಲಿಟಿ ಶೋ(ಹಾಡು), ಜನಪದ ಗೀತೆಗಳನ್ನು ಹಾಡುವ ಪ್ರತಿಭೆವುಳ್ಳ, 18 ವರ್ಷಕ್ಕೆ ಮೇಲ್ಪಟ್ಟ ಆಸಕ್ತ ಹಾಡುಹಕ್ಕಿಗಳು ಡಿಸೆಂಬರ್ 20ರಂದು ಬೆಂಗಳೂರು ದೂರದರ್ಶನ ಕೇಂದ್ರದಲ್ಲಿ ನಡೆಯಲಿರುವ ಮೆಗಾ ಆಡಿಷನ್ನಲ್ಲಿ ಭಾಗವಹಿಸಬಹುದು. ಅಭ್ಯರ್ಥಿಗಳು ತಮ್ಮ ಸ್ವವಿವರಗಳುಳ್ಳ ಅರ್ಜಿಯೊಂದಿಗೆ ಆಗಮಿಸಿ ಆಡಿಷನ್ಸ್ ದಿನದಂದೇ ಕೇಂದ್ರದಲ್ಲೇ ತಮ್ಮ ಹೆಸರನ್ನು ನೋಂದಯಿಸಿಕೊಳ್ಳಬಹುದು. ಸ್ಪರ್ಧೆಯಲ್ಲಿ ಭಾಗವಹಿಸಿ ಗೆದ್ದ ವಿಜೇತರಿಗೆ ಆಕರ್ಷಕ ಬಹುಮಾನಗಳಿವೆ ಎಂದು ಭಾಗ್ಯವಾನ್ ತಿಳಿಸಿದ್ದಾರೆ
Bangalore Television Centre ಕಲಾತ್ಮಕ ಧಾರಾವಾಹಿ ನಿರ್ಮಾಣ & ಫೋಕ್ ರಿಯಾಲಿಟಿ ಶೋ ನಲ್ಲಿ ಭಾಗವಹಿಸಲು ಅರ್ಜಿ ಆಹ್ವಾನ
Date:
