ಶಿವಮೊಗ್ಗ ಜಿಲ್ಲಾ ಗೃಹ ರಕ್ಷಕದಳವು ಡಿ. 06 ರಂದು ಸಂಜೆ 4.00ಕ್ಕೆ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಅಖಿಲ ಭಾರತ ಗೃಹರಕ್ಷಕ ದಳ ದಿನಾಚರಣೆಯನ್ನು ಆಯೋಜಿಸಿದೆ.
ಕಾರ್ಯಕ್ರಮವನ್ನು ಜಿಲ್ಲಾ ಪೊಲೀಸ್ ಅಧೀಕ್ಷಕ ಜಿ.ಕೆ. ಮಿಥುನ್ ಕುಮಾರ್ ಉದ್ಘಾಟಿಸಲಿದ್ದಾರೆ. ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ವಿಶೇಷ ಆಹ್ವಾನಿತರು. ಜಿಲ್ಲಾ ಸಮಾದೇಷ್ಟರು ಡಾ. ಚೇತನ್ ಹೆಚ್.ಪಿ. ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಜಿಲ್ಲಾ ಪಂಚಾಯತ್ ಸಿಇಓ ಹೇಮಂತ್ ಎನ್. ಮಹಾನಗರ ಪಾಲಿಕೆ ಆಯುಕ್ತರಾದ ಮಾಯಣ್ಣಗೌಡ, ಅಪರ ಜಿಲ್ಲಾಧಿಕಾರಿ ಅಭಿಷೇಕ್ ವಿ., ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೆಶಕ ಮಂಜುನಾಥ ಎಸ್. ಆರ್. ಆಗಮಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಉಪ ಸಮಾದೇಷ್ಟರು ಹಾಲಪ್ಪ ಷ ಡಾವಣಗೇರಿ, ಜಿಲ್ಲೆಯ ಎಲ್ಲಾ ಅಧಿಕಾರಿ ವರ್ಗ, ಕಚೇರಿ ಸಿಬ್ಬಂದಿವರ್ಗ, ಘಟಕಾಧಿಕಾರಿಗಳು ಹಾಗೂ ಸಮಸ್ತ ಗೃಹರಕ್ಷಕ ಸದಸ್ಯರು, ಗೃಹರಕ್ಷಕದಳ ಉಪಸ್ಥಿತರಿರಲಿದ್ದಾರೆ.
ಡಿಸೆಂಬರ್ 6. ಗೃಹರಕ್ಷಕ ದಳ ದಿನಾಚರಣೆ ಸರ್ವ ಸಿದ್ಧತೆ
Date:
