Friday, December 5, 2025
Friday, December 5, 2025

Bangalore International Film Festival ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಕನ್ನಡ, ಭಾರತೀಯ ಮತ್ತು ಏಷಿಯನ್ ವಿಭಾಗಕ್ಕೆ ಚಲನಚಿತ್ರಗಳ ಪ್ರವೇಶಕ್ಕೆ ಪ್ರಕಟಣೆ

Date:

Bangalore International Film Festival FIAPF ಸಂಸ್ಥೆಯ ಅಂತಾರಾಷ್ಟ್ರೀಯ ಮಾನ್ಯತೆ ಪಡೆದಿರುವ, ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವು, ಕರ್ನಾಟಕ ರಾಜ್ಯದ ಮತ್ತು ಬೆಂಗಳೂರು ಮಹಾನಗರದ ಮಹತ್ವದ ಸಾಂಸ್ಕೃತಿಕ ಹಬ್ಬ. ಕರ್ನಾಟಕ ಸರ್ಕಾರ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಕರ್ನಾಟಕ ಚಲನಚಿತ್ರ ಅಕಾಡೆಮಿಗಳ ಮೂಲಕ ಜನವರಿ 29 ರಿಂದ ಫೆಬ್ರವರಿ 6, 2026 ವರೆಗೆ ಹಮ್ಮಿಕೊಂಡಿರುವ 17ನೇt ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಸಿದ್ಧತೆಗಳು ಪ್ರಾರಂಭವಾಗಿವೆ.

ಎಂದಿನಂತೆ ಈ ಬಾರಿಯೂ “ಕನ್ನಡ ಸಿನಿಮಾ ಸ್ಪರ್ಧಾ ವಿಭಾಗ”, ಭಾರತೀಯ ಚಲನಚಿತ್ರಗಳನ್ನು ಪ್ರತಿನಿಧಿಸುವ ‘ಚಿತ್ರಭಾರತಿ” ಭಾರತೀಯ ಸಿನಿಮಾ ಸ್ಪರ್ಧಾ ವಿಭಾಗ ಮತ್ತು “ಏಷಿಯನ್ ಸಿನಿಮಾ” ಸ್ಪರ್ಧಾ ವಿಭಾಗಗಳಿಗೆ, ಆಯ್ಕೆಗಾಗಿ ಅರ್ಹ ಚಲನಚಿತ್ರಗಳನ್ನು ಆಹ್ವಾನಿಸಲಾಗಿದೆ.

“ಕನ್ನಡ ಸಿನಿಮಾ ಸ್ಪರ್ಧಾ” ವಿಭಾಗದಲ್ಲಿ ಆಯ್ಕೆಗಾಗಿ ಸಲ್ಲಿಸಬೇಕಾದ ಕಥಾ ಚಿತ್ರಗಳು ಕನಿಷ್ಠ 70 ನಿಮಿಷದ ಅವಧಿಯಾಗಿದ್ದು, ಜನವರಿ 1, 2025 ರಿಂದ ಡಿಸೆಂಬರ್ 31, 2025 ರ ಒಳಗೆ ಎರಡೂ ದಿನಗಳನ್ನು ಒಳಗೊಂಡಂತೆ) ನಿರ್ಮಾಣಗೊಂಡಿರಬೇಕು. ಕನ್ನಡ ಮತ್ತು ಕರ್ನಾಟಕ ರಾಜ್ಯದ ಯಾವುದೇ ಉಪಭಾಷೆಯಲ್ಲಿ ತಯಾರಾಗಿರುವ ಕಥಾ ಚಿತ್ರಗಳು, ಸ್ಪರ್ಧಾ ವಿಭಾಗದ ಆಯ್ಕೆಗೆ ಪ್ರವೇಶ ಪಡೆಯಲು ಅರ್ಹವಾಗುತ್ತವೆ.

‘ಚಿತ್ರಭಾರತಿ’ -ಭಾರತೀಯ ಚಲನಚಿತ್ರಗಳ ಸ್ಪರ್ಧಾ ವಿಭಾಗದಲ್ಲಿ ಆಯ್ಕೆಗಾಗಿ ಸಲ್ಲಿಸಲಿರುವ ಚಿತ್ರಗಳು ಜನವರಿ 1, 2025 ರಿಂದ ಡಿಸೆಂಬರ್ 31. 2025ರ ಒಳಗೆ (ಎರಡೂ ದಿನಗಳನ್ನು ಒಳಗೊಂಡಂತೆ) ನಿರ್ಮಾಣಗೊಂಡಿರಬೇಕು. ಹಾಗೂ ಭಾರತದ ಯಾವುದೇ ಭಾಷೆಯ ಕಥಾ ಚಿತ್ರವಾಗಿದ್ದು, ಕನಿಷ್ಠ 70 ನಿಮಿಷಗಳ ಅವಧಿಯ ಚಿತ್ರಗಳು ಸ್ಪರ್ಧಾ ವಿಭಾಗದ ಆಯ್ಕೆಗೆ ಪ್ರವೇಶ ಪಡೆಯಲು ಅರ್ಹವಾಗುತ್ತದೆ.

‘ಏಷಿಯಾ ಸಿನಿಮಾ ಸ್ಪರ್ಧಾ ವಿಭಾಗ”ದಲ್ಲಿ ಏಷಿಯಾದ ಯಾವುದೇ ದೇಶದಲ್ಲಿ, ಜನವರಿ 1, 2025 ರಿಂದ ಡಿಸೆಂಬರ್ 31, 2025ರ ಒಳಗೆ ಎರಡೂ ದಿನಗಳನ್ನು ಒಳಗೊಂಡಂತೆ) ತಯಾರಾದ, ಕನಿಷ್ಠ 70 ನಿಮಿಷಗಳ ಅವಧಿಯ ಚಿತ್ರಗಳು ಸರ್ಧಾತ್ಮಕ ವಿಭಾಗದ ಆಯ್ಕೆಗೆ ಪ್ರವೇಶ ಪಡೆಯಲು ಅರ್ಹವಾಗುತ್ತದೆ.

‘ಕನ್ನಡ ಚಲನಚಿತ್ರ’, ‘ಚಿತ್ರಭಾರತಿ’ – ಭಾರತೀಯ ಚಲನಚಿತ್ರ” ಮತ್ತು “ಏಷಿಯನ್ ಚಲನಚಿತ್ರ” ಸ್ಪರ್ಧಾ ವಿಭಾಗಕ್ಕೆ ಪ್ರವೇಶ ಬಯಸುವ ಕನ್ನಡ ಮತ್ತು ಭಾರತೀಯ ಭಾಷಾ ಚಲನಚಿತ್ರಗಳಿಗೆ, ಕೇಂದ್ರೀಯ ಚಲನಚಿತ್ರ ಪ್ರಮಾಣೀಕೃತ ಮಂಡಳಿ (CBFC), ನೀಡುವ ಪ್ರಮಾಣ ಪತ್ರದಲ್ಲಿ ನಮೂದಾಗುವ ದಿನಾಂಕವೇ, ಚಲನಚಿತ್ರ ನಿರ್ಮಾಣ ದಿನಾಂಕದ ಮಾನದಂಡವಾಗುತ್ತದೆ.

Bangalore International Film Festival 17 ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಸ್ಪರ್ಧಾ ವಿಭಾಗಗಳಲ್ಲಿ ಆಯ್ಕೆಗಾಗಿ ಚಲನಚಿತ್ರಗಳನ್ನು ಸಲ್ಲಿಸುವ ಪ್ರಕ್ರಿಯೆ ದಿನಾಂಕ: ಡಿಸೆಂಬರ್ 06.12.2025 ರಿಂದ ಪ್ರಾರಂಭವಾಗಲಿದ್ದು, ಸ್ಪರ್ಧಾತ್ಮಕ ವಿಭಾಗಗಳಿಗೆ ಚಲನಚಿತ್ರಗಳ ಅರ್ಜಿ ಸಲ್ಲಿಸಲು www.biffes.org ಜಾಲತಾಣಕ್ಕೆ ಭೇಟಿ ನೀಡಿ ಅರ್ಜಿಯೊಂದಿಗೆ ಸಿನಿಮಾಕ್ಕೆ ಸಂಬಂಧಿಸಿದ ಎಲ್ಲಾ ವಿವರಗಳನ್ನೂ ನೀಡಬೇಕು, “ಕನ್ನಡ ಸಿನಿಮಾ’, ‘ಚಿತ್ರಭಾರತಿ – ಭಾರತೀಯ ಸಿನಿಮಾ’ ಹಾಗೂ ‘ಏಷಿಯನ್ ಸಿನಿಮಾ ಸ್ಪರ್ಧಾ ವಿಭಾಗಕ್ಕೆ ಅರ್ಜಿ ಸಲ್ಲಿಸುವ ಕರ್ನಾಟಕದ ಹಾಗೂ ಭಾರತದ ಪ್ರತಿ ಚಿತ್ರದ ಪ್ರತಿ ಅರ್ಜಿಗೂ ರೂ.3,000/- ಪ್ರವೇಶ ಶುಲ್ಕವಿರುತ್ತದೆ. ಇಂಗ್ಲಿಷ್ ಉಪ ಶೀರ್ಷಿಕೆಗಳನ್ನೊಳಗೊಂಡ ಚಲನಚಿತ್ರದ ಆನ್‌ಲೈನ್ ಸ್ಪೀನರ್‌ನೊಂದಿಗೆ, ಆನ್‌ಲೈನ್‌ನಲ್ಲಿ, ಪ್ರವೇಶ ಶುಲ್ಕವನ್ನು ಪಾವತಿಸಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 31.12.2025 (ಡಿಸೆಂಬರ್ 31, 2025)

ಹೆಚ್ಚಿನ ಮಾಹಿತಿಗೆ +91 8904645529 biffesbir@gmail.com & www.biffes.org ಸಂಪರ್ಕಿಸಬಹುದು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...

Consumer Disputes Redressal Commission ಕ್ರೆಡಿಟ್ ಕಾರ್ಡಿನಿಂದ ಅನಧಿಕೃತ ಹಣ ಕಡಿತ, ಸೇವಾನ್ಯೂನತೆ ಎಸಗಿದ ಸಂಸ್ಥೆಗೆ ದಂಡ

Consumer Disputes Redressal Commission ಕ್ರೆಡಿಟ್ ಕಾರ್ಡಿನಿಂದ ಅನಧಿಕೃತವಾಗಿ ಕಡಿತವಾದ ಮೊತ್ತಗಳ...