Rangayana Shivamogga ರಂಗಾಯಣ, ಶಿವಮೊಗ್ಗ ರೆಪರ್ಟರಿ ಕಲಾವಿದರ ಪ್ರಸ್ತುತಿಯಲ್ಲಿ ಡಿ.5 ರಂದು ಶಿವಮೊಗ್ಗದ ಅಶೋಕನಗರದ ಸುವರ್ಣ ಸಂಸ್ಕೃತಿ ಭವನದಲ್ಲಿ ಸಂಜೆ 6.30ಕ್ಕೆ ಡಾ.ಡಿ.ಎಸ್.ಚೌಗಲೆ ರಚನೆಯ ಶ್ರೀ ಚಿದಂಬರ ರಾವ್ ಜಂಬೆ ನಿರ್ದೇಶನದ ‘ನಮ್ಮೊಳಗೊಬ್ಬ ಗಾಂಧಿ’ ನಾಟಕ ಪ್ರದರ್ಶನವನ್ನು ಆಯೋಜಿಸಲಾಗಿದೆ.
ಈ ನಾಟಕವನ್ನು ಸಂಸ್ಕೃತಿ ಚಿಂತಕರಾದ ಪ್ರೊ. ರಾಜೇಂದ್ರ ಚೆನ್ನಿ, ಶಿವಮೊಗ್ಗ ಇವರು ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಿವಮೊಗ್ಗದ ರಂಗಾಯಣದ ನಿರ್ದೇಶಕರಾದ ಶ್ರೀ ಪ್ರಸನ್ನ ಡಿ ಸಾಗರ ಇವರು ವಹಿಸಲಿದ್ದಾರೆ. 2025 ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಶಿವಮೊಗ್ಗ ಜಿಲ್ಲೆಯ ಕೋಣಂದೂರು ಲಿಂಗಪ್ಪ, ಪ್ರೊ. ರಾಜೇಂದ್ರ ಚೆನ್ನಿ ಮತ್ತು ಶ್ರೀ ಟಾಕಪ್ಪ ಇವರನ್ನು ರಂಗಾಯಣದಿಂದ ಗೌರವಿಸಲಾಗುವುದು. Rangayana Shivamogga ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಡಾ.ಡಿ.ಎಸ್. ಚೌಗಲೆ ನಾಟಕಕಾರರು, ಬೆಳಗಾವಿ ಮತ್ತು ಶ್ರೀ. ಡಿಂಗ್ರಿ ನರೇಶ್, ರಂಗಕರ್ಮಿಗಳು ಮತ್ತು ಸದಸ್ಯರು, ರಂಗಸಮಾಜ ಇವರು ಆಗಮಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಶಿವಮೊಗ್ಗ ರಂಗಾಯಣ ಆಡಳಿತಾಧಿಕಾರಿಗಳಾದ ಡಾ. ಶೈಲಜಾ ಎ.ಸಿ. ಇವರು ಉಪಸ್ಥಿತರಿರುವರು.
ಈ ನಾಟಕಕ್ಕೆ ಪ್ರವೇಶ ಉಚಿತವಾಗಿದ್ದು, ರಂಗಾಸಕ್ತರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಬಂದು ವೀಕ್ಷಿಸಬೇಕೆಂದು ಶಿವಮೊಗ್ಗ ರಂಗಾಯಣದ ನಿರ್ದೇಶಕರಾದ ಪ್ರಸನ್ನ ಡಿ. ಸಾಗರ ಮತ್ತು ಆಡಳಿತಾಧಿಕಾರಿಗಳಾದ ಡಾ.ಶೈಲಜಾ ಎ.ಸಿ. ತಿಳಿಸಿದ್ದಾರೆ.
Rangayana Shivamogga ಡಿಸೆಂಬರ್ 5, ಶಿವಮೊಗ್ಗದ ರಂಗಾಯಣದಲ್ಲಿ “ನಮ್ಮೊಳಗೊಬ್ಬ ಗಾಂಧಿ” ನಾಟಕ ಪ್ರದರ್ಶನ
Date:
