ಶಿವಮೊಗ್ಗ ನಗರದ ಗಾಂಧಿ ಬಜಾರ್‌ನ ನಿವಾಸಿ, ಹಿರಿಯ ಆರ್.ಎಸ್.ಎಸ್. ಕಾರ್ಯಕರ್ತರು, ದಿಗಂಬರ ಜೈನ್ ಸಮಾಜದ ಹಿರಿಯ ಮುಖಂಡರು, ಹವ್ಯಾಸಿ ಕವಿ, ಸಮಾಜಸೇವಕರು ಹಾಗೂ ವಿಕಾಸ ವಿದ್ಯಾ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರಾಗಿದ್ದ ಶ್ರಿ ಶಾ. ಎಸ್. ಜಿ. ಜನರಾಜ ಜೈನ್ (ವಯಸ್ಸು 85) ರವರು ವಯೋಸಹಜ ಅನಾರೋಗ್ಯದಿಂದ ತಮ್ಮ ಸ್ವಗೃಹದಲ್ಲಿ ಜಿನೈಕ್ಯರಾಗಿರುವ ಸುದ್ದಿಯನ್ನು ಭದ್ರಾವತಿ ದಿಗಂಬರ ಜೈನ ಸಮಾಜ ಸಂತಾಪಪೂರ್ವಕವಾಗಿ ತಿಳಿಸುತ್ತದೆ.
ಮೃತರ ಆತ್ಮಕ್ಕೆ ಶಾಂತಿ ಲಭಿಸಲಿ ಎಂದು ಭದ್ರಾವತಿ ದಿಗಂಬರ ಜೈನ್ ಸಮಾಜ ಪ್ರಾರ್ಥಿಸುತ್ತದೆ.
