SKDRDP ಶಿವಮೊಗ್ಗ ತಾಲೂಕಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ದಿನಾಂಕ 29.11.2025ರಂದು ಡಾ. ಬಿ.ಆರ್ ಅಂಬೇಡ್ಕರ್ ಭವನದಲ್ಲಿ ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿ ಕಾರ್ಯಕ್ರಮವನ್ನು ನಡೆಸಲಾಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀಮತಿ ಎಸ್.ವೈ ಅರುಣಾದೇವಿ. ನಿರ್ದೇಶಕರು ಜನಶಿಕ್ಷಣ ಸಂಸ್ಥಾನ ಶಿವಮೊಗ್ಗ ಇವರು ನೆರವೇರಿಸಿ, ಧರ್ಮಸ್ಥಳ ಸಂಸ್ಥೆಯ ಹಲವಾರು ಮಹಿಳಾ ಪರ ಕಾರ್ಯಕ್ರಮಗಳ ಬಗ್ಗೆ ಮೆಚ್ಚುಗೆಯನ್ನು ತಿಳಿಸಿದರು.
ಶ್ರೀಯುತ ಸುರೇಶ್ ಬಾಳೆಗುಂಡಿ ಉದ್ಯಮಿ ಶಿವಮೊಗ್ಗ, ಇವರು ಮಾತನಾಡಿ ಪೂಜ್ಯರ ಸಾಮಾಜಿಕ ಮತ್ತು ಧಾರ್ಮಿಕ ಕಾರ್ಯಕ್ರಮಗಳು ಆದರ್ಶ ದಾಯಕವಾಗಿದೆ. ಪೂಜ್ಯರ ಮಾರ್ಗದರ್ಶನದಲ್ಲಿ ಉತ್ತಮ ಕಾರ್ಯಕ್ರಮಗಳನ್ನು ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಗ್ರಾಮೀಣ ಪ್ರದೇಶದ ಜನರಿಗೆ ತಲುಪುತ್ತಿವೆ. ಎಂದು ಮಾತನಾಡಿದರು.
ಕಾರ್ಯಕ್ರಮದಲ್ಲಿ ಭಾರತೀಯ ನಾರಿ ಬದುಕಿಗೆ ದಾರಿ ಎಂಬ ಸಂವಾದ ಕಾರ್ಯಕ್ರಮವನ್ನು ಏರ್ಪಡಿಸಿದ್ದು ಶ್ರೀಮತಿ ಜೆ.ಸಿ ಸವಿತ ರಮೇಶ್, ನ್ಯಾಯವಾದಿಗಳು ಜೆ.ಸಿ.ಐ ಭಾರತದ ರಾಷ್ಟ್ರೀಯ ಸಂಯೋಜಕರು ಹಾಗೂ ವ್ಯಕ್ತಿತ್ವ ವಿಕಸನದ ತರಬೇತುದಾರರು ಹೊಸಪೇಟೆ, ವಿಜಯನಗರ ಜಿಲ್ಲೆ ಇವರು ನಡೆಸಿ, ಸಮಾಜದಲ್ಲಿ ಮಹಿಳೆಯರ ಸವಾಲುಗಳು, ಸ್ವಾವಲಂಬಿ ಬದುಕಿನ ಬಗ್ಗೆ ಪ್ರಶ್ನಾವಳಿಗಳ ಮೂಲಕ ಮಾಹಿತಿ ನೀಡಿದರು.
ಶಿವಮೊಗ್ಗ ತಾಲೂಕಿನ ಸಾಧಕ ಮಹಿಳೆಯರಿಗೆ ಸನ್ಮಾನ ಮಾಡಲಾಯಿತು. ಸದ್ರಿ ಕಾರ್ಯಕ್ರಮದಲ್ಲಿ ಜ್ಞಾನವಿಕಾಸ ಕೇಂದ್ರದ 650 ಮಹಿಳಾ ಸದಸ್ಯರು ಪಾಲ್ಗೊಂಡಿದ್ದರು.
SKDRDP ಕಾರ್ಯಕ್ರಮದ ವೈಶಿಷ್ಟತೆ : ಜ್ಞಾನವಿಕಾಸ ಸದಸ್ಯರಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಆಶು ಅಭಿನಯ ಸ್ಪರ್ಧೆ, ಆಕರ್ಷಕ ವಸ್ತು ಮಳಿಗೆ ಸ್ಪರ್ಧೆ, ಕಿರುಪ್ರಹಸನ, ನೃತ್ಯ ಸ್ಪರ್ಧೆ, ಕಣ್ಣಿಗೆ ಬಟ್ಟೆ ಕಟ್ಟಿ ಮಹಿಳೆಗೆ ಶೃಂಗಾರ ಸ್ಪರ್ಧೆಗಳನ್ನು ಹಾಗೂ ಪುಷ್ಪಗುಚ್ಚ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.
ಡಾ. ಪಲ್ಲವಿ ಅದ್ವೈತಾ ಆಯರ್ವೇದ ಚಿಕಿತ್ಸಾಲಯ, ವಿನೋಬ ನಗರ ಶಿವಮೊಗ್ಗ, ಶ್ರೀಮತಿ ಪುಷ್ಪಾಶೆಟ್ಟಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಸದಸ್ಯರು ಶಿವಮೊಗ್ಗ, ಶ್ರೀಯುತ ಪುರಂದರ ಪೂಜಾರಿ ಯೋಜನಾಧಿಕಾರಿ ಶಿವಮೊಗ್ಗ ತಾಲೂಕು, ಶ್ರೀಮತಿ ರತ್ನ ಜ್ಞಾನವಿಕಾಸ ಯೋಜನಾಧಿಕಾರಿ ಪ್ರಾದೇಶಿಕ ಕಚೇರಿ ಚಿತ್ರದುರ್ಗ, ಶ್ರೀಮತಿ ಚೇತನಾ ಗೌಡ ಜ್ಞಾನವಿಕಾಸ ಸಮನ್ವಯಾಧಿಕಾರಿ ಶಿವಮೊಗ್ಗ ತಾಲೂಕು, ಶಿವಮೊಗ್ಗ ತಾಲೂಕಿನ ಮೇಲ್ವಿಚಾರಕರು ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು
SKDRDP ಧರ್ಮಸ್ಥಳ ಸಂಸ್ಥೆಯು ಹಲವಾರು ಮೆಚ್ಚುವಂತಹ ಮಹಿಳಾ ಪರ ಕಾರ್ಯಕ್ರಮ ನಡಸಿದೆ- ಬಿ.ವೈ.ಅರುಣಾದೇವಿ
Date:
