Unite and Orange the World ಮಹಿಳೆಯರ ಮೇಲಿನ ಹಿಂಸಾಚಾರದ ವಿರುದ್ಧ ಶಿವಮೊಗ್ಗ ನಗರದ ಐದು ಇನ್ನರ್‌ವ್ಹೀಲ್ ಕ್ಲಬ್‌ಗಳಿಂದ ಸ್ಟೆಪ್ ಅಪ್ ಮತ್ತು ಸ್ಪೀಕ್ ಔಟ್ ವಿಷಯದಡಿ “ಯುನೈಟ್ ಆಂಡ್ ಆರೇಂಜ್ ದಿ ವರ್ಲ್ಡ್” ಸಾರ್ವಜನಿಕ ಜಾಗೃತಿ ರ‍್ಯಾಲಿ ವಾಕಥಾನ್ ಆಯೋಜಿಸಲಾಗಿತ್ತು.
ಮಹಿಳೆಯರ ಮೇಲಿನ ಹಿಂಸಾಚಾರದ ವಿರುದ್ಧ ಧ್ವನಿ ಎತ್ತಲು, ಸಮಾಜದ ಕಲ್ಯಾಣ ಕಾಪಾಡಲು ಮತ್ತು ಮಹಿಳೆಯರು ಗೌರವಯುತ ಜೀವನ ನಡೆಸುವಂತೆ ರಕ್ಷಣೆಯನ್ನು ಖಚಿತಪಡಿಸಲು ಉಪ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು.
ಮಹಿಳೆ ಒಂಟಿಯಾಗಿ ಓಡಾಡದ ಪರಿಸ್ಥಿತಿ ಇದೆ. ದರೋಡೆ, ಆತ್ಯಾಚಾರಗಳು ಹೆಚ್ಚಾಗುತ್ತಿವೆ. ಇದಕ್ಕೆ ಪರಿಹಾರವಾಗಿ ಶಾಂತಿ ಸುವ್ಯವಸ್ಥೆ ಕಾಪಾಡಲು ಮಹಿಳೆಯರಿಗೆ ಸೂಕ್ತ ರೀತಿ ಭದ್ರತೆ ನೀಡುವಂತೆ ಮನವಿ ಮೂಲಕ ಆಗ್ರಹಿಸಲಾಯಿತು.
ವಾಕಥಾನ್ ನಗರದ ಸಹ್ಯಾದ್ರಿ ಶಾಲೆಯಿಂದ ಆರಂಭಗೊಂಡು ಜಾಗೃತಿ ಸಂದೇಶದ ಘೋಷಣೆಗಳನ್ನು ಸಾರಲಾಯಿತು. ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ವಾಕಥಾನ್ ಸಮಾರೋಪಗೊಂಡಿತು. ಮಹಿಳೆಯರ ಮೇಲಿನ ಹಿಂಸಾಚಾರ ತಡೆಗಟ್ಟುವ ಅಗತ್ಯ ಹೇಳುವ ಬೀದಿನಾಟಕವನ್ನು ಬಿಎಸ್‌ಎಸ್ ಸರ್ಜಿ ನರ್ಸಿಂಗ್ ವಿದ್ಯಾರ್ಥಿಗಳು ಪ್ರದರ್ಶಿಸಿದರು.
Unite and Orange the World ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಎಂ.ಎಸ್.ಸಂತೋಷ್, ಪಿಡಿಸಿ ವಾರಿಜಾ ಜಗದೀಶ್, ಭಾರತಿ ಚಂದ್ರಶೇಖರ್, ಇನ್ನರ್‌ವ್ಹೀಲ್ ಜಿಲ್ಲಾಧ್ಯಕ್ಷೆ ಶಬರಿ ಕಡಿದಾಳ್, ಐದು ಇನ್ನರ್‌ವ್ಹೀಲ್ ಕ್ಲಬ್ ಅಧ್ಯಕ್ಷರಾದ ವೀಣಾ ಸುರೇಶ್, ಅನ್ನಪೂರ್ಣ ರಂಗರಾಜನ್, ಶೀಲಾ ಸುರೇಶ್, ಲತಾ ರಮೇಶ್, ಶಾರದಾ ಬಸವರಾಜ್, ಮಹಿಳಾ ಕಲ್ಯಾಣ ಅಧಿಕಾರಿ ಶಶಿರೇಖಾ, ಕಲಾವಿದೆ ಎಂ.ವಿ.ಪ್ರತಿಭಾ, ಐದು ಕ್ಲಬ್‌ಗಳ ಸದಸ್ಯರು, ಕಾಲೇಜು ಉಪನ್ಯಾಸಕರು, ವಿದ್ಯಾರ್ಥಿಗಳು ಹಾಜರಿದ್ದರು.
Unite and Orange the World ಮಹಿಳೆಯರಿಗೆ ಸೂಕ್ತ ಭದ್ರತೆ ನೀಡಲು ವಾಕಥಾನ್ ಮೂಲಕ ಮನವಿ
Date:
