ಆರೋಗ್ಯ ಸಂಪತ್ತಿನ ಮುಂದೆ ಬೇರೆ ಸಂಪತ್ತು ಯಾವುದು ಇಲ್ಲ ಪ್ರತಿಯೊಬ್ಬರೂ ಸಕಾಲದಲ್ಲಿ ನಿರಂತರವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು ಸೂಕ್ತ ಆಧುನಿಕ ಯುಗದಲ್ಲಿ ದೈಹಿಕ ಚಟುವಟಿಕೆ ಇಲ್ಲದಿರುವುದು ಹಾಗೂ ಒತ್ತಡದ ಜೀವನದಲ್ಲಿ ಬದುಕುತ್ತಿರುವ ನಾವುಗಳು ಆರೋಗ್ಯವನ್ನು ಸರಿಯಾಗಿ ಇಟ್ಟುಕೊಳ್ಳಬೇಕು ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷರಾದ ವಾಗ್ದೇವಿ ಬಸವರಾಜ್ ಅವರು ನುಡಿದರು.
ಅವರು ಶಕ್ತಿಧಾಮ ಬಡಾವಣೆಯ ನಮ್ಮ ಕ್ಲಿನಿಕ್ ನಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಮಹಿಳಾ ಘಟಕದ ವತಿಯಿಂದ ಹಮ್ಮಿಕೊಳ್ಳಲಾಗ ಉಚಿತ ಆರೋಗ್ಯ ತಪಾಸಣಾ ಶಿಬಿರದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮಹಿಳೆಯರು ತಮ್ಮ ಮನೆಯ ಒತ್ತಡದ ಕೆಲಸದಲ್ಲಿ ಆರೋಗ್ಯದ ಕಡೆ ಗಮನಹರಿಸುವುದು ಕಡಿಮೆಯಾಗಿ ಸಾಕಷ್ಟು ತೊಂದರೆಗಳನ್ನು ಅನುಭವಿಸುವುದನ್ನು ನೋಡುತ್ತಾ ಬಂದಿದ್ದೇವೆ ಇಂತಹ ಆರೋಗ್ಯ ತಪಾಸಣಾ ಶಿಬಿರಗಳನ್ನು ಸಾರ್ವಜನಿಕರು ಸದಾ ಉಪಯೋಗ ಪಡಿಸಿಕೊಳ್ಳಬೇಕೆಂದು ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಡಾಕ್ಟರ್ ಗುಡದಪ್ಪ ಕಸಬಿ ಯವರು ಮಾತನಾಡುತ್ತಾ ನಮ್ಮ ಕ್ಲಿನಿಕ್ ನಲ್ಲಿ ಉಚಿತವಾಗಿ ವೈದ್ಯಕೀಯ ಅನುಕೂಲತೆಗಳು ಸಿಗುವದರಿಂದ ಅವುಗಳನ್ನು ಬಳಸಿಕೊಂಡು ಸದಾ ಆರೋಗ್ಯವಂತರಾಗಿ ಜೀವನ ನಡೆಸೋಣ ಪ್ರತಿನಿತ್ಯ ನಿರಂತರವಾಗಿ ಯೋಗ ಪ್ರಾಣಾಯಾಮ ಧ್ಯಾನ ವಾಕಿಂಗ್ ಇವುಗಳನ್ನು ಅಳವಡಿಸಿಕೊಳ್ಳುವುದರ ಮುಖಾಂತರ ನಾವು ಮಾನಸಿಕವಾಗಿ ಹಾಗೂ ದೈಹಿಕವಾಗಿ ಸದೃಢರಾಗಬೇಕು ಎಂದು ಕರೆ ನೀಡಿದರು.
ಶಿಬಿರದಲ್ಲಿ ಮಹಿಳಾ ಘಟಕದ ಉಪಾಧ್ಯಕ್ಷರಾದ
ಲಾವಣ್ಯ ಶಶಿಧರ್, ಪ್ರದಾನ
ಕಾರ್ಯದರ್ಶಿ ಆಶಾ ಆನಂದ್.
ಕಾರ್ಯದರ್ಶಿ ಬಿಂದು ವಿಜಯಕುಮಾರ್. ನಿರ್ದೇಶಕರುಗಳಾದ ಗೀತಾ ಬಸವ ಕುಮಾರ್. ಶಕುಂತಲಾ ಹವಳದ. ಶಶಿಕಲಾ
ಜಿಲ್ಲಾ ಘಟಕದ ಅಧ್ಯಕ್ಷರಾದ ರುದ್ರಮುನಿ ಸಜ್ಜನ್. ಮಲ್ಲಿಕಾರ್ಜುನ್ ಕಾನೂರ್.
ಜಿ ವಿಜಯಕುಮಾರ್ ಮಾಧ್ಯಮ ಘಟಕದ ಅಧ್ಯಕ್ಷರಾದ
ಸೋಮನಾಥ್ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಸ್ವಾಶಕೋಶ ತಜ್ಞರು ಮತ್ತು ಪಿಜೆಶಿಯನ್. ಡಾಕ್ಟರ್ ಅಭಿಷೇಕ್ ನುಚ್ಚಿನ್. ಮೂಳೆ ವೈದ್ಯರಾದ ಡಾಕ್ಟರ್ ಬಿ ಸುರೇಶ್. ಪ್ರಸುತಿ ಮತ್ತು ಶ್ರೀ ರೋಗ ತಜ್ಞರಾದ ಡಾಕ್ಟರ್ ಮಾಧುರ್ಯ ಆರ್ ಎಂ
ಸಾಕಷ್ಟು ಆರೋಗ್ಯದ ಬಗ್ಗೆ ಸಲಹೆ ನೀಡಿ ತಪಾಸಣೆ ನಡೆಸಿ ಉಚಿತ ಔಷಧವನ್ನು ವಿತರಣೆ ಮಾಡಿದರು ಇನ್ನೂರಕ್ಕೂ ಹೆಚ್ಚು ಜನ ಶಿಬಿರದಲ್ಲಿ ಭಾಗವಹಿಸಿದ್ದರು.
