Adichunchanagiri ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಶ್ರೀ ಕ್ಷೇತ್ರ ಆದಿಚುಂಚನಗಿರಿಯಲ್ಲಿ
ಡಿ.12ಕ್ಕೆ ಕಾಲಭೈರವಾಷ್ಟಮಿ ಪ್ರಯುಕ್ತ ಭೈರವಮಾಲೆ ಜೋಗಿ ದೀಕ್ಷೆ, ರಾಜ್ಯಮಟ್ಟದ ಭಜನಾ ಮೇಳ ಸೇರಿದಂತೆ ಹಲವು ಸಾಂಸ್ಕೃತಿಕ ಕಾರ್ಯಕ್ರಮಳನ್ನು ಆಯೋಜಿಸಲಾಗಿದೆ.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಪರಮ ಪೂಜ್ಯ ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದನಾಥ ಮಹಾ ಸ್ವಾಮೀಜಿ ಸಾನಿಧ್ಯವಹಿಸಲಿದ್ದು, ಪ್ರಧಾನ ಕಾರ್ಯದರ್ಶಿಗಳಾದ ಪೂಜ್ಯ ಶ್ರೀ ಶ್ರೀ ಪ್ರಸನ್ನನಾಥ ಸ್ವಾಮೀಜಿ ದಿವ್ಯ ಉಪಸ್ಥಿತಿವಹಿಸುವರು.
ಅಂದು ನಾಡಿನ ಗಣ್ಯರು, ಜನಪ್ರತಿನಿಧಿಗಳು, ವಿವಿಧ ಶಾಖಾ ಮಠದ ಶ್ರೀಗಳು ಭಾಗವಹಿಸುವರು.
ಅಂದು ಬೆಳಗ್ಗೆ 6 ಗಂಟೆಗೆ ಕ್ಷೇತ್ರಾಧಿ ದೇವತೆಗಳ ಅಭಿಷೇಕ ಸೇರಿದಂತೆ ವಿವಿಧ ಪೂಜಾ ಮಹೋತ್ಸವಗಳು ಜರುಗಲಿದ್ದು, ಪೂಜ್ಯ ಮಹಾಸ್ವಾಮಿ ಅವರ ಅಮೃತಹಸ್ತದಿಂದ ಜೋಗಿ ದೀಕ್ಷೆಯನ್ನು ನೀಡಲಾಗುವುದು. 10 ಗಂಟೆಗೆ ಬಿಜಿಎಸ್ ಸಭಾಂಗಣದಲ್ಲಿ ಸಭಾ ಕಾರ್ಯಕ್ರಮ ನಡೆಸಲಾಗುವುದು. ಈ ಪವಿತ್ರ ದಿನದಂದು ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಲು ಕೋರಲಾಗಿದೆ.
Adichunchanagiri ಶ್ರೀಕ್ಷೇತ್ರ ಆದಿಚುಂಚನಗಿರಿಯಲ್ಲಿ ಭಜನಾ ಮೇಳವನ್ನು ಆಯೋಜನೆ ಮಾಡಲಾಗಿದ್ದು, ಭಾಗವಹಿಸಲು ಆಸಕ್ತಿ ಹೊಂದಿರುವವರು ಡಿ.12ರ ಶುಕ್ರವಾರ ಬೆಳಗ್ಗೆ 7.30ಕ್ಕೆ ಹೆಸರು ನೋಂದಾಯಿಸಿಕೊಳ್ಳಬೇಕು. ಒಂದು ತಂಡದಲ್ಲಿ ಕನಿಷ್ಠ 8 ರಿಂದ 12 ಜನ ಭಾಗವಹಿಸಲು ಅವಕಾಶವಿರಲಿದ್ದು, ಭಾಗವಹಿಸುವವರು ಭಜನಾ ಪರಿಕರಗಳೊಂದಿಗೆ ಹಾಜರಿರಬೇಕು. ಭಜನೆ ಹಾಡಲು 8 ನಿಮಿಷ ಅವಕಾಶವಿದ್ದು, ತೀರ್ಪುಗಾರರ ತೀರ್ಮಾನವೇ ಅಂತಿಮವಾಗಿರುತ್ತದೆ. ಪ್ರಥಮ ಬಹುಮಾನವಾಗಿ 10 ಸಾವಿರ, ದ್ವೀತಿಯ 7,000. ತೃತೀಯ 5,000 ಹಾಗೂ ಸಮಧಾನಕರ ಬಹುಮಾನಗಳು ಇರುತ್ತವೆ. ಹೆಚ್ಚಿನ ಮಾಹಿತಿಗಾಗಿ –
9945910985, 9448124141, 77602466078 ಮಠದ ಪ್ರಧಾನ ಕಾರ್ಯದರ್ಶಿ ಪೂಜ್ಯ ಶ್ರೀಶ್ರೀ ಪ್ರಸನ್ನನಾಥ ಸ್ವಾಮೀಜಿ ತಿಳಿಸಿದ್ದಾರೆ.
Adichunchanagiri ಡಿಸೆಂಬರ್ 12. ಕಾಲಭೈರವಾಷ್ಟಮಿ. ರಾಜ್ಯಮಟ್ಟದ ಭಜನಾ ಮೇಳ
Date:
