Friday, December 5, 2025
Friday, December 5, 2025

CM Siddharamaiah ಸಿದ್ಧರಾಮಯ್ಯ ಸೀಎಂ ಪೀಠದಲ್ಲೇ ಮುಂದುವರೆಯಲೆಂದು ಅಭಿಮಾನಿಗಳ ಕಾಯಿಸೇವೆ

Date:

CM Siddharamaiah ರಾಜ್ಯದ ಜನಪ್ರಿಯ ಮುಖ್ಯಮಂತ್ರಿಗಳು ಎಲ್ಲ ವರ್ಗದ ನಾಯಕ, ಸಾಮಾಜಿಕ ನ್ಯಾಯದ ಹರಿಕಾರ, ಭಾಗ್ಯ ವಿಧಾತ, ಗ್ಯಾರೆಂಟಿಗಳ ಸರದಾರ ಸನ್ಮಾನ್ಯ ಸಿದ್ದರಾಮಯ್ಯನವರನ್ನು ರಾಜ್ಯದ ಮುಖ್ಯಮಂತ್ರಿ ಆಗಿ ಮುಂದುವರಿಸಲು ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಗೆ ಆಗ್ರಹಿಸಿ ಹಾಗೂ ಸಿದ್ದರಾಮಯ್ಯನವರಿಗೆ ರಾಜ್ಯದ ಜನರ ಸೇವೆ ಮಾಡಲು ಇನ್ನು ಹೆಚ್ಚಿನ ಶಕ್ತಿಯನ್ನು ನೀಡಲೆಂದು ಶಿವಮೊಗ್ಗ ನಗರದ ಐತಿಹಾಸಿಕ ಕೋಟೆ ಶ್ರೀ ಆಂಜನೇಯ ದೇವಾಲಯದಲ್ಲಿ ಶಿವಮೊಗ್ಗ ಜಿಲ್ಲಾ ಯುವ ಕುರುಬರ ಸಂಘ ಹಾಗೂ ಶೋಷಿತ ವರ್ಗಗಳ ಯುವ ಒಕ್ಕೂಟ ವಿಶೇಷ ಪೂಜೆ ಸಲ್ಲಿಸಿ ಸಿದ್ದರಾಮಯ್ಯನವರ ಭಾವಚಿತ್ರಕ್ಕೆ ಹಾಲಿನ ಅಭಿಷೇಕ ಮಾಡಿ ಈಡುಗಾಯಿ ಸಮರ್ಪಣೆ ಮಾಡಲಾಯಿತು.

ಸನ್ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಒಬ್ಬ ಬಡವರ ಪರ, ಮಹಿಳೆಯರ ಪರ, ದೀನ ದಲಿತರ ಪರ ನೊಂದವರ ಪರ ದಕ್ಷ ಆಡಳಿತಗಾರರಾಗಿದ್ದು. ಎರಡು ಬಾರಿ ಈ ರಾಜ್ಯದ ಮುಖ್ಯಮಂತ್ರಿ ಗಳಾಗಿ ತಾವು ಘೋಷಿಸಿದಂತಹ ಭಾಗ್ಯದ ಕಾರ್ಯಕ್ರಮಗಳನ್ನು ಹಾಗೂ ಐತಿಹಾಸಿಕ ಪಂಚ ಗ್ಯಾರಂಟಿಗಳನ್ನು ಅನುಷ್ಠಾನ ಮಾಡಿ ರಾಜ್ಯದ ಕಟ್ಟ ಕಡೆಯ ವ್ಯಕ್ತಿಯವರೆಗೂ ತಲುಪಿಸುವಂತೆ ನುಡಿದಂತೆ ನಡೆದ ನಾಯಕರಾಗಿ ಭಾರತ ದೇಶವಲ್ಲದೆ ವಿದೇಶಗಳಲ್ಲೂ ಪ್ರಶಂಸೆಯನ್ನು ಹೊಂದಿರುವಂತಹ ಸರ್ಕಾರವನ್ನು ನಡೆಸುತ್ತಿದ್ದು.

ಕೆಲವು ಕಾಣದ ಶಕ್ತಿಗಳು ಕೆಲವು ದಿನಗಳಿಂದ ಕಾಂಗ್ರೆಸ್ ಹೈಕಮಾಂಡ್ ಸಾರ್ವಜನಿಕವಾಗಿ ಅಧಿಕಾರ ಹಂಚಿಕೆ ವಿಚಾರವನ್ನು ಹೇಳದೇ ಇದ್ದರೂ ಗೊಂದಲ ಸೃಷ್ಟಿ ಮಾಡಿ ಸಿದ್ದರಾಮಯ್ಯನವರನ್ನು ವಚನಭ್ರಷ್ಟರು ಎಂದು ಹೇಳುತ್ತಿರುವುದು ಬಾಲಿಶತನದ ಹೇಳಿಕೆ ರಾಜ್ಯದ ಅಹಿಂದ ವರ್ಗದ 70 %ರಿಂದ 80% ಜನರು ಸಿದ್ದರಾಮಯ್ಯನವರ ನಾಯಕತ್ವದಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದ್ದು. ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಕೂಡಲೇ ಈ ಗೊಂದಲಗಳಿಗೆ ತೆರೆ ಹೇಳಿದ್ದು. ಸಿದ್ದರಾಮಯ್ಯನವರನ್ನು ಈ ರಾಜ್ಯದ ಮುಖ್ಯಮಂತ್ರಿಗಳಾಗಿ ಮುಂದುವರಿಸಬೇಕೆಂದು ಈ ಮೂಲಕ ಅಗ್ರಹಿಸುತೇವೆ ಎಂದಿದ್ದಾರೆ.

CM Siddharamaiah ಈ ಸಂದರ್ಭದಲ್ಲಿ ಕುರುಬರ ಯುವ ಘಟಕದ ಪ್ರಧಾನ ಕಾರ್ಯದರ್ಶಿ ಎಂ ರಾಕೇಶ್, ಸಂಘಟನಾ ಕಾರ್ಯದರ್ಶಿ ಕೆ.ಎಲ್. ಪವನ್, ಎಸ್ ಪಿ ಕೇಶವ, ಆಂಜನೇಯ, ಕೆ .ಆರ್. ಸುರೇಶ್ , ರಾಹುಲ್ ಸಿಗೆಹಟ್ಟಿ, ಶೋಷಿತ ವರ್ಗದ ಯುವ ಘಟಕದ ಸಂಚಾಲಕರಾದ ಮೋಹನ್ ಸೋಮಿನಕೊಪ್ಪ, ರಾಜೇಶ್ ಮಂದಾರ, ವೆಂಕಟೇಶ್ ಕಲ್ಲೂರು, ಪ್ರಮುಖರಾದ ಕೆ ಪಿ ದಿನೇಶ್ ಶರಾವತಿ ನಗರ, ಎಸ್ .ಜಿ ಕಿರಣ್, ಚಂದ್ರು ಗೆಡ್ಡೆ, ಮಂಜುನಾಥ್ ಉಪ್ಪಾರ್, ಮಲ್ಲಿಕಾರ್ಜುನ , ಮಂಜು ಸಿಹಗೆಟ್ಟಿ, ಆರ್‌ ಎಂ ಓಂ, ಬಾಬು, ಚಂದ್ರು, ಶಬರೀಶ್ ಆರ್ಯ, ಸಂಜಯ್, ಸುಹಾಸ್, ಇದ್ದರು

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...