Inner Wheel Shimoga ಸರ್ಕಾರಿ ಶಾಲೆಗಳು ಸರ್ವತೋಮುಖವಾಗಿ ಅಭಿವೃದ್ಧಿ ಸಂಘ ಸಂಸ್ಥೆಗಳ ಸಹಕಾರ ಅಗತ್ಯ ಎಂದು ಇನ್ನರ್ ವೀಲ್ ಶಿವಮೊಗ್ಗ ಪೂರ್ವದ ಅಧ್ಯಕ್ಷರಾದ ವೀಣಾ ಸುರೇಶ್ ಅವರು ನುಡಿದರು. ಅವರು ಸೋಗಾನೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಅಗತ್ಯವಾಗಿ ಬೇಕಾಗಿದ್ದ ಕುಕ್ಕರ್ ಗಳು ಹಾಗೂ ಇಡ್ಲಿ ಪಾತ್ರೆಗಳು ಮತ್ತು ಗೃಹ ಉಪಯೋಗಿ ವಸ್ತುಗಳನ್ನು ಇನ್ನರ್ ವೀಲ್ ಸದಸ್ಯ ಜ್ಯೋತಿ ಬೆನಕಪ್ಪನವರ ಮುಖಾಂತರ ಮುಖಾಂತರ ಶಾಲೆಗೆ ನೀಡಿದರು. ಇದೇ ಸಂದರ್ಭದಲ್ಲಿ ಜ್ಯೋತಿ ಬೆನಕಪ್ಪನವರು ಮಾತನಾಡುತ್ತಾ ಸರ್ಕಾರಿ ಶಾಲೆಗಳಲ್ಲಿ ಸಾಕಷ್ಟು ಪ್ರತಿಭೆಗಳು ಇರುತ್ತದೆ. ಅವರುಗಳಿಗೆ ನಮ್ಮಂತ ಸಂಘ ಸಂಸ್ಥೆಗಳಿಂದ ನೆರವು ಸಿಕ್ಕಾಗ ಅವರ ವಿದ್ಯಾಭ್ಯಾಸ ಇನ್ನಷ್ಟು ಉನ್ನತ ಮಟ್ಟದಲ್ಲಿ ಅಭಿವೃದ್ಧಿಯಾಗುತ್ತದೆ ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಇನ್ನರ್ ವೀಲ್ ಶಿವಮೊಗ್ಗ ಪೂರ್ವದ ಮಾಜಿ ಅಧ್ಯಕ್ಷರಾದ ಬಿಂದು ವಿಜಯ ಕುಮಾರ್ ಮಾತನಾಡುತ್ತಾ ಇನ್ನರ್ ವೀಲ್ ಕ್ಲಬ್ ವತಿಯಿಂದ ಈ ವರ್ಷ ವಿಡಿ ಸಾಕಷ್ಟು ಸಮುದಾಯ ಸೇವೆಗಳನ್ನು ಮನುಕುಲದ ಸೇವೆಗಳನ್ನು ಮಾಡುತ್ತಾ ಬಂದಿದ್ದೇವೆ ಸ್ನೇಹ ಪ್ರೀತಿ ಜೊತೆಗೆ ಸೇವೆಗೆ ಹೆಚ್ಚು ಮಹತ್ವವನ್ನು ನಮ್ಮ ಅಂತರಾಷ್ಟ್ರೀಯ ಇನ್ನರ್ ವೀಲ್ ಸಂಸ್ಥೆ ಯ
ಮೂಲ ಉದ್ದೇಶವಾಗಿದೆ ಎಂದು ನುಡಿದರು. Inner Wheel Shimoga ರಾಜ್ಯ ಸರ್ಕಾರಿ ಸಂಘದ ಉಪಾಧ್ಯಕ್ಷರಾದ ಸುಮತಿ ಕುಮಾರಸ್ವಾಮಿ ಅವರು ಮಾತನಾಡಿ ಗ್ರಾಮಾಂತರ ಶಾಲೆಗಳಿಗೆ ಸರ್ಕಾರದ ಸಹಕಾರ ಇದ್ದರೂ ಸಂಘ ಸಂಸ್ಥೆಗಳ ನೆರವು ತುಂಬಾ ಅಗತ್ಯವಾಗಿ ಬೇಕಾಗಿದೆ ಇಲ್ಲಿ ಸಾಕಷ್ಟು ಮಕ್ಕಳು ಆರ್ಥಿಕವಾಗಿ ಹಿಂದುಳಿದವರಾಗಿರುತ್ತಾರೆ ಇಂಥವರಿಗೆ ನೆರವು ಅಗತ್ಯ ಎಂದು ನುಡಿದರು. ಕಾರ್ಯಕ್ರಮದಲ್ಲಿ ವಿನೋದ ದಳವೇ ಹಾಗೂ ಇನ್ನರ್ ವೀಲ್ ಕ್ಲಬ್ಬಿನ ನಿರ್ದೇಶಕರು ಪದಾಧಿಕಾರಿಗಳು ಸದಸ್ಯರು.. ಶಿಕ್ಷಕ ಶಿಕ್ಷಕಿಯರು ಉಪಸ್ಥಿತರಿದ್ದರು
Inner Wheel Shimoga ಸರ್ಕಾರಿ ಶಾಲೆಗಳಿಗೆ ಗೃಹೋಪಯೋಗಿ ವಸ್ತುಗಳ ದೇಣಿಗೆ ನೀಡಿ ಸಹಕರಿಸಬೇಕು- ವೀಣಾ ಸುರೇಶ್
Date:
