Friday, December 5, 2025
Friday, December 5, 2025

Kannada Rajyotsava ಕೊಪ್ಪಳ ಕಿರ್ಲೋಸ್ಕರ್ ಫೆರಸ್ ಕಾರ್ಖಾನೆ ಕಾರ್ಮಿಕ ಸಂಘದಿಂದ ಕನ್ನಡ ರಾಜ್ಯೋತ್ಸವ

Date:

Kannada Rajyotsava ಪ್ರತಿ ವರ್ಷ ನವೆಂಬರ್ ಒಂದನೇಯ ತಾರೀಖಿನಂದು ಸಂಪ್ರದಾಯಬದ್ಧವಾಗಿ ಧ್ವಜಾರೋಹಣ ಕಾರ್ಯಕ್ರಮ ನೆರವೇರುತ್ತದೆ. ಅದರಂತೆ ಈ ವರ್ಷವೂ ಸಹ ಕಾರ್ಖಾನೆಯ ವ್ಯವಸ್ಥಾಪಕ ನಿರ್ಧೇಶಕರಾದ ಶ್ರೀ ಆರ್ ವಿ. ಗುಮಾಸ್ತೆಯವರಿಂದ ನೇರವೇರಿಸಿದರು.

ಈ ವರ್ಷವೂ ರಾಜ್ಯೋತ್ಸವ ದಿನವನ್ನು ವಿಶೇಷವಾಗಿ ಆಚರಿಸಲು ಮುಂದಾಗಿ ನವೆಂಬರ್ ತಿಂಗಳ ಪೂರ್ಣ ರಾಜ್ಯೋತ್ಸವದ ಆಚರಿಸಲಾಯಿತು. ಉದ್ಯೋಗಿಗಳಿಗಾಗಿ ಕ್ರಿಕೆಟ್, ಫುಟ್‌ಬಾಲ್, ಕೇರಂ, ಚೆಸ್ ಹಾಗೂ ಕನ್ನಡ ರಸಪ್ರಶ್ನೆ ಮೊದಲಾದ ಹಲವಾರು ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.

ಈ ಸ್ಪರ್ಧೆಗಳಲ್ಲಿ ಕಾರ್ಖಾನೆಯ ಉದ್ಯೋಗಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉತ್ಸಾಹಭರಿತವಾಗಿ ಭಾಗವಹಿಸಿದ್ದರು.

ಸ್ಪರ್ಧೆಗಳಲ್ಲಿ ವಿಜೇತರಾದ ಉದ್ಯೋಗಿಗಳಿಗೆ ಬಹುಮಾನ ಪ್ರದಾನ ಮಾಡುವ ಸಮಾರೋಪ ಸಮಾರಂಭವನ್ನು 26-11-2025 ಬುಧವಾರ ಕಾರ್ಖಾನೆಯ ಸಭಾಂಗಣದಲ್ಲಿ (ಆಡಿಟೋರಿಯಂ) ಜರಗಿಸಲಾಯಿತು.

ಕಾರ್ಯಕ್ರಮಕ್ಕೆ ವೀರಕನ್ನಡಿಗ ಶ್ರೀ ಶರಣಪ್ಪ ಹೂಗಾರ್ ಜೀ ವಿಶೇಷ ಅತಿಥಿಯಾಗಿ ಆಗಮಿಸಿದ್ದರು. ಕಾರ್ಯಕ್ರಮವನ್ನು ಬೀಡುಕಬ್ಬಿಣ ವಿಭಾಗದ ಕಾರ್ಯನಿರ್ವಾಹಕ ಉಪಾಧ್ಯಕ್ಷರಾದ ಶ್ರೀ ಎಂ.ಜಿ. ನಾಗರಾಜ್ ಅಧ್ಯಕ್ಷತೆ ವಹಿಸಿ ಉದ್ಘಾಟಿಸಿದರು. ಮಾನವ ಸಂಪನ್ಮೂಲ ಮತ್ತು ಆಡಳಿತ ವಿಭಾಗದ ಕಾರ್ಯನಿರ್ವಾಹಕ ಉಪಾಧ್ಯಕ್ಷರಾದ ಡಾ. ನಾರಾಯಣ, ಹಾಗೂ ಕಿರ್ಲೋಸ್ಕರ್ ಫೆರಸ್ ಕಾರ್ಮಿಕ ಸಂಘದ ಉಪಾಧ್ಯಕ್ಷ ಶ್ರೀ ಶರಣಪ್ಪ ಮತ್ತು 2025ರ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಶ್ರೀಮತಿ ಭೀಮವ್ವ ದೂಡ್ಡಬಾಳಪ್ಪ ಶಿಳ್ಳೇಕ್ಯಾತರ್ (ಬೆಟಗೇರಿ, ಕೋಪ್ಪಳ) ಅವರನ್ನು ವಿಷೇಷವಾಗಿ ಆಹ್ವಾನಿಸಲಾಗಿತ್ತು.

ವೇದಿಕೆಯಲ್ಲಿ ಶ್ರೀಮತಿ ಭೀಮವ್ವ ದೂಡ್ಡಬಾಳಪ್ಪ ಶಿಳ್ಳೇಕ್ಯಾತರ್ ಅವರನ್ನು ಸನ್ಮಾನಿಸಲಾಯಿತು. ಪುರಾತನ ತೋಗಲುಗೋಂಬೆ ಕಲೆ ಪ್ರೋತ್ಸಾಹಕ್ಕಾಗಿ ಕಾರ್ಖಾನೆಯ ವತಿಯಿಂದ ಸಹಾಯಧನ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಕೆ.ಎಫ್‌.ಐ.ಎಲ್ ಮಹಿಳಾ ಉದ್ಯೋಗಿ ಕುಮಾರಿ ಕೆ. ಸುನಂದ ಕನ್ನಡದ ಭಾವಗೀತೆ ಹಾಡಿ ಮನಸೆಳೆದರು. ಅತಿಥಿಗಳು ಹಾಗೂ ಲೇಡೀಸ್ ಕ್ಲಬ್ ಸದಸ್ಯರಿಂದ ದೀಪ ಪ್ರಜ್ವಲನ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ವಿಶೇಷ ಅತಿಥಿ ಶ್ರೀ ಶರಣಪ್ಪ ಹೂಗಾರ್ ಅವರು ಮಾತನಾಡಿ ಕಾರ್ಖಾನೆಯಲ್ಲಿ ಕನ್ನಡದ ಬಳಕೆಯ ಮಹತ್ವವನ್ನು ಶ್ಲಾಘಿಸಿದರು. ಮಾನವ ಸಂಪನ್ಮೂಲ ಮತ್ತು ಆಡಳಿತ ವಿಭಾಗದ ಕಾರ್ಯನಿರ್ವಾಹಕ ಉಪಾಧ್ಯಕ್ಷರಾದ ಡಾ. ನಾರಾಯಣ ಅವರು ತಮ್ಮ ಕನ್ನಡದ ಅನುಭವ ಮತ್ತು ಬಳಕೆಯನ್ನು ಹಂಚಿಕೊಂಡರು. ಶ್ರೀ ಎಂ.ಜಿ. ನಾಗರಾಜ್ ಅವರು ಸಂಸ್ಥೆಯ ಅಭಿವೃದ್ಧಿ, ಉದ್ಯೋಗಿಗಳ ಕೊಡುಗೆ ಮತ್ತು ಕನ್ನಡ ಸಂಸ್ಕೃತಿಗೆ ನೀಡಲಾಗುತ್ತಿರುವ ಪ್ರೋತ್ಸಾಹವನ್ನು ವಿವರಿಸಿದರು.
ಮುಕ್ತಾಯವಾಗಿ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಜಯಗಳಿಸಿದ ಉದ್ಯೋಗಿಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು.

Kannada Rajyotsava ಅತಿಥಿಗಳಾಗಿ ಆಗಮಿಸಿದ್ದ ಶ್ರೀ ಶರಣಪ್ಪ ಹೂಗಾರ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮವನ್ನು ಮಾನವ ಸಂಪನ್ಮೂಲ ಮತ್ತು ಆಡಳಿತ ವಿಭಾಗ ಅತ್ಯಂತ ಅಚ್ಚುಕಟ್ಟಾಗಿ ಆಯೋಜಿಸಿತ್ತು. ಸುರಕ್ಷತಾ ವಿಭಾಗದ ಮ್ಯಾನೇಜರ್ ಮುರುಳೀಧರ್ ನಾಡಿಗೇರ್ ಅವರು ಕಾರ್ಯಕ್ರಮ ನಿರೂಪಣೆ ನೆರವೇರಿಸಿದರು.

ಕಾರ್ಯಕ್ರಮಕ್ಕೆ ವಿವಿಧ ವಿಭಾಗಗಳ ಅಧಿಕಾರಿ–ಉದ್ಯೋಗಿಗಳು, ಕಾರ್ಮಿಕರು ಹಾಗೂ ಲೇಡೀಸ್ ಕ್ಲಬ್ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಶೋಭೆಯನ್ನು ತಂದರು.

ವರದಿ: ಮುರುಳೀಧರ್ ನಾಡಿಗೇರ್

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...