SAIL-VISL ೨೫ನೇ ನವೆಂಬರ್, ೨೦೨೫ ರಂದು ಸೈಲ್- ವಿಐಎಸ್ಎಲ್ ನ ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ ಯೋಜನೆ ಅಡಿಯಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಗ್ರಾಮೀಣ ತರಬೇತಿ ಚಟುವಟಿಕೆಗಳನ್ನು ಹೆಚ್ಚಿಸಲು ಅನುಕೂಲವಾಗುವಂತೆ ‘ಡಿಜಿಟಲ್ ಇಂಟರಾಕ್ಟೀವ್ ಪ್ಯಾನಲ್ ಮತ್ತು ಎರಡು ಕಂಪ್ಯೂಟರ್’ಗಳನ್ನು ಕರ್ನಾಟಕದ ಭದ್ರಾವತಿಯ ಶಿಕ್ಷಣ ಇಲಾಖೆಗೆ ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ವಿಐಎಸ್ಎಲ್ ವತಿಯಿಂದ ಕಾರ್ಯಪಾಲಕ ನಿರ್ದೇಶಕರಾದ ಶ್ರೀ ಅನೂಪ್ ಕುಮಾರ್, ಶ್ರೀ ಬಿ. ವಿಶ್ವನಾಥ, ಮುಖ್ಯ ಮಹಾಪ್ರಬಂಧಕರು (ಮಾನವ ಸಂಪನ್ಮೂಲ), ಶ್ರೀ ಎಲ್. ಪ್ರವೀಣ್ ಕುಮಾರ್, ಮಹಾಪ್ರಬಂಧಕರು (ಮಾನವ ಸಂಪನ್ಮೂಲ ಮತ್ತು ಸಾರ್ವಜನಿಕ ಸಂಪರ್ಕ) ಮತ್ತು ಸಿ.ಎಸ್.ಆರ್ ಅಪೆಕ್ಷ್ ಸಮಿತಿಯ ಸದಸ್ಯರು, ಶ್ರೀ ಅಜಯ್ ಡಿ. ಸೋಂಕುವಾರ್, ಉಪ ಮಹಾಪ್ರಬಂಧಕರು ಮತ್ತು ಸಿ.ಎಸ್.ಆರ್ ಅಪೆಕ್ಸ್ ಸಮಿತಿಯ ಸದಸ್ಯರು, ಶ್ರೀ ಎಮ್.ಎಲ್. ಯೋಗೇಶ್, ಕಿರಿಯ ಪ್ರಬಂಧಕರು ಮತ್ತು ಸಿ.ಎಸ್.ಆರ್ ಅಪೆಕ್ಷ್ ಸಮಿತಿಯ ನೋಡಲ್ ಅಧಿಕಾರಿ ಉಪಸ್ಥಿತರಿದ್ದರು. ಹಾಗೆಯೇ ಭದ್ರಾವತಿಯ ಶಿಕ್ಷಣ ಇಲಾಖೆಯಿಂದ ಶ್ರೀ ಎ.ಕೆ. ನಾಗೇಂದ್ರಪ್ಪ, ಕ್ಷೇತ್ರ ಶಿಕ್ಷಣ ಅಧಿಕಾರಿ, ಭದ್ರಾವತಿ, ಶ್ರೀ ಪಂಚಾಕ್ಷರಿ, ಕ್ಷೇತ್ರ ಸಂಪನ್ಮೂಲ ಅಧಿಕಾರಿ, ಮತ್ತು ಶ್ರೀ ದಯಾನಂದ, ಶಿಕ್ಷಣ ಸಂಯೋಜನಾಧಿಕಾರಿ, ಭದ್ರಾವತಿ ಉಪಸ್ಥಿತರಿದ್ದರು.
ಗಿISಐ ನ ಕಾರ್ಯಪಾಲಕ ನಿರ್ದೇಶಕರಾದ ಶ್ರೀ ಅನೂಪ್ ಕುಮಾರ್‌ರವರು ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ ಯೋಜನೆ ಅಡಿಯಲ್ಲಿ ಕೈಗೊಳ್ಳಲಾದ ವಿವಿಧ ಚಟುವಟಿಕೆಗಳನ್ನು ಉದ್ಘಾಟಿಸುತ್ತ, ನಮ್ಮ ಸಂಸ್ಥೆಯ ಪರಿಧಿಯಲ್ಲಿರುವರೆಲ್ಲರ ಮುಖದಲ್ಲಿ ನಗುವನ್ನು ತರುವುದು, ಅವರ ಜೀವನವನ್ನು ಸುಧಾರಿಸುವುದು ಮತ್ತು ನಮ್ಮ ಸಾಮಾಜಿಕ ಜವಾಬ್ದಾರಿಗಳ ಮೂಲಕ ಅರ್ಥಪೂರ್ಣ ಬದಲಾವಣೆಯನ್ನು ತರುವ ಗುರಿಯನ್ನು ಹೊಂದಿದ್ದೇವೆ. ಸೈಲ್- ವಿಐಎಸ್ಎಲ್ ಭವಿಷ್ಯದಲ್ಲಿಯೂ ಸಹ ಇದನ್ನು ಮಾಡಲು ಶ್ರಮಿಸುತ್ತದೆ ಎಂದರು.
SAIL-VISL ಭದ್ರಾವತಿಯ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀ ಎ.ಕೆ. ನಾಗೇಂದ್ರಪ್ಪನವರು ಮಾತನಾಡುತ್ತ, SಂIಐ-ಗಿISಐ ಆಡಳಿತ ಮಂಡಳಿ ಕಳೆದ ಅವಧಿಯಲ್ಲಿ ಶಿವಮೊಗ್ಗ ಜಿಲ್ಲೆಯಾಧ್ಯಂತ ಸಕಾರಿ ಶಾಲೆಯ ಮಕ್ಕಳಿಗೆ ಬೆಂಚುಗಳು, ಮೇಜುಗಳು, ಬೋರ್ಡ್ಗಳು, ಶಾಲಾ ಪುಸ್ತಕಗಳು ಮತ್ತು ಬ್ಯಾಗ್‌ಗಳು ಮುಂತಾದ ಶೈಕ್ಷಣಿಕ ಉಪಕರಣಗಳು ಮತ್ತು ವಿಶೇಷ ಚೇತನ ಮಕ್ಕಳಿಗೆ ವಿಶೇಷ ಸಹಾಯಕ ಸಾಧನಗಳನ್ನು ಒದಗಿಸುವಲ್ಲಿ ನೀಡಿದ ಎಲ್ಲಾ ಸಹಾಯಕ್ಕಾಗಿ ಧನ್ಯವಾಗಳನ್ನು ಅರ್ಪಿಸಿದರು. ಇದು ಜಿಲ್ಲೆಗಳಲ್ಲಿ ಶಿಕ್ಷಣದ ಗುಣಮಟ್ಟವನ್ನು ಸುಧಾರಿಸುವಲ್ಲಿ ಬಹಳ ಸಹಾಯ ಮಾಡುತ್ತದೆ. ಕಳೆದ ವರ್ಷ ಸ್ವೀಕರಿಸಿದ ವೀಡಿಯೋ ಕಾನ್ಫರೆನ್ಸ್ ಮತ್ತು ವೆಬ್ ಕ್ಯಾಮೆರಾ ವ್ಯವಸ್ಥೆಯ ಜೊತೆಗೆ ಇಂದು ಸ್ವೀಕರಿಸಿದ ‘ಡಿಜಿಟಲ್ ಇಂಟರಾಕ್ಟೀವ್ ಪ್ಯಾನಲ್ ಮತ್ತು ಕಂಪ್ಯೂಟರ್‌ಗಳು ತಾಲ್ಲೂಕಿನ ೯೨೫ ಶಿಕ್ಷಕರಿಗೆ ಮತ್ತು ೪೬೦೦೦ ವಿದ್ಯಾರ್ಥಿಗಳಿಗೆ ತರಬೇತಿ ನೀಡುವಲ್ಲಿ ಬಹಳ ಸಹಕಾರಿಯಾಗಲಿದೆ ಎಂದರು.
ಶ್ರೀ ಯೋಗೇಶ್,ಎಮ್.ಎಲ್ ಸ್ವಾಗತಿಸಿದರು ಮತ್ತು ಶ್ರೀಮತಿ ವಾಣಿ ಪಾಟೀಲ್ ನಿರೂಪಿಸಿದರು.
SAIL-VISL ಗ್ರಾಮಾಂತರ ಶಿಕ್ಷಕರ ತರಬೇತಿಯತ್ತ – ಸೈಲ್- ವಿಐಎಸ್ಎಲ್ ನ ಚಿತ್ತ
Date:
