Gangadharendra Saraswati Swamiji ಗೀತೆಯ ಸಂದೇಶದ ಅಳವಡಿಕೆಯು ಮುಖ್ಯವಾಗಿ
ಉದ್ಯೋಗಿಯು ತನ್ನ ಮನಸ್ಸನ್ನ ನಿರ್ವಹಣೆ ಮಾಡಿಕೊಳ್ಳುವವ
ಉದ್ಯೋಗವನ್ನ ಚೆನ್ನಾಗಿ ಮಾಡುತ್ತಾನೆ.ತುರ್ತು ಪರಿಸ್ಥಿತಿ ,
ಇಡೀ ಮನಸ್ಸಿನ ನಿಯಂತ್ರಣ ತಪ್ಪುವ ಸಂದರ್ಭ ಬಂದಾಗ ಹೇಗೆ ಸುಧಾರಿಸಿಕೊಳ್ಳುತ್ತೇವೆ ಎಂಬ ಮೈಂಡ್ ಮ್ಯಾನೇಜ್ಮೆಂಟ್
ಕೌಶಲ ಎನ್ನುತ್ತೇವೆ. ಈ ಮನಸ್ಸಿನ ನಿರ್ವಹಣೆಯೇ ಬಹಳ ಮುಖ್ಯವಾಗಿದೆ.ಅದೇ ಯಶಸ್ಸಿನ ಕೀಲಿಕೈ ಎಂದು
ಸೋಂದಾ ಸ್ವರ್ಣವಲ್ಲಿ ಮಹಾಸಂಸ್ಥಾನದ ಶ್ರೀಗಂಗಾಧರೇಂದ್ರ ಸರಸ್ವತಿಮಹಾಸ್ವಾಮಿಗಳು ಹೇಳಿದರು.
ಶಿವಮೊಗ್ಗದ ಪೆಸಿಟ್ ಶಿಕ್ಷಣ ಸಂಸ್ಥೆಯ ಬಿಸಿನೆಸ್ ಮ್ಯಾನೇಜ್ಮೆಂಟ್ ಕಾಲೇಜು,
ಶ್ರೀಭಗವದ್ಗೀತಾ ಅಭಿಯಾನ ಶಿವಮೊಗ್ಗ ಜಿಲ್ಲಾ ಸಮಿತಿ ಮತ್ತು
ಸೋಂದಾ ಸ್ವರ್ಣವಲ್ಲಿ ಮಹಾ ಸಂಸ್ಥಾನ ಇವರ ಆಶ್ರಯದಲ್ಲಿ
ಏರ್ಪಡಿಸಿದ್ದ “ ಭವಿಷ್ಯದ ಉದ್ಯಮ ನಿರ್ವಾಹಕರಿಗೆ ಭಗವದ್ಗೀತೆಯಿಂದ ಸಿಗುವ ವಿಚಾರ ಸುಗಂಧ “ ವಿಚಾರದ ಬಗ್ಗೆ ಪೂಜ್ಯಶ್ರೀಗಳು ಮಾತನಾಡುತ್ತಿದ್ದರು.
ಉದ್ಯೋಗ ಕ್ಷೇತ್ರಗಳಲ್ಲಿ ಎರಡು ಭಾಗಗಳಿವೆ. ಮಾನವ ಸಂಪನ್ಮೂಲ ಮೊದಲನೇ ಭಾಗವಾಗಿದೆ. ಎರಡನೇಯದು
ಮಿಕ್ಕಇತರೆ ಸಂಪನ್ಮೂಲಗಳು.
ಮಾನವ ಸಂಪನ್ಮೂಲದ ಬಗ್ಗೆ ಗೀತೆ ಪ್ರಧಾನವಾಗಿ ತಿಳಿಸುತ್ತದೆ.
ಇತರೆ ಸಂಪನೂಲಗಳ ಬಗ್ಗೆ
ಶೈಕ್ಷಣಿಕವಾಗಿ ಬೋಧನಾ ಶಾಸ್ತ್ರಗಳಿವೆ.
Gangadharendra Saraswati Swamiji ಕ್ಷೀಣಿಸುವಂಥ ಮಾನವ ಸಂಪನ್ಮೂಲವನ್ನ ಉನ್ನತವಾಗಿ ಮೇಲೆತ್ತಿ ಬಲಶಾಲಿಯನ್ನಾಗಿ ಮಾಡುವುದೇ ಭಗವದ್ಗೀತೆಯ
ದೃಷ್ಟಿ ಎಂದು ಗೀತೆಯ ಶ್ಲೋಕಗಳಲ್ಲಿ ದಕ್ಷತೆ ಬಗ್ಗೆ ಉಲ್ಲೇಖಗಳನ್ನ ಸೋದಾಹರಣವಾಗಿ ಶ್ರೀಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮಿಗಳು ವಿವರಿಸಿದರು.
ನವೆಂಬರ್ 30 ರ ಭಗವದ್ಗಿತೆಯ ಹನ್ನೊಂದನೇ ಅಧ್ಯಾಯದ ಸಾಮೂಹಿಕ ಪಠಣದ ಮಹಾಸಮರ್ಪಣೆ ಕಾರ್ಯದಲ್ಲಿ ವಿದ್ಯಾರ್ಥಿಗಳೆಲ್ಲರೂ ಭಾಗಿಗಳಾಗಲು ಪೂಜ್ಯಶ್ರೀಗಳು ಕರೆಕೊಟ್ಟರು.
ಭಗವದ್ಗೀತಾ ಅಭಿಯಾನದ ಶಿವಮೊಗ್ಗ ಜಿಲ್ಲಾ ಸಮಿತಿ ಕಾರ್ಯಾಧ್ಯಕ್ಷ ರು ,ಹಿರಿಯ ವಕೀಲರೂ ಆಗಿರುವ ಅಶೋಕ ಜಿ ಭಟ್ ಪ್ರಸ್ತಾವನಾ ಭಾಷಣ ಮಾಡಿದರು.
ಉದ್ದಿಮೆಯಲ್ಲಿ ಮಾಲೀಕ ಮತ್ತು ಶ್ರಮಿಕರ ನಡುವೆ ಕಾರ್ಯನಿರ್ವಹಣೆಯು
ಸವಾಲಾತ್ಮಕ ಸನ್ನಿವೇಶಗಳನ್ನ ಸೃಷ್ಟಿಸುತ್ತದೆ. ಅಂತಹ
ಕ್ಲಿಷ್ಟಕರ ಸಂದರ್ಭದಲ್ಲಿ ಕರ್ಮಣ್ಯೇವಾಧಿಕಾರಸ್ತೆ ಮಾ ಫಲೇಷು ಕದಾಚನಾ ಎಂಬ ಸಂದೇಶ ಈ ಪ್ರಸಂಗದಲ್ಲಿ ಹೇಗೆ ಆಗಿನ ಮನೋಸ್ಥಿತಿ ಇರಬೇಕು ಎಂಬುದನ್ನ ಸೂಕ್ತವಾಗಿ ತಿಳಿಸುತ್ತದೆ. ಎಂದರು.
ವಿಷಯ ಪರಿಣಿತರಾಗಿ
ಬೆಂಗಳೂರಿನ ಮ್ಯಾನೇಜ್ಮೆಂಟ್ ಗುರು ಪ್ರೊ. ವೆಂಕಟ ಸುಬ್ರಮಣಿಯನ್ ಪ್ರಧಾನ ಭಾಷಣ ಮಾಡಿದರು.
ಏರಿಳಿತ, ಅನಿಶ್ಚಿತತೆ, ಸಂಕೀರ್ಣತೆ, ಮತ್ತು
ಸಂಧಿಗ್ದತೆಗಳ (VUCA) ನಡುವೆ ಇರುವ ನಮ್ಮ ಬದುಕಿನಿಂದ ನಿಧಾನವಾಗಿ ಬಿಡಿಸಿಕೊಂಡು ಬರಬೇಕಾದರೆ ನಮಗೆ ಒಂದು ವಿದ್ಯೆಯ ಸಹಾಯ ಬೇಕು . ಜಗತ್ತಿನಲ್ಲಿ
ಪ್ರಸ್ತುತವಿರುವ ಶೈಕ್ಷಣಿಕ ವ್ಯವಸ್ಥೆ
ಅದನ್ನ ಒಳಗೊಂಡಿದೆಯೆ? ಎಂಬುದು ಪ್ರಶ್ನಾರ್ಥಕವಾಗಿದೆ.
ಆ ತಿಳುವಳಿಕೆಯ ನಮ್ಮ ಭಾರತೀಯ ಜ್ಞಾನವಂತಿಕೆಯಲ್ಲಿ ಸಿಗುತ್ತದೆ.ಈ ಜ್ಞಾನವನ್ನ
ಭಗವದ್ಗೀತೆಯು ನಮಗೆ ನೀಡುತ್ತದೆ. ಎಂದು ಹೇಳಿದರು.
ಉದ್ಯೋಗ ಕ್ಷೇತ್ರ ಮತ್ತು ಮಾನವ ಸಂಪನ್ಮೂಲಗಳ ನಿರ್ವಹಣೆ ಗೀತೆಯಲ್ಲಿ ಸಂದೇಶವಿದೆ ಎಂದು ತಿಳಿಸಿದರು.
ಯುದ್ಧರಂಗದಲ್ಲಿ ಅರ್ಜುನ
ಕೃಷ್ಣನನ್ನ ಸಂಪೂರ್ಣ ಗುರುವಾಗಿ ಒಪ್ಪಿಕೊಂಡ ನಂತರ
ಆವನಿಗೆ ಅಂತರಂಗದಲ್ಲಿನ
ಭಯ ನಿವಾರಣೆ ಆಯಿತು.
ಯಾವ ವಿಚಾರದಲ್ಲೂ ಗೊಂದಲ ಇರಬಾರದು.ಆಗ ನಮ್ಮನ್ನ ನಾವೇ ನಿರ್ವಹಿಸಲು ಸಾಧ್ಯ ಎಂದು ಗೀತೆಯಲ್ಲಿನ ಹಲವು ಶ್ಲೋಕಗಳಲ್ಲಿ ತಿಳಿದು ಬರುವ ಅರ್ಥ ಭಾವಗಳನ್ನ ವಿವರಿಸಿದರು.
ಶಾಸಕ ಮತ್ತು ಅಭಿಯಾನ ಶಿವಮೊಗ್ಗ ಜಿಲ್ಲಾ ಸಮಿತಿಯ
ಅಧ್ಯಕ್ಷ ಡಿ.ಎಸ್.ಅರುಣ್ ಅವರು ಮಾತನಾಡಿ ‘ ಮೌಲ್ಯಾಧಾರಿತ ಶಿಕ್ಷಣ ಇವತ್ತು
ಅಗತ್ಯವಿದೆ.ಈಗ ಇಟೆಲಿಜೆಂಟ್ ಕೋಷಂಟ್ ಜಾಸ್ತಿಯಾಗಿ ಎಮೋಷನಲ್ ಕೋಷಂಟ್ ಕಡಿಮೆಯಾಗಿದೆ. ಅದನ್ನ ತುಂಬಿಕೊಡುವಲ್ಲಿ ಭಗವದ್ಗೀತೆ
ಒಂದು ಕೊಂಡಿಯಾಗಿದೆ. ಎಂದರು.
ಜನಶಿಕ್ಷಣ ಸಂಸ್ಥೆಯ ಮುಖ್ಯಸ್ಥೆ ಹಾಗೂ ಪೆಸಿಟ್ ಶಿಕ್ಷಣ ಸಂಸ್ಥೆಯ ನಿರ್ದೇಶಕಿ
ಶ್ರೀಮತಿ ಅರುಣಾದೇವಿ ಅವರು
ಮಾತನಾಡಿ ನಮಗೆ ಮೊದಲ
ಮ್ಯಾನೇಜ್ಮೆಂಟ್ ಗುರುಗಳೆಂದರೆ
ನಮ್ಮ ನಮ್ಮ ತಂದೆತಾಯಂದಿರು. ಅವರು ಬಾಳಿದ,ವ್ಯವಹರಿಸಿದ ದೈನಂದಿನ ಚಟುವಟಿಕೆಯನ್ನ ಗಮನವಿಟ್ಟು ನೋಡಿದರೆ ನಾವು ದೊಡ್ಡವರಾದ ಮೇಲೆ ಅನುಸರಿಸಬೇಕಾದ ಪಾಠಗಳು ಸಿಗುತ್ತವೆ ಎಂದರು.
ಭಗವದ್ಗೀತೆಯ ಹೊಳಹುಗಳ ಆಧರಿಸಿ ಮ್ಯಾನೇಜ್ಮೆಂಟ್ ನಿರ್ವಹಣೆ ಬಗ್ಗೆ ಸೂಕ್ತ ಪಠ್ಯ ನಿರ್ಮಿಸಿದರೆ ಅಂತಹ ಅದ್ಯಯನದ ಕೋರ್ಸ್ ಗಳನ್ನ ತಮ್ಮ ಪೆಸಿಟ್ ಸಂಸ್ಥೆಯಲ್ಲಿ ಆರಂಭಿಸಲು ಸಾಧ್ಯ ಎಂಬ ಅಪೇಕ್ಷೆಯನ್ನ ವ್ಯಕ್ತಪಡಿಸಿದರು.
ವಂದನಾರ್ಪಣೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.
