ಶಿವಮೊಗ್ಗ ಜಿಲ್ಲಾಡಳಿತ ಜಿಲ್ಲಾ ಪಂಚಾಯತ್ ಶಿವಮೊಗ್ಗ ಜಿಲ್ಲಾ ಆರೋಗ್ಯ ಕೇಂದ್ರ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿ ಹಾಗೂ ಲಯನ್ಸ್ ಇಂಟರ್ನ್ಯಾಷನಲ್ ಜಿಲ್ಲಾ 317ಸಿ ಶಿವಮೊಗ್ಗ ಇದರ ವತಿಯಿಂದ ಅಂಧತ್ವ ನಿವಾರಣ ವಿಭಾಗ ಶಿವಮೊಗ್ಗ ಇವರಿಂದ ಉಚಿತ ನೇತ್ರ ತಪಾಸಣೆ ಹಾಗೂ ನೇತ್ರ ಚಿಕಿತ್ಸೆ ಶಿಬಿರವನ್ನು ತುಂಗನಗರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನ.28ರ ಸೋಮವಾರ ಬೆಳಿಗ್ಗೆ 9:30 ರಿಂದ ಮಧ್ಯಾಹ್ನ 2:30ವರೆಗೆ ಏರ್ಪಡಿಸಲಾಗಿದೆ.
ಅವಶ್ಯಕತೆ ಇರುವವರು ಇದರ ಸದುಪಯೋಗ ಪಡೆದುಕೊಳ್ಳಲು ನಂದೀಶ್ 94481 49878 ಮತ್ತು ಕುಮಾರ್ ಜಿಎಸ್ 94484 17179 ಮತ್ತು ಶಿವರಾಂ 94491 35895 ಇವರಲ್ಲಿ ಸಂಪರ್ಕಿಸಿ
