Kuvempu University ವಿಶ್ವವಿದ್ಯಾಲಯಗಳು ಜ್ಞಾನಕೇಂದ್ರಗಳು. ಸಂವಿಧಾನಾತ್ಮಕ ವ್ಯವಸ್ಥೆಯಲ್ಲಿ ರಚಿತವಾಗಿವೆ . ಯಾವುದೇ ಧರ್ಮದ ಬಗ್ಗೆ ,ಅದರ ಎಲ್ಲಾ ಮಗ್ಗುಲುಗಳ ಬಗ್ಗೆ ವಿಶ್ಲೇಷಾಣಾತ್ಮಕ ನಿಟ್ಟಿನಲ್ಲಿ ಚರ್ಚೆ ನಡೆಸಬಹುದು. ಈ ಹಿನ್ನೆಲೆಯಲ್ಲಿ ಪ್ರಿಯವಾದ ಸಂಗತಿಗಳ ಚರ್ಚೆಗೆ ಮಾತ್ರ ಸೀಮಿತವಾಗಬಾರದು. ಅಪ್ರಿಯವಾದ ಸಂಗತಿಗಳನ್ನ ಮೂಲೆಗೆ ತಳ್ಳದೇ ಅವುಗಳ ಬಗ್ಗೆಯೂ ಆರೋಗ್ಯಕರ ಚರ್ಚೆ ವಾಗ್ವಾದ ನಡೆಯಬೇಕೆನ್ನುವುದು ನನ್ನ ಅನಿಸಿಕೆ. ಬೀದಿಯಲ್ಲಿ ಚರ್ಚೆಯಾದರೆ ಜಗಳದ ಸ್ವರೂಪ ಪಡೆಯುತ್ತದೆ. ಆದರೆ ವಿಶ್ವವಿದ್ಯಾಲಯಗಳಂತಹ ಕೇಂದ್ರಗಳಲ್ಲಿ ಎರಡೂ ಪಕ್ಷದವರು ಗೌರವಯುತವಾಗಿ ಚರ್ಚಿಸುವಂತಾಗಬೇಕು ಎಂದು
ಕುವೆಂಪು ವಿವಿ ಕುಲಪತಿ ಪ್ರೊ. ಶರತ್ ಅನಂತ ಮೂರ್ತಿ ಹೇಳಿದ್ದಾರೆ.
ಸ್ವರ್ಣರಶ್ಮಿ ಟ್ರಸ್ಟ್ , ಶ್ರೀಭಗವದ್ಗೀತಾ ಅಭಿಯಾನ ಶಿವಮೊಗ್ಗ ಜಿಲ್ಲಾ ಸಮಿತಿಯ ಹಾಗೂ ಕುವೆಂಪು ವಿವಿಯ ಆಶ್ರಯದಲ್ಲಿ ನವೆಂಬರ್ 18 ರಂದು ಏರ್ಪಡಿಸಿದ್ದ “ಭಗವದ್ಗೀತೆ ಮತ್ತು ಅಪರಾಧ ನಿಯಂತ್ರಣ “ ಕುರಿತ ವಿಚಾರ ಸಂಕಿರಣದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಯಾವುದೇ ಚರ್ಚಾಸ್ಪದ ವಿಚಾರಗಳ ಬಗ್ಗೆ ಆರಂಭಿಸುವಾಗ ಪೂರ್ವಪಕ್ಷ ,ಉತ್ತರ ಪಕ್ಷ ಎಂಬುದಿರುತ್ತದೆ.
ಅಂತಹ ಸಂರ್ದರ್ಭದಲ್ಲಿ ವಿಷಯ ಮಂಡಿಸಿ ಚರ್ಚೆ ನಡೆಸುವುದು ಭಾರತೀಯರಲ್ಲಿ ರೂಢಿಗತವಾಗಿ ಬಂದಿದೆ. ನಮ್ಮ ಭಾರತೀಯ ಜನ ಸಂಸ್ಕೃತಿ ಶ್ರೇಷ್ಠವಾಗಿರುವುದು ಈ ಕಾರಣದಿಂದ. ಅಷ್ಟೇ ಅಲ್ಲ ನಮ್ಮ ಪೂರ್ವಿಕರು ನಿರೀಶ್ವರವಾದಿಗಳೊಂದಿಗೂ ಚರ್ಚೆ ನಡೆಸಿಕೊಂಡೇ ಬಂದ್ದಿದ್ದಾರೆ. ಎಂದು ಪ್ರೊ.ಶರತ್ ಅನಂತಮೂರ್ತಿ ನುಡಿದರು.
ಇಂತಹ ಗಹನವಾದ ವುಚಾರ ಸಂಕಿರಣದಲ್ಲಿ ಗೀತೆ ಹಾಗೂ ಅಪರಾಧ ನಿಯಂತ್ರಣ, ಮನಃಶಾಸ್ತ್ರ ಇವುಗಳ
ಆಂತರಿಕ ಸಂಬಂಧಗಳ ಬಗ್ಗೆ ಚರ್ಚೆ
ಏರ್ಪಡಿಸುವ ಮುನ್ನ ಸ್ವಾಮೀಜಿಗಳಲ್ಲಿ ನನ್ನ ನಮ್ರ ಸಲಹೆ ಎಂದರೆ ಸಲಹೆಯೆಂದರೆ ನಾವೀಗ ಆಧುನಿಕ ಭಾರತದಲ್ಲಿದ್ದೇವೆ ಆದ್ದರಿಂದ ಗಾಂಧೀಜಿ ಮತ್ತು ಗೀತೆಯ ಬಗ್ಗೆ ಅವರ ಸಮರ್ಥನೆ,
ಮತ್ತು ಅಂಬೇಡ್ಕರ ಹಾಗೂ ಅವರ ಗೀತೆಯ ಸಮರ್ಥನೆ ಈ ಎರಡೂ
ವಿಷಯಗಳ ಬಗ್ಗೆ ಒಂದು ಅವಧಿಯನ್ನ ಇಂತಹ ವಿಚಾರ ಸಂಕಿರಣದಲ್ಲಿ ಮೀಸಲಿಡಬೇಕು
ಎಂದು ಕೋರಿದರು.
ಅದೇ ಸಂದರ್ಭದಲ್ಲಿ ವಿವಿಯ ಆವರಣದ ಹೊರಗಡೆ ವಿಚಾರ ಸಂಕಿರಣದ ವಿರುದ್ಧವೆದ್ದ ಪ್ರತಿಭಟನಾಕಾರರ ಧ್ವನಿಯನ್ನೂ
ಪ್ರಸ್ತಾಪಿಸಿ ಆ ಮಿತ್ರರೊಡನೆ ತಾವು
ಮುಕ್ತವಾಗಿ ಮಾತನಾಡುವುದಾಗಿ
ಹೇಳಿದರು.
ಶ್ರೀಭಗವದ್ಗೀತಾ ಅಭಿಯಾನ ಕೈಗೊಂಡಿರುವ ಸೋಂದಾ ಸ್ವರ್ಣವಲ್ಲಿ ಮಹಾಸಂಸ್ಥಾನದ
ಶ್ರೀ ಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮಿಗಳು ದಿಕ್ಸೂಚಿ ಭಾಷಣ ಮಾಡಿದರು.

ಸಮಾಜದಲ್ಲಿ ವರ್ಷವರ್ಷವೂ ಅಪರಾಧಗಳ ಸಂಖ್ಯೆ ಹೆಚ್ಚುತ್ತಿದೆ.
ಅದರಲಗಲೂ ಮಹಿಳೆಯರ ,ಮಕ್ಕಳ ಮೇಲಿನ ಅತ್ಯಾಚಾರದ ಪ್ರಕರಣಗಳು ಅಧಿಕವಾಗಿವೆ
ಈ ಸಂದರ್ಭದಲ್ಲಿ ಅಪರಾಧಗಳ ಬಗ್ಗೆ ಗೀತೆಯಲ್ಲಿ ಅವುಗಳಿಗೆ ಕಾರಣ, ಪರಿಹಾರಗಳನ್ನ ಕಂಡುಕೊಳ್ಳಬಹುದಾಗಿದೆ.
ಹಮ್ಮಿಕೊಂಡಿರುವ ವಿಚಾರಸಂಕಿರಣದಲ್ಲಿ ತಜ್ಞರು ಈ ಬಗ್ಗೆ ವಿಚಾರದ ಬೆಳಕು ಚೆಲ್ಲಲಿದ್ದಾರೆ . ಕುವೆಂಪು ವಿವಿಯ
ಕುಲಪತಿಗಳಾದ ಶರತ್ ಅನಂತಮೂರ್ತಿ ಅವರು ಯಾವುದೇ ಶರತ್ತು ವಿಧಿಸದೇ ಸಂಕಿರಣಕ್ಕೆ ಅನುವುಮಾಡಿಕೊಟ್ಟಿದ್ದಾರೆ. ಈಗ ಶರತ್ ಕಾಲ ಬಂದಿದೆ ಎಂದು ಮಾರ್ಮಿಕವಾಗಿ ನುಡಿದರು.
ವಿಧಾನ ಪರಿಷತ್ತಿನ ಸದಸ್ಯ ಹಾಗೂ ಭಗವದ್ಗೀತಾ ಅಭಿಯಾನ ಶಿವಮೊಗ್ಗ ಜಿಲ್ಲಾ ಸಮಿತಿಯ ಅಧ್ಯಕ್ಷ ಡಿ.ಎಸ್.ಅರುಣ್ ಮಾತನಾಡಿದರು. ನಾವು ಬೃಹತ್ ಕಟ್ಟಡಗಳನ್ನು ನಿರ್ಮಿಸಿ ಹೆಸರು ಮಾಡಿದ್ದೇವೆ. ಆದರೆ ಅದರ ಜೊತೆಯಲ್ಲೇ ವ್ಯಕ್ತಿತ್ವ ನಿರ್ಮಾಣವನ್ನ ಮರೆತಿದ್ದೇವೆ.
ಪೂಜ್ಯ ಸ್ವಾಮೀಜಿಯವರು ತಿಳಿಸಿದಂತೆ ಭಗವದ್ಗೀತೆಗೂ ನಮ್ಮ ಜೀವನ ಶೈಲಿಗೂ ಸಂಬಂಧವಿದೆಯೆ? ಗೀತೆಯಲ್ಲಿನ ಯಾವ ಅಂಶಗಳು ನಮ್ಮ ಜೀವನಕ್ಕೆ ಬೆಸೆಯುತ್ತವೆ ಎಂಬುದನ್ನ ತಿಳಿಯಬೇಕಿದೆ. ಅದರಿಂದ ಎಲ್ಲರೂ ಒಳ್ಳೆಯವರಾಗುತ್ತೇವೆ ಎಂದು ಡಿ.ಎಸ್ .ಅರುಣ್ ನುಡಿದರು.
Kuvempu University ಸಮಾರಂಭದಲ್ಲಿ ಕುವೆಂಪು ವಿವಿಯ ಹಣಕಾಸು ಅಧಿಕಾರಿ ಹೆಚ್.ಎನ್.ರಮೇಶ್, ಕುಲ ಸಚಿವ ಹೆಚ್.ಎಲ್.ಮಂಜುನಾಥ್,
ಅಭಿಯಾನದ ಕಾರ್ಯಾಧ್ಯಕ್ಷ ಅಶೋಕ ಜಿ.ಭಟ್.
ಉಪಸ್ಥಿತರಿದ್ದರು.
ವಿಚಾರ ಸಂಕಿರಣದಲ್ಲಿ ಭಗವದ್ಗೀತೆ ಮತ್ತು ಮನಃಶಾಸ್ತ್ರ ವಿಷಯದ ಬಗ್ಗೆ
ಶಿವಮೊಗ್ಗದ ಖ್ಯಾತ ಮನೋವೈದ್ಯ
ಡಾ.ಕೆ.ಆರ್.ಶ್ರೀಧರ್ ಮಾತನಾಡಿದರು.ಭೋಜನಾನಂತರದ ಅವಧಿಯಲ್ಲಿ ಬೆಂಗಳೂರು
ಉಚ್ಚ ನ್ಯಾಯಾಲಯದ ಹಿರಿಯ ವಕೀಲರಾದ ವಿಕ್ರಂ ಫಡ್ಕೆ, ಕೆಎಸ್ಆರ್ ಪಿ ಯ ಹಿರಿಯ ಪೊಲೀಸ್ ಅಧಿಕಾರಿ ಡಾ.ರಾಮಕೃಷ್ಣ ಮುದ್ದೆಪಾಲ್ ಮತ್ತು ವಿದ್ವಾಂಸ ರಾಮಚಂದ್ರ ಭಟ್ ,ಕೋಟೆಮನೆ ತಮ್ಮ ವಿದ್ವತ್ ಪೂರ್ಣ ಪ್ರಬಂಧಗಳನ್ನ ಮಂಡಿಸಿದರು. ನಂತರ ಪ್ರಶ್ನೋತ್ತರ ಅವಧಿಯಲ್ಲಿ ವಿದ್ಯಾರ್ಥಿವೃಂದ ಆಸಕ್ತಯಿಂದ ಪಾಲ್ಗೊಂಡಿತ್ತು.
