Friday, December 5, 2025
Friday, December 5, 2025

Bapuji Institute of Hi-Tech Education ವಾಸ್ತವಿಕ ಅರಿವು ಭವಿಷ್ಯದ ನಿರೀಕ್ಷೆ ವಾಣಿಜ್ಯ ಕ್ಷೇತ್ರದವರಿಗೆ ಅವಶ್ಯ,- ಪ್ರೊ.ಎಂ.ಪಿ.ರೂಪಶ್ರೀ

Date:

Bapuji Institute of Hi-Tech Education ವಾಣಿಜ್ಯಶಾಸ್ತ್ರ ಅಧ್ಯಯನ ಮಾಡುವವರಿಗೆ ಔದ್ಯಮಿಕ ಕ್ಷೇತ್ರದ ವಸ್ತುಸ್ಥಿತಿ ಹೇಗಿದೆ ಭವಿಷ್ಯದಲ್ಲಿ ಏನಾಗಬಹುದು ಎಂಬ ಅರಿವು ಅವಶ್ಯ ಇದಕ್ಕಾಗಿ ವಾಣಿಜ್ಯೋತ್ಸವಗಳು ಪೂರಕ ಎಂದು ಧ ರಾ ಮ ವಿಜ್ಞಾನ ಕಾಲೇಜಿನ ಪ್ರಾಚಾರ್ಯೆ ಪ್ರೊ. ರೂಪಶ್ರೀ ಎಂ ಪಿ ಅಭಿಪ್ರಾಯ ಪಟ್ಟರು.

ಲೇಕ್ ವ್ಯೂ ಬಾಪೂಜಿ ಇನ್ಸ್ಟಿಟ್ಯೂಟ್ ಆಫ್ ಹೈಟೆಕ್ ಎಜುಕೇಶನ್ ಕಾಮರ್ಸ್ ವಿಭಾಗದ ವತಿಯಿಂದ ಏರ್ಪಾಡಾಗಿದ್ದ ರಾಜ್ಯಮಟ್ಟದ 7ನೇ ವಾಣಿಜ್ಯೋತ್ಸವ ಉದ್ಘಾಟಿಸಿ ಮಾತನಾಡುತ್ತಾ ಒಂದೇ ಸ್ಥಿತಿಯನ್ನು ವಿಜ್ಞಾನ ರಂಗದವರು ಗಮನಿಸುವುದಕ್ಕೂ ವಾಣಿಜ್ಯ ರಂಗದವರು ಗಮನಿಸುವುದಕ್ಕೂ ವ್ಯತ್ಯಾಸವಿದ್ದು ವಾಣಿಜ್ಯೋದ್ಯಮದ ಭವಿಷ್ಯದ ಚಿಂತನೆಗಳನ್ನು ಮಾದರಿಗಳ ಮೂಲಕ ಪ್ರದರ್ಶಿಸುತ್ತಿರುವುದು ಉಪಯುಕ್ತವಾಗಿದೆ. ಸ್ವತಹ ಮಾಡಬೇಕೆಂಬ ಉತ್ಕಟತೆಗೆ ಮಾದರಿಗಳ ನಿರ್ಮಾಣ ಹಾಗೂ ಭಿತ್ತಿಪತ್ರಗಳ ರಚನೆ ಸ್ಪೂರ್ತಿ ದಾಯಕವಾಗಿದ್ದು ಸ್ಪರ್ಧಾತ್ಮಕ ಪ್ರಪಂಚದಲ್ಲಿ ಬರೀ ಪದವಿ ಸಾಲದು ಪ್ರತಿಭೆಯೂ ಬೇಕು ಎಂದರು.

ಮುಖ್ಯ ಅತಿಥಿಗಳಾಗಿ ಖ್ಯಾತ ಉದ್ಯಮಿ ಶ್ರೀಮತಿ ನೀಲು ಸಿದ್ಧಾರ್ಥ ಮಾತನಾಡಿ ಉತ್ಪಾದನಾ ಕ್ಷೇತ್ರಕ್ಕೆ ವಿಜ್ಞಾನ ತಂತ್ರಜ್ಞಾನ ಬೇಕಾದರೆ ಅವುಗಳ ಮಾರುಕಟ್ಟೆಗೆ ವಾಣಿಜ್ಯ ಕ್ಷೇತ್ರ ಬೇಕು ಎರಡಕ್ಕೂ ನಿರ್ವಹಣಾ ಜ್ಞಾನ ಅವಶ್ಯ, ಸಾಧನೆಗಾಗಿ ವ್ಯಕ್ತಿತ್ವ ಗಟ್ಟಿಗೊಳಿಸಿಕೊಳ್ಳಲು ಸ್ವಾಮಿ ವಿವೇಕಾನಂದರಂತವರ ಸಂದೇಶಗಳನ್ನು ಅಳವಡಿಸಿಕೊಂಡು ಸ್ಪಷ್ಟ ಗುರಿಯೊಂದಿಗೆ ಸೂಕ್ತ ಮಾರ್ಗದಲ್ಲಿ ಸಾಗಬೇಕು ಎಂದರಲ್ಲದೆ ತ್ಯಾಜ್ಯಗಳ ಪುನರ್ಬಳಕೆ ಬಗ್ಗೆ ವಿನೂತನ ಯೋಜನೆಗಳನ್ನು ರೂಪಿಸಬೇಕಿದೆ ಎಂದರು.

ಸ್ವಾಗತ ಕೋರುತ್ತಾ ಪ್ರಾಸ್ತಾವಿಕ ನುಡಿಗಳನಾಡಿದ ಕಾಲೇಜಿನ ನಿರ್ದೇಶಕ ಡಾ. ಸ್ವಾಮಿ ತ್ರಿಭುವನಾನಂದ ಹೆಚ್ ವಿ ಪ್ರಸಕ್ತ ವಾಣಿಜ್ಯೋತ್ಸವದಲ್ಲಿ ಹಿಂದಿನ ಆಚರಣೆಗಳನ್ನು ಪರಾಮರ್ಶಿಸಿ ಹೊಸದನ್ನು ಅಳವಡಿಸಿ ಮಾಡಲಾಗುತ್ತಿದ್ದು ಹಳೆಯ ವಿದ್ಯಾರ್ಥಿಗಳನ್ನು ಹೊಸಬರಿಗೆ ಮಾರ್ಗದರ್ಶಕರಾಗಿ ತೀರ್ಪುಗಾರರಾಗಿ ಆಹ್ವಾನಿ ಸಲಾಗಿದೆ ಎಂದರು.

ಅಧ್ಯಕ್ಷೀಯ ನುಡಿಗಳನಾಡಿದ ಕಾಲೇಜಿನ ಪ್ರಾಂಶುಪಾಲ ಡಾ. ಬಿ ವೀರಪ್ಪನವರು ಮಹಾನಗರಗಳ ಪ್ರತಿಷ್ಠಿತ ವಾಣಿಜ್ಯ ಕಾಲೇಜುಗಳಲ್ಲೂ ಈ ರೀತಿಯ ವಾಣಿಜ್ಯ ಮಾದರಿಗಳ ಮೇಳ ನಡೆಯುತ್ತಿಲ್ಲ ಎಂದರಲ್ಲದೆ ವಾಣಿಜ್ಯೋದ್ಯಮ ಕ್ಷೇತ್ರದ ಬೆಳವಣಿಗೆಗಳ ಜ್ಞಾನಕ್ಕಾಗಿ ಮೊಬೈಲ್ ಮುಂತಾದ ತಂತ್ರಜ್ಞಾನ ಬಳಸುವುದರೊಂದಿಗೆ ಗ್ರಂಥಾಲಯ ಹಾಗೂ ವೃತ್ತ ಪತ್ರಿಕೆಗಳ ಓದನ್ನೂ ಬಳಸಿಕೊಳ್ಳಬೇಕು ಎಂದರು.

Bapuji Institute of Hi-Tech Education ವಿದ್ಯಾರ್ಥಿಗಳಾದ ತರುಣ್ ಹಾಗೂ ಪ್ರಶಾಂತ್ ವಾಣಿಜ್ಯೋತ್ಸವ ಕುರಿತಾಗಿ ನಿರ್ಮಿಸಿದ ವೆಬ್ಸೈಟ್ ಅನ್ನು ಬಿಡುಗಡೆ ಮಾಡಲಾಯಿತು. ಎಂಬಿಎ ಕಾಲೇಜು ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದ ನಿರೂಪಣೆಯನ್ನು ಭೂಮಿಕಾ ಜಿ ಎನ್, ಸಿಂಚನಾ ವಿ ಮಾಡಿದರೆ ಪ್ರಾರ್ಥನೆಯನ್ನು ದೀಕ್ಷಾ ಮತ್ತು ತಂಡದವರು ಹಾಡಿದರು. ಅತಿಥಿಗಳ ಪರಿಚಯವನ್ನು ಕೆ ಜ್ಯೋತಿ, ಸ್ಪೂರ್ತಿ ಎಸ್, ರಾಘವ ಜಿ ಎನ್ ಮಾಡಿದರು. ಪ್ರೊ. ನಾಗರಾಜ್ ಎಂ ಎಸ್ ವಂದನೆಗಳನ್ನು ಸಲ್ಲಿಸಿದರು. ರಾಜ್ಯದ ವಿವಿದೆಡೆಗಳಿಂದ 200 ಕ್ಕೂ ಹೆಚ್ಚು ವಾಣಿಜ್ಯ ವಿದ್ಯಾರ್ಥಿಗಳು ಭಾಗವಹಿಸಿ ವಿನೂತನ ವಾಣಿಜ್ಯ ಮಾದರಿಗಳನ್ನು ಪ್ರದರ್ಶಿಸಿದರು.

ಚಿತ್ರ ಹಾಗೂ ವರದಿ: ಡಾ. ಎಚ್ ಬಿ ಮಂಜುನಾಥ,ಹಿರಿಯ ಪತ್ರಕರ್ತರು-

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...