Shivamogga Skating Association ನವದೆಹಲಿಯಲ್ಲಿ ನಡೆಯುತ್ತಿರುವ ಸಿಬಿಎಸ್‌ಸಿ ಸ್ಕೇಟಿಂಗ್ ರಾಷ್ಟ್ರೀಯ ಪಂದ್ಯಾವಳಿಯಲ್ಲಿ ನಮ್ಮ ಶಿವಮೊಗ್ಗ ಸ್ಕೇಟಿಂಗ್ ಅಸೋಸಿಯೇಷನ್ ನ ಇಬ್ಬರು ಕ್ರೀಡಾಪಟುಗಳು ಬೆಳ್ಳಿ ಹಾಗೂ ಕಂಚಿನ ಪದಕ ಪಡೆಯುವಲ್ಲಿ ಯಶಸ್ವಿಯಾಗಿ, ಸಂಸ್ಥೆಗೆ ಹಾಗೂ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ನಮ್ಮ ಶಿವಮೊಗ್ಗ ಸ್ಕೇಟಿಂಗ್ ಸಂಸ್ಥೆಯ ಅದ್ವಿಕಾ ನಾಯರ್ ಅವರು 1000 ಮೀಟರ್_ಸ್ಕೇಟಿಂಗ್ ಸ್ಪರ್ಧೆಯಲ್ಲಿ ಬೆಳ್ಳಿ ಪಡೆದಿದ್ದಾರೆ.
ಅದ್ವಿಕಾ ಅವರು ಆರ್ ಎಲ್ ರಂಜಿತ್ ಹಾಗೂ ಗಾಯತ್ರಿ ಅವರ ಪುತ್ರಿ.
ಅಂತೆಯೇ ವೇದಾಂಶ್ ಗಣೇಂದ್ರ ಪರಡಿ ಅವರು ಒನ್ ಲ್ಯಾಪ್ ರೋಡ್ ರೇಸ್ ನಲ್ಲಿ ಕಂಚಿನ ಪದಕ ಪಡೆದಿದ್ದಾರೆ. ವೇಧಾಂಶವು ಅವರು ಗಣೇಂದ್ರ ಪರಡಿ ಹಾಗೂ ಶಾಲಿನಿ ಪರಡಿ ಅವರ ಪುತ್ರ.
ಇಬ್ಬರೂ ಕ್ರೀಡಾಪಟುಗಳು ತರಬೇತುದಾರರಾದ ವಿಶ್ವಾಸ್ ಹಾಗೂ ಆತೀಶ್ ಗರಡಿಯಲ್ಲಿ ಕಲಿಯುತ್ತಿದ್ದಾರೆ.
Shivamogga Skating Association ಈ ಕ್ರೀಡಾಪಟುಗಳು ಶಿವಮೊಗ್ಗದ ಪೋದಾರ ವಿದ್ಯಾ ಸಂಸ್ಥೆಯಲ್ಲಿ ವ್ಯಾಸಂಗ ಮಾಡುತ್ತಿದ್ದು, ನಮ್ಮ ಸಂಸ್ಥೆಯಲ್ಲಿ ಕಲಿಯುತ್ತಿದ್ದಾರೆ.
ಜಿಲ್ಲೆಗೆ ಕೀರ್ತಿ ತಂದುಕೊಟ್ಟ ಕ್ರೀಡಾಪಟುಗಳನ್ನು ಸಂಸ್ಥೆಯ ಅಧ್ಯಕ್ಷ ಮೋಹನ್ ಕುಮಾರ್, ಪದಾಧಿಕಾರಿಗಳಾದ ಎಂ ರವಿ, ಗಜೇಂದ್ರ ಸ್ವಾಮಿ, ಕೆ. ನಾಗರಾಜ ನಾಯ್ಡು ಹಾಗೂ ಇತರರು ಅಭಿನಂದಿಸಿದ್ದಾ
