Veterinary College ಗ್ರಾಮೀಣ ಪ್ರದೇಶದ ರೈತರು / ರೈತ ಮಹಿಳೆಯರು / ನಿರುದ್ಯೋಗ ಯುವಕ ಯುವತಿಯರಿಗೆ, ಪಶು ವೈದ್ಯಕೀಯ ಮಹಾವಿದ್ಯಾಲಯ, ಶಿವಮೊಗ್ಗ ಇವರ ವತಿಯಿಂದ ನ. 21 ರಂದು ದೇಶಿ ಮತ್ತು ಮಿಶ್ರ ಹೈನು ತಳಿಗಳ ವೈಜ್ಞಾನಿಕ ಪಾಲನೆ ಮತ್ತು ಪೋಷಣೆ ಕುರಿತಾಗಿ 1 ದಿನದ ಉಚಿತ ತರಬೇತಿ ಕಾರ್ಯಕ್ರಮವನ್ನು ಮಲೆನಾಡು ಗಿಡ್ಡ ತಳಿ ಸಂಶೋದನ ಮತ್ತು ಮಾಹಿತಿ ಕೇಂದ್ರ, ಜಾನುವಾರು ಸಾಕಾಣಿಕ ಸಂಕೀರ್ಣ, ಪಶುವೈದ್ಯಕೀಯ ಮಹಾವಿದ್ಯಾಲಯದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಈ ತರಬೇತಿಯಲ್ಲಿ ದೇಶಿ ಹಸು ತಳಿಗಳು, ಹಸುಗಳ ಕೊಟ್ಟಿಗೆ ನಿರ್ಮಾಣ, ಹಸುಗಳ ಆಹಾರ ನಿರ್ವಹಣೆ, ಸಂತಾನೋತ್ಪತ್ತಿ, ರೋಗಗಳು, ಮಾರುಕಟ್ಟೆ ಮುಂತಾದ ವಿಷಯಗಳ ಬಗ್ಗೆ ಮಾಹಿತಿ ಪ್ರಧಾನ ಮತ್ತು ಪ್ರಾತ್ಯಕ್ಷತೆಯನ್ನು ಹಮ್ಮಿಕೊಳ್ಳಲಾಗುವುದು.
ಆಸಕ್ತಿಯುಳ್ಳವರು ತಮ್ಮ ಹೆಸರನ್ನು ನ. 20 ರೊಳಗೆ ನೋಂದಾಯಿಸಿಕೊಳ್ಳುವುದು. ತರಬೇತಿಯಲ್ಲಿ 25 ಶಿಬಿರಾರ್ಥಿಗಳಿಗೆ ಅವಕಾಶವಿದ್ದು, ಮೊದಲು ಹೆಸರು ನೊಂದಾಯಿಸಿದವರಿಗೆ ಆದ್ಯತೆ ನೀಡಲಾಗುವುದು ಎಂದು ಕಾಲೇಜಿನ ಡೀನ್ ಡಾ. ಎನ್. ಪ್ರಕಾಶ್ ತಿಳಿಸಿದ್ದಾರೆ.
Veterinary College ಹೆಚ್ಚಿನ ಮಾಹಿತಿಗಾಗಿ ಡಾ. ಸತೀಶ್.ಜಿ.ಎಮ್., ಸಹಾಯಕ ಪ್ರಾಧ್ಯಪಕರು, ಜಾನುವಾರು ಸಾಕಾಣಿಕ ಸಂಕೀರ್ಣ, ಪಶುವೈದ್ಯಕೀಯ ಮಹಾ ವಿದ್ಯಾಲಯ, ವಿನೋಬನಗರ, ಶಿವಮೊಗ್ಗ 577204. ಮೊಬೈಲ್: 9448224595, 9916208462, 9035618565 ಇವರನ್ನು ಸಂಪರ್ಕಿಸುವುದು.
