Lions Club Shiralakoppa ಲಯನ್ಸ್ ಕ್ಲಬ್ ಶಿರಾಳಕೊಪ್ಪ, ಶಂಕರ ಕಣ್ಣಿನ ಆಸ್ಪತ್ರೆ ಶಿವಮೊಗ್ಗ, ಸ್ವಾಮಿ ವಿವೇಕಾನಂದ ಶಾಲೆ, ಬಸವೇಶ್ವರ ಪಟ್ಟಣ ಸಹಕಾರ ಬ್ಯಾಂಕ್ ಸಂಯುಕ್ತ ಆಶ್ರಯದಲ್ಲಿ
ವಿಶ್ವ ಮಧುಮೇಹ ದಿನಾಚರಣೆಯನ್ನು ವಿಶೇಷ ವಾಗಿ ಆಚರಿಸಲಾಯಿತು.
ಮಕ್ಕಳ ದಿನಾಚರಣೆ ಪ್ರಯುಕ್ತ ಮಕ್ಕಳೇ ಜಾಗೃತಿ ರಾಯಭಾರಿಗಳಾಗಿ ವಾಕಥಾನ್ ಮೂಲಕ ಮಧುಮೇಹ ಅರಿವು ಮೂಡಿಸುವ ಘೋಷಣೆಯೊಂದಿಗೆ ಬಿತ್ತಿ ಪತ್ರ ವಿತರಿಸಿ ವಿಶಿಷ್ಟ ವಾಗಿ ಎರಡೂ ದಿನಾಚರಣೆ ಮಾಡಲಾಯಿತು.
ವಾಕಥಾನ್ ನಲ್ಲಿ ಶಾಲಾ ವಿದ್ಯಾರ್ಥಿಗಳು, ಶಿಕ್ಷಕರು, ಲಯನ್ ಸದಸ್ಯರು, ಶಂಕರ ಕಣ್ಣಿನ ಆಸ್ಪತ್ರೆ ಸಿಬ್ಬಂದಿ ಉಪಸ್ಥಿತರಿದ್ದರು.
ಆನವಟ್ಟಿ ರಸ್ತೆಯಿಂದ ಬಸವೇಶ್ವರ ಬ್ಯಾಂಕ್ ವರೆಗೆ ಜಾಥಾ ನಡೆಸಿ ನಂತರ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಊರಿನ ಪ್ರಸಿದ್ಧ ವೈದ್ಯ ಡಾ. ಶ್ರೀನಾಥ್ ರವರು ಮಧುಮೇಹದ ಬಗ್ಗೆ ಉಪಯುಕ್ತ ಮಾಹಿತಿಯನ್ನು ನೀಡಿದರು.
Lions Club Shiralakoppa ಲಯನ್ಸ್ ಅಧ್ಯಕ್ಷ ಯೋಗಿರಾಜ್, ಕಾರ್ಯದರ್ಶಿ ರೇಣುಕಯ್ಯ ಸದಸ್ಯರು, ಶಂಕರ ಕಣ್ಣಿನ ಆಸ್ಪತ್ರೆಯ ಅವಿನಾಶ್, ಅರುಣ್, ರವಿಕುಮಾರ್, ಬಸವೇಶ್ವರ ಬ್ಯಾಂಕ್ ನ ಅಧ್ಯಕ್ಷ ನಟರಾಜ್, ನಿರ್ದೇಶಕರು, ಸಿಬ್ಬಂದಿ, ಶಿಕ್ಷಕರು ಹಾಗೂ ಶಾಲಾ ಮಕ್ಕಳು ಸಕ್ರಿಯವಾಗಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.
Lions Club Shiralakoppa ವಿಶ್ವ ಮಧುಮೇಹ ದಿನ ಮಕ್ಕಳಿಂದಲೇ ಜಾಗೃತಿ ವಾಕಥಾನ್. ಶಿರಾಳಕೊಪ್ಪದಲ್ಲಿ ಜನಮನ ಸೆಳೆದ ಚಟುವಟಿಕೆ
Date:
