ಶಿವಮೊಗ್ಗದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಸರಣಿ ಅಪಘಾತಗಳು ಸಂಭವಿಸಿದ್ದು,ಸಿಟಿ ಬಸ್ ಒಂದು ಮೂರು ಬೈಕ್ ಗಳಿಗೆ ಗುದ್ದಿದೆ.
ಶಿವಮೊಗ್ಗ ನಗರದ ರಾಗಿಗುಡ್ಡದಿಂದ ಬಂದ ಸಿಟಿ ಬಸ್ ಅಕ್ಕಪಕ್ಕದಲ್ಲಿ ನಿಂತಿದ್ದ ಜನರ ಮೇಲೂ ಬಸ್ ಹರಿದಿದೆ.
ರಾಗಿಗುಡ್ಡದ ಮೂಲಕ ಬಂದ ನಗರ ಸಾರಿಗೆ ವೀರಭದ್ರೇಶ್ವರ ಖಾಸಗಿ ಬಸ್ ಚಾಲಕನ ನಿರ್ಲಕ್ಷತನದಿಂದ ಅಪಘಾತ ಸಂಭವಿಸಿದೆ ಎನ್ನಲಾಗಿದೆ.
ಪಾರ್ಕಿಂಗ್ ಸ್ಥಳದಲ್ಲಿಯೇ ನಿಂತಿದ್ದ ಮೊಹಮದ್ ಅಹಮದ್ (31) ಘಟನೆಯಲ್ಲಿ ಸಾವನ್ನಪ್ಪಿದ್ದಾನೆ. ತೀವ್ರವಾಗಿ ಗಾಯಗೊಂಡಿದ್ದ ಪರಿಣಾಮ ಅವರನ್ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಚಿಕಿತ್ಸೆ ಫಲಕಾರಿಯಾಗದೆ ಅಹಮದ್ ಸಾವನ್ನಪ್ಪಿದ್ದಾರೆ.
ಘಟನೆಯಲ್ಲಿ ಬಿಹಾರ ಮೂಲದ ಸುರೇಶ್ ರಾವ್ (50) ಎಂಬ ಗಾಯವಾಗಿದ್ದೂ,
ಗಾಯಳುಗಳನ್ನು ನಗರದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮತ್ತೋರ್ವ ಬಾಪೂಜಿ ನಗರದ ನಿವಾಸಿ ರೆಹಮಾನ್ ಎಂಬ 40 ವರ್ಷದ ವ್ಯಕ್ತಿಗೆ ಗಾಯಗಳಾಗಿವೆ.
ಪೂರ್ವ ಸಂಚಾರಿ ಪೊಲೀಸ್ ಠಾಣೆ ವ್ಯಪ್ತಿಯಲ್ಲಿ ಘಟನೆ ಜರುಗಿದೆ.
