S.N.Chennabasappa ಸ್ಮಾರ್ಟ್ ಸಿಟಿ ವತಿಯಿಂದ ಜಾರಿಯಲ್ಲಿರುವ ಲಾಸ್ಟ್ ಮೈಲ್ ಕನೆಕ್ಟಿವಿಟಿ (LMC) ಯೋಜನೆ ಅಡಿಯಲ್ಲಿ, ಶಿವಮೊಗ್ಗ ನಗರದ ಲಕ್ಷ್ಮೀ ಟಾಕೀಸ್ ಇಂದ ಎನ್.ಟಿ. ರಸ್ತೆವರೆಗೆ (Tunga Nagara ಮಾರ್ಗವಾಗಿ) ಸುಮಾರು 7.5 ಕಿ.ಮೀ. ಉದ್ದದ 100 ಅಡಿ ರಸ್ತೆಯ ಓವರ್ಲೇ ಮತ್ತು ಗುಂಡಿಗಳ ಮುಚ್ಚುವ ಕೆಲಸ ವೇಗವಾಗಿ ನಡೆಯುತ್ತಿದ್ದು, ಶಾಸಕರಾದ ಎಸ್ ಎನ್ ಚನ್ನಬಸಪ್ಪ ಅವರು ಎಪಿಎಂಸಿ ಮಾರ್ಕೆಟ್ ಸಮೀಪ ನಡೆಯುತ್ತಿರುವ ಕಾಮಗಾರಿಯನ್ನು ಸ್ಥಳದಲ್ಲಿ ಪರಿಶೀಲಿಸಿ, ರಸ್ತೆಯ ಗುಣಮಟ್ಟ, ಮೂಲಸೌಕರ್ಯಗಳ ಸುರಕ್ಷತೆ, ನಾಗರೀಕರಿಗೆ ತೊಂದರೆ ಆಗದಂತೆ ಕೆಲಸದ ನಿರ್ವಹಣೆ, ಇವುಗಳ ಬಗ್ಗೆ ಗುತ್ತಿಗೆದಾರರಿಗೆ ಸ್ಪಷ್ಟ ಸೂಚನೆ ನೀಡಿದರು.
S.N.Chennabasappa ನಗರದ ಸಂಚಾರ ವ್ಯವಸ್ಥೆಯನ್ನು ಸುಗಮಗೊಳಿಸಿ, ದೈನಂದಿನ ಪ್ರಯಾಣಕ್ಕೆ ಹೆಚ್ಚಿನ ಅನುಕೂಲತೆ ಒದಗಿಸುವುದು ಈ ಯೋಜನೆಯ ಮುಖ್ಯ ಗುರಿ. ಆದ್ದರಿಂದ ಉತ್ತಮ ಗುಣಮಟ್ಟವನ್ನು ಕಟ್ಟುನಿಟ್ಟಾಗಿ ಪಾಲಿಸಿ, ನಿಗದಿತ ಅವಧಿಯಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಲು ಗುತ್ತಿಗೆದಾರರಿಗೆ ತಾಕೀತು ಮಾಡಿದರು.
