Lion’s Club ಜಿ.ಪಂ. ತಾ.ಪಂ. ಜಿಲ್ಲಾ ಆರೋಗ್ಯಾಧಿಕಾರಿ ಕಚೇರಿ, ಜಿಲ್ಲಾ ಅಂಧತ್ವ ನಿಯಂತ್ರಣ ಸಂಘ, ಸೊರಬ ಲಯನ್ಸ್ ಕ್ಲಬ್ ಹಾಗೂ ಸಾಗರ ಲಯನ್ಸ್ ಕ್ಲಬ್ ಹಾಗೂ ಶ್ರೀಗಂಧ ಸಂಸ್ಥೆ ಆಶ್ರಯದಲ್ಲಿ ನಿನ್ನೆ ಉಚಿತ ನೇತ್ರ ತಪಾಸಣೆ ಮತ್ತು ಉಚಿತವಾಗಿ ಕನ್ನಡಕ ವಿತರಣೆ ಕರ‍್ಯಕ್ರಮವನ್ನು ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ನಡೆಯಿತು.
ಶಿಬಿರದಲ್ಲಿ ಸುಮಾರು ೧೫೮ಜನ ನೇತ್ರ ತಪಾಸಣೆಯಲ್ಲಿ ಭಾಗವಹಿ ಸಿದ್ದರು. ನೇತ್ರ ತಜ್ಞರಿಂದ ಸಮಗ್ರ ದೃಷ್ಟಿ ತಪಾಸಣೆ ನಡೆಯಿತು. ಅದರಲ್ಲಿ ೫೪ಜನರಿಗೆ ಶಸ್ತçಚಿಕಿತ್ಸೆಗೆ ಸೂಚಿಸ ಲಾಯಿತು. ಈ ಸಂಧರ್ಭದಲ್ಲಿ ಅವಶ್ಯಕತೆ ಇದ್ದ ೬೫ಜನರಿಗೆ ಉಚಿತ ಕನ್ನಡಕಗಳನ್ನು ವಿತರಿಸಲಾಯಿತು.
Lion’s Club ಈ ಸಂದರ್ಭದಲ್ಲಿ ಮಾತನಾಡಿದ ಶಿವಮೊಜಗ್ಗ ಆಪ್ಟಿಕಲ್ಸ್ನ ಮಾಲೀ ಕರು ಹಾಗೂ ಜಿಲ್ಲಾ ಸಂಯೋಜಕ ರಾದ ಎನ್.ಟಿ. ನಂದೀಶ್ ಅವರು ಮಾತನಾಡಿ, ಕಣ್ಣಿನ ಸಮಸ್ಯೆ ಇರುವ ಸಾವಿರಾರು ಜನರಿಗೆ ಉಚಿತ ತಪಾಸಣೆ ಹಾಗೂ ಉಚಿತವಾಗಿ ಕನ್ನಡಕಗಳನ್ನು ನೀಡುತ್ತ ಬಂದಿರುವ ಲಯನ್ಸ್ ಕ್ಲಬ್ ಕಾರ್ಯಕ್ರಮಗಳು ನಿಜಕ್ಕೂ ಶ್ಲಾಘನೀಯ ಎಂದರು.
ಈ ವರ್ಷ ಲಯನ್ಸ್ನಿಂದ ೩೧೭ಅಡಿಯಲ್ಲಿ ೩ಸಾವಿರಕ್ಕೂ ಹೆಚ್ಚು ಉಚಿತ ಕನ್ನಡಕಗಳನ್ನು ವಿತರಿಸುವ ಗುರಿ ಹೊಂದಲಾಗಿದೆ ಎಂದರು.
ಜಿಲ್ಲಾ ಗವರ್ನರ್ ಡಾ. ಎಂ.ಕೆ. ಭಟ್ , ಅಧ್ಯಕ್ಷ ಮಹಾಬಲೆಶ್ ಕೆ.ಬಿ. ಅವರು ಶಿಬಿರ ಉದ್ಘಾಟಿಸಿ ಸಮಾಜ ಮುಖಿ ಕಾರ್ಯಗಳಲ್ಲಿ ನೀಡುತ್ತಿರುವ ಸೇವೆಗಳನ್ನು ಪ್ರಶಂಸಿಸಿದರು. ಸವಿತಾ ಭಟ್, ಪಿಡಿಜಿ ಡಾ. ಎಂ.ಕೆ. ಭಟ್, ಸುಬ್ರಹ್ಮಣ್ಯ, ಭಾರತೀ ಹನುಮಂತಪ್ಪ, ಸರಸ್ವತಿ ನಾಗರಾಜ್ ಹಾಗೂ ಮೇಜರ್ ನಾಗರಾಜ್ ಇದ್ದರು.
Lion’s Club ಉಚಿತ ನೇತ್ರ ತಪಾಸಣೆ & ಕನ್ನಡಕ ವಿತರಿಸುವ ಲಯನ್ಸ್ ಕ್ಲಬ್ ಸೇವೆ ಶ್ಲಾಘನೀಯ- ಎನ್.ಟಿ.ನಂದೀಶ್.
Date:
