Sharavati Pumped Storage Project ಅಕ್ಟೋಬರ್ 27 2025ರಂದು ದೆಹಲಿಯಲ್ಲಿ ನಡೆದ FAC (ಫಾರೆಸ್ಟ್ ಅಡ್ವೈಸರಿ ಕಮಿಟಿ) ಸಭೆಯಲ್ಲಿ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯನ್ನು ರದ್ದು ಪಡಿಸಿಲ್ಲ. ಹಲವು ವಿಷಯಗಳಿಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಯನ್ನು ಮತ್ತು ವಿವರಗಳನ್ನು ಹಾಗೂ ಸಮಜಾಯಿಷಿಗಳನ್ನು ಕೇಳಿದ್ದಾರೆ ಅಷ್ಟೇ. ಕೆಪಿಸಿಎಲ್ ಮತ್ತು ಕರ್ನಾಟಕ ಸರ್ಕಾರ ಸುಳ್ಳುಗಳ ಪ್ರಮಾಣ ಕಡಿಮೆ ಮಾಡಿ; ಮತ್ತೊಂದು ವರದಿ ಸಲ್ಲಿಸಲಿದೆ. ಬಹುಶ ಮುಂದಿನ ಸಭೆಯಲ್ಲಿ FAC ಇದನ್ನು ಒಪ್ಪಿಕೊಂಡು ಅನುಮತಿ ನೀಡಬಹುದು. ಇದು ಪೂರ್ವ ನಿಯೋಜಿತ ತಂತ್ರ. ನಾನು ಸತ್ತ ಹಾಗೆ ಮಾಡುತ್ತೀನಿ; ನೀನು ಅತ್ತ ಹಾಗೆ ಮಾಡು. FACಗೆ ಎಲ್ಲಾ ಮಾಹಿತಿ ಇದೆ. ಬಹಳ ಸ್ಪಷ್ಟವಾಗಿ ಈ ಯೋಜನೆಯನ್ನು ರದ್ದು ಪಡಿಸಲು/ ಪರವಾನಿಗೆಯನ್ನು ನಿರಾಕರಿಸಲು ಬಹಳ ಸಮರ್ಥ ಕಾರಣಗಳು ಅವರ ಹತ್ತಿರವೇ ಇದೆ (ಈ ಕುರಿತು ಜನ ಸಂಗ್ರಾಮ ಪರಿಷತ್ ವತಿಯಿಂದ ದಾಖಲೆ ಸಮೇತ ಪತ್ರ ವ್ಯವಹಾರ ನಡೆಸಿದ್ದು ವೇಧ್ಯ). ಈಗ ತಡೆ ನೀಡಿರುವುದು; ಅನುಮತಿ ನೀಡುವ ಹುನ್ನಾರದ ಭಾಗದ ತಂತ್ರ. ಇದನ್ನು ಕೆಲ ಮಾಧ್ಯಮಗಳು ತಪ್ಪಾಗಿ ಬಿಂಬಿಸುತ್ತಿವೆ. Sharavati Pumped Storage Project ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ ಕೇಂದ್ರ ಸರ್ಕಾರದ ತಡೆ; ಹೋರಾಟಗಾರರಿಗೆ ದೊರಕಿದ ಜಯ; ಕರ್ನಾಟಕ ಸರ್ಕಾರಕ್ಕೆ ಹಿನ್ನಡೆ; ಪಶ್ಚಿಮ ಘಟ್ಟ ಸುರಕ್ಷಿತ ಇತ್ಯಾದಿ. ಇದನ್ನು ದಯವಿಟ್ಟು ಯಾರೂ ನಂಬಬೇಡಿ. ಈ ತಡೆ ಎಂಬ ಶಬ್ದದ ಅರ್ಥವೇ ಮುಂದೆ ನಡೆ ಎಂಬುದಾಗಿದೆ (ಯೋಜನೆಗೆ ಹಸಿರು ನಿಶಾನೆ ತೋರಿಸುವ ಭಾಗವಿದು). ದಯವಿಟ್ಟು ಅರ್ಥ ಮಾಡಿಕೊಳ್ಳಿ
ನಿಮ್ಮವ.
ಅಖಿಲೇಶ್ ಚಿಪ್ಪಳಿ
Sharavati Pumped Storage Project ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ರದ್ದಾಗಿಲ್ಲ- ಅಖಿಲೇಶ್ ಚಿಪ್ಪಳಿ
Date:
